ಹೈದರಾಬಾದ್​:ಹೆಂಡತಿ ಮನೆ ಬಿಟ್ಟು ತವರು ಮನೆಗೆ ಹೋಗಿ ಕುಳಿತರೆ ಅವರನ್ನು ವಾಪಾಸು ಕರೆಸಿಕೊಳ್ಳಲು ಗಂಡ ಪ್ರಯತ್ನಿಸುವುದು ಸಾಮಾನ್ಯ. ಅದೇ ರೀತಿ ತವರಿಗೆ ಹೋಗಿ ಕುಳಿತಿದ್ದ ಹೆಂಡತಿಯರನ್ನು ಮನೆಗೆ ವಾಪಸು ಕರೆಸಿಕೊಳ್ಳಲು ಗಂಡಂದಿರುವ ಮಾಡಿರುವ ನಾಟಕ ದುರಂತ ಅಂತ್ಯ ಕಂಡಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗುಡಾ ಗ್ರಾಮದ ನಿವಾಸಿಗಳಾದ ಪುಲಗೊಲ್ಲಾ ಜಗನ್​ (34) ಪತ್ನಿ ಆರು ತಿಂಗಳ ಹಿಂದೆ ತವರು ಮನೆಗೆ ಹೋದವಳು ವಾಪಾಸು ಬಂದಿರಲಿಲ್ಲವಂತೆ. ಹಾಗೆಯೇ ಆತನ ಸ್ನೇಹಿತ ಚಕಾಲಿ ಶ್ರೀನು (35) ಪತ್ನಿಯೂ ಇತ್ತೀಚೆಗೆ ತವರು ಮನೆಗೆ ಹೋದವಳು ವಾಪಸು ಬಂದೇ ಇಲ್ಲ. ಅವರಿಬ್ಬರನ್ನು ಮನೆಗೆ ಕರೆಸಿಕೊಳ್ಳಲು ಸ್ನೇಹಿತರು ಪ್ಲಾನ್​ ಒಂದನ್ನು ಮಾಡಿದ್ದಾರೆ.
ಮೇ 26ರಂದು ಬರೋಬ್ಬರಿ ಆರು ಬಿಯರ್​ ಬಾಟೆಲ್​ಗಳನ್ನು ಹಿಡಿದು ಹಳ್ಳಿಯಿಂದ ಹೊರ ನಡೆದಿದ್ದಾರೆ. ಕಂಠ ಪೂರ್ತಿ ಕುಡಿದು ಆತ್ಮಹತ್ಯೆ ನಾಟಕವಾಡಲು ಆರಂಭಿಸಿದ್ದಾರೆ. ಆತ್ಮಹತ್ಯೆ ಪ್ರಯತ್ನದ ವಿಡಿಯೋವನ್ನು ಹೆಂಡತಿಗೆ ಕಳುಹಿಸುವುದು ಅವರ ಪ್ಲ್ಯಾನ್​ ಆಗಿತ್ತು. ಅದರಂತೆ ಮೊದಲಿಗೆ ಜಗನ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ನಾಟಕ ಆರಂಭಿಸಿದ್ದಾನೆ. ಅದನ್ನು ಶ್ರೀನು ವಿಡಿಯೋ ಮಾಡಿದ್ದಾನೆ. ಅವರ ಪ್ಲ್ಯಾನ್​ ಪ್ರಕಾರ ಶ್ರೀನು ಜಗನ್​ನನ್ನು ರಕ್ಷಿಸಬೇಕಿತ್ತು. ಆದರೆ ಕುಡಿದ ಮತ್ತಿನಲ್ಲಿ ವಿಡಿಯೋ ಮಾಡುತ್ತಿದ್ದ ಶ್ರೀನು ಸ್ವಲ್ಪ ತಡಮಾಡಿದ್ದರಿಂದಾಗಿ ಜಗನ್​ ಕೋಮಾಕ್ಕೆ ಹೋಗುವಂತಾಗಿದೆ.
ಅಂದ ಹಾಗೆ ಈ ವಿಡಿಯೋ ಅವರ ಕುಟುಂಬಗಳಿಗೆ ತಲುಪಿದೆ. ಅದನ್ನು ನೋಡಿದ ಜಗನ್​ ತಂದೆ ಶ್ರೀನು ಮೇಲೆ ಆರೋಪವೊಂದನ್ನು ಮಾಡಿದ್ದಾರೆ. ನನ್ನ ಮಗನಿಗೆ ಶ್ರೀನು ಜಾತಿ ಹೆಸರಿನಲ್ಲಿ ನಿಂದಿಸಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. (ಏಜೆನ್ಸೀಸ್​)
ರಾಜ್ಯದಲ್ಲಿ ಈವರೆಗೆ 39 ಮಂದಿ ಬ್ಲ್ಯಾಕ್​ ಫಂಗಸ್​ಗೆ ಬಲಿ; ಸಾವಿರಕ್ಕೂ ಹೆಚ್ಚಾಗಿದೆ ಪ್ರಕರಣ

ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eight =
Remember me
