ನವದೆಹಲಿ:ದೇಶಾದ್ಯಂತ ಹಠಾತ್ ಹೃದಯಾಘಾತ ಪ್ರಕರಣಗಳ ಸರಣಿ ಮುಂದುವರಿದಿದ್ದು, ಆ ಪಟ್ಟಿಗೆ ಇನ್ನಿಬ್ಬರ ಸೇರ್ಪಡೆಯಾಗಿದೆ. ಇಬ್ಬರು ಯುವಕರು ಕ್ರಿಕೆಟ್ ಆಡುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಪ್ರಶಾಂತ್ ಕಾಂತಿಭಾಯ್​ ಭರೋಲಿಯಾ (27) ಮತ್ತು ಜಿಗ್ನೇಶ್ ಚೌಹಾನ್​ (31) ಸಾವಿಗೀಡಾದವರು. ಈ ಪೈಕಿ ಒಬ್ಬರು ಸೂರತ್​ನವರು, ಇನ್ನೊಬ್ಬರು ರಾಜ್​ಕೋಟ್​ನವರು. ಸೂರತ್​ನಲ್ಲಿ ಪ್ರಶಾಂತ್ ಶನಿವಾರ ಕ್ರಿಕೆಟ್​ ಆಡಿ ಮುಗಿಸುತ್ತಿದ್ದಂತೆ ಎದೆನೋವಿಗೆ ಒಳಗಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಆಗಿರಲಿಲ್ಲ.
ಇದನ್ನೂ ಓದಿ:ಊಟ ಮಾಡುತ್ತಲೇ ಕುಸಿದು ಬಿದ್ದು ಸಾವಿಗೀಡಾದ ನೌಕರ; ಸಿಸಿಟಿವಿಯಲ್ಲಿ ದೃಶ್ಯ ದಾಖಲು
ಜಿಗ್ನೇಶ್ ಚೌಹಾಣ್​ ರಾಜ್​ಕೋಟ್​​ನ ಮಾಧವರಾವ್ ಸಿಂಘ್ಯಾ ಮೈದಾನದಲ್ಲಿ ಭಾನುವಾರ ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದಿದ್ದರು. ಅಂದರೆ ಬ್ಯಾಟಿಂಗ್ ಮಾಡುತ್ತ ಔಟ್​ ಆಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದರು. ನಂತರ ಎದೆನೋವಿನಿಂದ ಬಳಲಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅಸುನೀಗಿದ್ದರು.
ಮಗುವಿಗೆ ಹಾಲು ಕುಡಿಸುತ್ತಿದ್ದ ಬಾಣಂತಿ ಕುಸಿದು ಬಿದ್ದು ಸಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
