ದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದನ್ನು ಮಾಡಿದ್ದ ಹಿನ್ನೆಲೆಯಲ್ಲಿ ಪತ್ರಕರ್ತೆಯರಿಬ್ಬರ ಬಂಧನವಾಗಿದೆ. ಸಮೃದ್ಧಿ ಕೆ. ಸಕುನಿಯಾ, ಸ್ವರ್ಣ ಝಾ ಬಂಧಿತ ಪತ್ರಕರ್ತೆಯರು. ತ್ರಿಪುರ ಪೊಲೀಸರು ಭಾನುವಾರವೇ ಇವರನ್ನು ವಶಕ್ಕೆ ಪಡೆದಿದ್ದು, ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಫಾರ್ಮ್​ಹೌಸ್​ನಲ್ಲಿ ಉನ್ಮತ್ತ ಯುವಕ-ಯುವತಿಯರು; ಬರ್ತ್​ಡೇ ನೆಪದಲ್ಲಿ ಮದ್ಯದ ಪಾರ್ಟಿ
ತ್ರಿಪುರದ ಗೋಮತಿ ಜಿಲ್ಲೆಯ ಉದಯಪುರದ ಕಕ್ರಬಾನ್ ಎಂಬಲ್ಲಿಗೆ ಗುರುವಾರ ವರದಿಗೆ ತೆರಳಿದ್ದ ಈ ಪತ್ರಕರ್ತೆಯರು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್​ ಇವರ ಬಂಧನಕ್ಕೆ ಕಾರಣವಾಗಿದೆ. ಸದ್ಯ ತ್ರಿಪುರದ ಗೋಮತಿಯಲ್ಲಿನ ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ:ಆರು ತಿಂಗಳಲ್ಲಿ 400 ಜನರಿಂದ ಅತ್ಯಾಚಾರ; ಪೊಲೀಸರೂ ಭಾಗಿ!
ಗೋಮತಿ ಜಿಲ್ಲೆಯ ಮಸೀದಿಯೊಂದಕ್ಕೆ ಬೆಂಕಿ ತಗುಲಿದೆ, ಅಲ್ಲಿದ್ದ ಕುರಾನ್​ ಪ್ರತಿಗೆ ಹಾನಿಯಾಗಿದೆ ಎಂದು ಈ ಪತ್ರಕರ್ತೆಯರು ಪೋಸ್ಟ್ ಮಾಡಿದ್ದರು. ಆದರೆ ಇದರಲ್ಲಿ ಸತ್ಯಾಂಶವಿಲ್ಲ ಹಾಗೂ ಇದರಿಂದ ಕೋಮುಸೌಹಾರ್ದಕ್ಕೆ ಹಾನಿಯಾದ್ದರಿಂದ ಬಂಧಿಸಲಾಗಿದೆ ಎಂದು ತ್ರಿಪುರ ಪೊಲೀಸ್ ಅಧಿಕಾರಿ ವಿ.ಎಸ್​. ಯಾದವ್​ ತಿಳಿಸಿದ್ದಾರೆ.
ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..
ಸನ್ಮಾನಕ್ಕೆಂದು ತಂದ ಬಾಳೆಹಣ್ಣನ್ನೇ ತಿಂದ ಸಿದ್ದರಾಮಯ್ಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − three =
Remember me
