ಪುಣೆ :ತಮ್ಮ ದ್ವಿಚಕ್ರವಾಹನವನ್ನು ರೈಲ್ವೇ ಹಳಿಯ ಮೇಲೆ ಎಸೆದು, ಓಡುತ್ತಿದ್ದ ಟ್ರೈನಿಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದ ಇಬ್ಬರನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್​​ಪಿಎಫ್​) ಪೊಲೀಸರು ಬಂಧಿಸಿದ್ದಾರೆ. ಪುಣೆಯ ಪಟಸ್​ನ ಬಳಿಯ ಖುತ್ಬವ್​ ರೈಲು ನಿಲ್ದಾಣದ ಬಳಿಯಲ್ಲಿ ಕುಡಿದ ಅಮಲಿನಲ್ಲಿ ಈ ಅಚಾತುರ್ಯ ಎಸಗಿದ್ದರು ಎನ್ನಲಾಗಿದೆ.
ಜೂನ್​ 11 ರಂದು 35 ವರ್ಷ ವಯಸ್ಸಿನ ಆಕಾಶ್​ ಗುದ್ದವರ್​ ಮತ್ತು ಇನ್ನೊಬ್ಬ ವ್ಯಕ್ತಿಯು ಕುಡಿದ ಮತ್ತಿನಲ್ಲಿ ದ್ವಿಚಕ್ರವಾಹನವೊಂದನ್ನು ರೈಲು ಹಳಿಯ ಮೇಲಕ್ಕೆ ನೂಕಿದ್ದರು. ಆ ಸಂದರ್ಭದಲ್ಲಿ ಖುತ್ಬವ್ ರೈಲು ನಿಲ್ದಾಣವನ್ನು ದಾಟಿದ ಪುಣೆ ದಾನಾಪುರ್ ಎಕ್ಸ್​ಪ್ರೆಸ್​ ಟ್ರೈನಿನ ಇಂಜಿನ್ನಿನ ಕೆಳಗೆ ಆ ವಾಹನ ಸಿಲುಕಿಕೊಂಡಿದ್ದು, 17 ಕಿಲೋಮೀಟರ್​ಗಳವರೆಗೆ ಎಳೆದೊಯ್ಯಲ್ಪಟ್ಟಿತು. ತದನಂತರ ಏನೋ ಚಲನೆಯಾಗುತ್ತಿರುವುದನ್ನು ಗಮನಿಸಿದ ಚಾಲಕ ರೈಲು ನಿಲ್ಲಿಸಿದ ಪರಿಣಾಮ ಯಾವುದೇ ದುರಂತ ಸಂಭವಿಸಲಿಲ್ಲ ಎಂದು ಆರ್​ಪಿಎಫ್​ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)
ಕರೊನಾ ನಿಯಮ ಗಾಳಿಗೆ ತೂರಿ ಪಕ್ಷದ ಕಛೇರಿ ಉದ್ಘಾಟನೆ: ಮಾಜಿ ಮೇಯರ್ ಬಂಧನ

ಸೊಪ್ಪು-ತರಕಾರಿ ಒದ್ದು ದರ್ಪ ಮೆರೆದ ಪಿಎಸ್​ಐ ಸಸ್ಪೆಂಡ್

ಬಿಎಂಟಿಸಿ ಪಾಸ್​ದಾರರಿಗೆ ಗುಡ್ ನ್ಯೂಸ್! ಏಪ್ರಿಲ್​ ಪಾಸ್​ ಈಗ ಬಳಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 4 =
Remember me
