ಶ್ರೀನಗರ:ಜೈಷ್​ ಏ ಮೊಹಮ್ಮದ್​ (ಜೆಇಎಂ) ಉಗ್ರರ ಸಹಚರರಿಬ್ಬರನ್ನು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಂಧಿತರನ್ನು ಬಿಲಾಲ್ ಅಹಮದ್ ಚೋಪಾನ್​ ಮತ್ತು ಬಷೀರ್​ ಶೇಖ್​ ಎಂದು ಗುರುತಿಸಲಾಗಿದೆ.
ಬಿಲಾಲ್​ ವಾಗದ್ ತ್ರಾಲ್​ನ ನಿವಾಸಿಯಾದರೆ, ಬಷೀರ್​ ಚಟ್ಲಾಮ್​ ಪ್ಯಾಂಪೋರ್​ ನಿವಾಸಿ. ದಕ್ಷಿಣ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಈ ಇಬ್ಬರ ಇರುವಿಕೆಯ ಖಚಿತ ಮಾಹಿತಿ ಆಧರಿಸಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಅನಿವಾರ್ಯವಾಗಿ ಶರಣಾದರು.
ಇದನ್ನೂ ಓದಿ :ಚೆನ್ನೈ ರಸ್ತೆಗಿಳಿದು ಬೆಂಬಲಿಗರಿಗೆ ಸರ್​ಪ್ರೈಸ್ ಕೊಟ್ಟ ಅಮಿತ್ ಷಾ
ಪ್ರಾಥಮಿಕ ಮಾಹಿತಿ ಪ್ರಕಾರ, ಬಂಧಿತರು ಉಗ್ರರಿಗೆ ಸರಕು ಸಾಗಣೆ ನೆರವು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸರಬರಾಜು, ಅವರಿಗೆ ವಸತಿ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದ್ದರು. ಈ ಎಲ್ಲ ಕಾರ್ಯಾಚರಣೆ ಜಿಲ್ಲೆಯ ಪ್ಯಾಂಪೋರ್ ಮತ್ತು ತ್ರಾಲ್ ಪ್ರದೇಶಕ್ಕೆ ಸೀಮಿತವಾಗಿ ನಡೆಯುತ್ತಿತ್ತು. ಈ ಕುರಿತು ಇನ್ನಷ್ಟು ವಿಚಾರಣೆ ನಡೆಯುತ್ತಿದ್ದು, ಭದ್ರತಾ ಪಡೆಗಳು ಮಾಹಿತಿ ಕಲೆಹಾಕುತ್ತಿವೆ. (ಏಜೆನ್ಸೀಸ್)
ಎರಡನೇ ದಿನವೂ ಏರಿತು ಪೆಟ್ರೋಲ್​, ಡೀಸೆಲ್​ ಬೆಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
