ಆಗ್ರಾ:ವಿಶ್ವ ಪ್ರಸಿದ್ದ ತಾಜ್​ಮಹಲ್​ ಶಹಜಹಾನ್​ ತನ್ನ ಪತ್ನಿಯ ಮೇಲಿನ ಪ್ರೀತಿಯಿಂದ ಕಟ್ಟಿಸಿದ ಸ್ಮಾರಕವಲ್ಲ. ಬದಲಾಗಿ ಅದು ಶಿವನ ದೇವಸ್ಥಾನ ತೇಜೋಮಹಲ್ ಎಂದು ಈ ಹಿಂದಿನಿಂದಲೂ ಹಿಂದೂ ಸಂಘಟನೆಗಳು ಆರೋಪಿಸುತ್ತಾ ಬಂದಿದೆ. ತಾಜ್​ಮಹಲ್​ಗೆ ಮರುನಾಮಕರಣ ಮಾಡಬೇಕೆಂದು ನ್ಯಾಯಾಲಯಗಳಲ್ಲಿ ಅರ್ಜಿಗಳೂ ದಾಖಲಾಗಿವೆ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಅನೇಕ ಬಾರಿ ಈ ವಿಷಯ ಚರ್ಚೆಯಾಗಿ ಸುದ್ದಿಗಳು ವೈರಲ್ ಆಗಿತ್ತು.
ಇದೀಗ ಇಂದು (ಆಗಸ್ಟ್ 03) ತಾಜ್​ಮಹಲ್​ನೊಳಗಡೆ ಗಂಗಾ ನದಿ ನೀರಿನ ತೀರ್ಥ ಪ್ರೋಕ್ಷಣೆ ಮಾಡಿದ್ದಾರೆ. ಈ ಇಬ್ಬರು ವ್ಯಕ್ತಿಗಳನ್ನು ಉತ್ತರಪ್ರದೇಶದ ತಾಜ್​ಗಂಜ್ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರು ಎಂದು ಹೇಳಿಕೊಂಡಿದ್ದಾರೆ.
ತಾಜ್​ಮಹಲ್​ ಶಹಜಹಾನ್​ ಕಟ್ಟಿಸಿದ ಸ್ಮಾರಕವಲ್ಲ. ಇದು ಶಿವನ ಕ್ಷೇತ್ರವಾಗಿರುವುದರಿಂದ ಈ ಶ್ರಾವಣ ಮಾಸದ ಶನಿವಾರದ ದಿನ ನಾವು ಇಲ್ಲಿ ಪವಿತ್ರ ತೀರ್ಥ ಸಿಂಪಡಿಸಿದ್ದೇವೆ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
इन बेवकुफो को कोई समझाओ कीं सावन में गंगा जल शिवलिंग पर चढ़ाया जाता है ना कीं कब्र पर
आगरा :ताजमहल के अंदर कब्र पर अखिल भारत हिन्दू महासभा के कार्यकर्ताओं ने गंगाजल चढ़ाया।#tajmahalpic.twitter.com/6s0vDrc0CO
— Gaurav Yadav (@ygauravyadav)August 3, 2024

ತೀರ್ಥ ಪ್ರೋಕ್ಷಣೆ ಮಾಡಿದವರನ್ನು ತಾಜ್​ಮಹಲ್​ನ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವಶಕ್ಕೆ ಪಡೆದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.
ಆರೋಪಿಗಳು ತಾಜ್​ಮಹಲ್​ ನೋಡಲು ಬರುವ ಪ್ರವಾಸಿಗರಂತೆ ಟಿಕೆಟ್​ ಖರೀದಿಸಿ ಸ್ಮಾರಕದೊಳಗೆ ಹೋಗಿದ್ದಾರೆ. ಪ್ರವಾಸಗರಿಗೆ ಕುಡಿಯುವ ನೀರು ಒಯ್ಯಲು ಅವಕಾಶ ಕಲ್ಪಿಸಿರುವುದನ್ನು ಬಳಸಿಕೊಂಡ ಇವರು ಪ್ಲಾಸ್ಟಿಕ್ ಬಾಟಲಿಯಲ್ಲಿ ತೀರ್ಥ ಕೊಂಡೊಯ್ದು ಸ್ಮಾರಕದೊಳಗಡೆ ಪ್ರೋಕ್ಷಣೆ ಮಾಡಿದ್ದಾರೆ.
ಈ ಹಿಂದೆ ಅಖಿಲ ಭಾರತೀಯ ಹಿಂದೂ ಮಹಾಸಭಾದ ಮಹಿಳಾ ಸದಸ್ಯರು ತಾಜ್​ಮಹಲ್​ನ ಶುದ್ಧೀಕರಣ ಮಾಡುತ್ತೇವೆ ಎಂದು ಗಂಗಾ ನದಿಯಿಂದ ನೀರು ತೆಗೆದುಕೊಂಡು ಪಾದಯಾತ್ರೆ ಹಮ್ಮಿಕೊಂಡಿತ್ತು. ಆದರೆ, ಆಗ್ರಾ ಪೊಲೀಸರು ಅವರನ್ನು ಮಾರ್ಗ ಮದ್ಯೆ ತಡೆದು ಪ್ರಯತ್ನ ವಿಫಲಗೊಳಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
