ಘಜಿಯಾಬಾದ್:ಮನುಷ್ಯನ ಕ್ರೌರ್ಯಕ್ಕೆ ಕೊನೆಯಿಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ನಿತ್ಯವೂ ದಾರಿ ಮಧ್ಯೆ ಹತ್ತಾರು ಬೀದಿ ನಾಯಿಗಳು ಕಾಣಸಿಗುತ್ತವೆ. ಅವುಗಳು ತಮ್ಮ ಪಾಡಿಗೆ ಇದ್ದರೂ, ಕಾರಣವಿಲ್ಲದೆ ಬೀದಿ ನಾಯಿಗಳನ್ನು ಕೆಣಕುವುದರಲ್ಲಿ ಕೆಲವು ಮನುಷ್ಯರಿಗೆ ಏನೋ ಖುಷಿ. ಬೀದಿ ನಾಯಿಗಳ ಮೇಲೆ ಹಾನಿ ಮಾಡುವುದು, ಕಲ್ಲೆಸೆಯುವ ಮೂಲಕ ಕಾರಣವಿಲ್ಲದೆ ಕೆಲವರು ತೊಂದರೆ ಕೊಡುತ್ತಾರೆ. ಇವೆಲ್ಲವನ್ನು ಮೂಕ ಪ್ರಾಣಿಗಳಿಗೆ ಸಹಿಸಿಕೊಳ್ಳಬೇಕಾದುದು ಅನಿವಾರ್ಯ ಎಂಬಂತಾಗಿದೆ.
ಇದೀಗ ಉತ್ತರಪ್ರದೇಶದ ಗಾಜಿಯಾಬಾದ್‌ನ ಲೋನಿ ಪ್ರದೇಶದ ಸಮೀಪವಿರುವ ಟ್ರೋನಿಕಾ ನಗರದಲ್ಲಿ ಮೂರು ಜನ ಯುವಕರು ಸೇರಿಕೊಂಡು ನಾಯಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಈ ಯುವಕರು ನಾಯಿಯ ಕುತ್ತಿಗೆಗೆ ಸರಪಳಿಯನ್ನು ಕಟ್ಟಿ ಗೋಡೆಗೆ ನೇತು ಹಾಕಿದ್ದಾರೆ. ಕುತ್ತಿಗೆಗೆ ನೇಣು ಬಿಗಿದುಕೊಳ್ಳುವ ಮಾದರಿಯಲ್ಲಿ ನಾಯಿಯನ್ನು ಹತ್ಯೆ ಮಾಡಿದ್ದಾರೆ. ನಾಯಿಯನ್ನು ನೇತಾಡಿಸಿದ ಬಳಿಕ, ಯುವಕನೊಬ್ಬ ಸರಪಳಿಯನ್ನು ಕೆಳಗಿನಿಂದ ಎಳೆದಿದ್ದಾನೆ.
थाना ट्रोनिका सिटी क्षेत्र की एक कुत्ते के साथ क्रूरता करने की सोशल मीडिया पर वायरल वीडियो का संज्ञान लिया गया है। पशु मालिक ने बताया कि कुत्ता बीमार था। घटना/वायरल वीडियो के संबंध में पशु मालिक के विरुद्ध अभियोग पंजीकृत कर लिया गया है। कठोर कार्यवाही की जायेगी। ~ एसपी ग्रामीण।pic.twitter.com/ZsK3uK0flc— GHAZIABAD POLICE (@ghaziabadpolice)November 14, 2022
थाना ट्रोनिका सिटी क्षेत्र की एक कुत्ते के साथ क्रूरता करने की सोशल मीडिया पर वायरल वीडियो का संज्ञान लिया गया है। पशु मालिक ने बताया कि कुत्ता बीमार था। घटना/वायरल वीडियो के संबंध में पशु मालिक के विरुद्ध अभियोग पंजीकृत कर लिया गया है। कठोर कार्यवाही की जायेगी। ~ एसपी ग्रामीण।pic.twitter.com/ZsK3uK0flc
ಇದೀಗ ಯುವಕರು ಅಮಾನುಷ ಕೃತ್ಯ ಎಸಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಎಲ್ಲರೂ ಯುವಕರ ಅಪಚಾರಕ್ಕೆ ತಕ್ಕ ಶಾಸ್ತಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಯುವಕರನ್ನು ಪತ್ತೆಹಚ್ಚಿ, ತನಿಖೆ ನಡೆಸಿದ್ದಾರೆ.
ಪ್ರಿಯತಮೆಯ ದೇಹವನ್ನು 35 ತುಂಡು ಮಾಡಿದ ಪ್ರಿಯಕರ; ಅಪರಾತ್ರಿ ಗುಟ್ಟಾಗಿ ಒಂದೊಂದೇ ಪೀಸ್ ವಿಲೇವಾರಿ…!
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆ ಮೂರು ತಿಂಗಳ ಹಿಂದೆ ನಡೆದಿದೆ. ಆದರೆ ಈ ಕೃತ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
