ಹೈದರಾಬಾದ್​:ನಿಯಂತ್ರಣ ಕಳೆದುಕೊಂಡ ಬೈಕ್​ ಡಿವೈಡರ್​ ಡಿಕ್ಕಿ ಹೊಡೆದು ಇಬ್ಬರು ಇಂಜಿನಿಯರ್​ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಘಟನೆ ಹೈದರಾಬಾದ್​ನ ಕುತುಬುಲ್ಲಾಪುರ ಬಳಿಯ​ ಸುರಾರಾಮ್​ನಲ್ಲಿ ನಡೆದಿದೆ.
ಮೃತರನ್ನು ನಿಜಾಮಬಾದ್​ನ ಕೊಡಿಗಿರಿ ಮಂಡಲದ ಅನಂತ ವಿಶಾಲ್ (21) ಮತ್ತು ಮಂಚೇರಿಯಲ್​ನ ಗೊಪರಾಜು ಸುಜಿತ್​ ಕುಮಾರ್​ (23) ಎಂದು ಗುರುತಿಸಲಾಗಿದೆ. ಇಬ್ಬರು ಅಂತಿಮ ವರ್ಷದ ಇಂಜಿನಿಯರ್​ ವಿದ್ಯಾರ್ಥಿಗಳಾಗಿದ್ದರು. ಗೋಪರಾಜು ಡಿಸೆಂಬರ್​ 3ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಉಡುಗೊರೆಯಾಗಿ ಬೈಕ್​ ಕೊಡಿಸಿದ್ದರು. ಅದೇ ಬೈಕ್​ನಿಂದ ಇದೀಗ ಪ್ರಾಣ ಹೋಗಿದೆ.
ಇದನ್ನೂ ಓದಿ:ಕಾರಿನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್​ರೇಪ್: ಇಬ್ಬರ ಬಂಧನ, ಆರೋಪಿ ಹೆಸರು ಬಹಿರಂಗಪಡಿಸದ ಪೊಲೀಸರು
ಇಬ್ಬರು ಸಹ ಮೇಡ್ಚಲ್​ನ ಮೈಸಮ್ಮಗುಡ್ಡದ ಸೆಂಟ್​ ಪೀಟರ್ಸ್​ ಇಂಜಿನಿಯರ್​ ಕಾಲೇಜು ವಿದ್ಯಾರ್ಥಿಗಳು. ಕಾಲೇಜು ಸಮೀಪದ ಮಹಾಲಕ್ಷ್ಮೀ ಬಾಯ್ಸ್​ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದರು. ಸುರಾರಾಮ್​ನ ಕಟ್ಟಾ ಮೈಸಮ್ಮ ದೇವಸ್ಥಾನದ ಬಳಿ ಯಮಹಾ ಬೈಕ್​ ಅಪಘಾತವಾಗಿರುವ ಬಗ್ಗೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ದುಂಡಿಗಲ್​ ಕಂಟ್ರೋಲ್​ ರೂಮ್​ಗೆ ಕರೆ ಬರುತ್ತದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರು ಸಹ ಗಂಭೀರ ಗಾಯದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲ್ಮೆಟ್​ ಧರಿಸದೇ ಇದ್ದದ್ದು ಸಾವಿಗೆ ಕಾರಣವಾಗಿದೆ.
ಇಬ್ಬರು ಗುರುತನ್ನು ಪತ್ತೆಹಚ್ಚಲು ಪೊಲೀಸರು ಗುರುತಿನ ಚೀಟಿಗಾಗಿ ಹುಡುಕಾಡಿದಾಗ ಕೆಂಪು ಬಣ್ಣದ ಪ್ಯಾಕ್​ ಒಂದು ಪತ್ತೆಯಾಗಿದೆ. ತೆರೆದು ನೋಡಿದಾಗ ಅದರಲ್ಲಿ ಒಂದು ಕೆ.ಜಿ ಗಾಂಜಾ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಇಬ್ಬರು ಹಾಸ್ಟೆಲ್​ನಿಂದ ಬರುತ್ತಿದ್ದರು.
ಇದನ್ನೂ ಓದಿ:ಫೋಟೋದಲ್ಲಿ ಮಕ್ಕಳ ಚಿತ್ರ ಬದಲಿಗೆ 666 ನಂ. ಗೋಚರ: ಅರ್ಥ ತಿಳಿದ ತಾಯಿಯ ಎದೆಯಲ್ಲಿ ಢವಢವ!
ಮೃತರು ಗಾಂಜಾ ಸೇವಿಸಿದ್ದರಾ ಎಂದು ತಿಳಿಯಲು ರಕ್ತದ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅಪರಿಚಿತರಿಂದ ಗಾಂಜಾ ಪಡೆದು ಮರಳಿ ಹಾಸ್ಟೆಲ್​ಗೆ ಬರುವಾಗ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಾಂಜಾ ಮೂಲ ಯಾವುದು ಎಂಬ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಮದ್ವೆಯಾಗಿ ವರ್ಷ ಕಳೆಯುವಷ್ಟರಲ್ಲಿ ಪತಿಯ ಹತ್ಯೆ: ಮಾಜಿ ಬಾಕ್ಸರ್ ಬಂಧನಕ್ಕೆ ಕಾರಣವಾಯ್ತು ಆ ಒಂದು ವಸ್ತು!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
