ಉತ್ತರಪ್ರದೇಶ:ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನೀರು ಕೇಳಿದ ವಿಕಲಾಂಗ ವ್ಯಕ್ತಿಗೆ ಪ್ರಾಂತೀಯ ರಕ್ಷಕ ದಳದ (PRD) ಇಬ್ಬರು ಭದ್ರತಾ ಸಿಬ್ಬಂದಿ ನಿಂದಿಸಿ, ಮನಬಂದಂತೆ ಥಳಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:21 ಲಕ್ಷ ರೂ. ಮೌಲ್ಯದ ಟೊಮ್ಯಾಟೋ ತುಂಬಿಕೊಂಡು ಕೋಲಾರದಿಂದ ಹೊರಟಿದ್ದ ಲಾರಿ ನಾಪತ್ತೆ, ದೂರು ದಾಖಲು
ದೃಶ್ಯದಲ್ಲಿ ಕಾಣುವಂತೆ ಸಚಿನ್ ಸಿಂಗ್ ಎಂಬ ವಿಕಲಾಂಗ ವ್ಯಕ್ತಿ, ತಮ್ಮ ತ್ರಿಚಕ್ರ ವಾಹನದ ಮೇಲೆ ಕುಳಿತ್ತಿದ್ದಾರೆ. ಕರ್ತವ್ಯದಲ್ಲಿದ್ದ ಇಬ್ಬರು ಪಿಆರ್​ಡಿ ಭದ್ರತಾ ಸಿಬ್ಬಂದಿಗಳು ಅವರೊಂದಿಗೆ ಮಾತಿನ ಚಕಮಕಿ ನಡೆಸಿ, ಮನಬಂದಂತೆ ಥಳಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಮಾರ್ ಅವರು, ಮೂವರು ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಇಬ್ಬರು ಸಿಬ್ಬಂದಿಗಳನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳನ್ನು ರಾಜೇಂದ್ರ ಮಣಿ ಮತ್ತು ಅಭಿಷೇಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
In UP's Deoria, a purported video of a specially-abled man on a tricycle being assaulted by two men identified as Prantiya Rakshak Dal (PRD) jawans has surfaced on social media.pic.twitter.com/grJgsp195G
— Piyush Rai (@Benarasiyaa)July 30, 2023

ಘಟನೆಯ ವಿವರ: “ಶನಿವಾರ ರಾತ್ರಿ ನಾನು ಊಟ ಮುಗಿಸಿ ಮನೆಗೆ ಹಿಂದಿರುಗುವಾಗ, ರಸ್ತೆಯಲ್ಲಿ ಆಮೆ ನೋಡಿದೆ. ಅದನ್ನು ಎತ್ತಿಕೊಂಡು ದುಗ್ಧೇಶ್ವರನಾಥ ದೇವಸ್ಥಾನದ ಬಳಿಯ ಕೊಳಕ್ಕೆ ಬಿಟ್ಟು ಬಂದೆ. ಕೊಳದಿಂದ ಮನೆಗೆ ಹೋಗುವ ದಾರಿ ಮಧ್ಯೆ ಇಬ್ಬರು ಪಿಆರ್‌ಡಿ ಸಿಬ್ಬಂದಿಗಳು ಕರ್ತವ್ಯದಲ್ಲಿರುವುದನ್ನು ನೋಡಿದೆ. ಆಮೆಯನ್ನು ಹಿಡಿದ ನಂತರ ನನ್ನ ಕೈ ವಾಸನೆಯಿಂದ ಕೂಡಿತ್ತು. ಹಾಗಾಗಿ ಅವರ ಬಳಿ ಕೈ ತೊಳೆಯಲು ನೀರು ಕೇಳಿದೆ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಬ್ಬಂದಿಗಳು, “ನನ್ನನ್ನು ಜೈಲಿಗೆ ಹಾಕುವುದಾಗಿ, ಹೊಡೆಯುವುದಾಗಿ ಬೆದರಿಕೆ ಹಾಕಿದರು. ನನ್ನ ತ್ರಿಚಕ್ರ ವಾಹನದ ಕೀಯನ್ನೂ ಕೂಡ ಕಸಿದುಕೊಂಡರು. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಥಳಿಸಿದರು” ಎಂದು ಸಚಿನ್ ಹೇಳಿದ್ದಾರೆ. ಈ ಘಟನೆಯನ್ನು ಅನಾಮಧೇಯ ವ್ಯಕ್ತಿಯೊಬ್ಬರು ದೂರದ ಮಹಡಿಯಿಂದ ದೃಶ್ಯವನ್ನು ಸೆರೆಹಿಡಿದಿದ್ದಾರೆ,(ಏಜೆನ್ಸೀಸ್).
‘ಕಾವಾಲಾ’ ಹಿಟ್​ ನಂತರ ‘ಹುಕುಂ’ ಸಾಂಗ್​ ರಿಲೀಸ್​ ಮಾಡಿದ ವಿಕ್ಟರಿ ವೆಂಕಟೇಶ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
