ಡೆಹ್ರಾಡೂನ್​:ತನ್ನ ಮೇಲೆ ಅತ್ಯಾಚಾರವೆಸಗಲು ಬಂದ ಪಾಪಿಗಳನ್ನು ವಿರೋಧಿಸಿದ್ದಕ್ಕೆ ಯುವತಿಯ ಮೂಗನ್ನೇ ಕತ್ತರಿಸಿರುವ ಘಟನೆ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಕಲ್ಫ್ಲಿಗೈರ್​ ಗ್ರಾಮದಲ್ಲಿ ನಡೆದಿದೆ. ಆರೋಪಿಗಳು ಯುವತಿಯ ಪೋಷಕರ ಮೇಲೂ ಹಲ್ಲೆ ನಡೆಸಿ, ಕಳ್ಳತನ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಮತ್ಸ್ಯಪ್ರಿಯರಿಗೆ ಸಕತ್​ ಖುಷಿ ಸುದ್ದಿ: ತಾಜಾತಾಜಾ ಮೀನು ಇನ್ಮುಂದೆ ಆನ್​ಲೈನ್​ನಲ್ಲಿ!
ಇಬ್ಬರು ಯುವಕರು ಈ ಕೆಲಸ ಮಾಡಿದ್ದಾರೆ. ತಮ್ಮದೇ ಊರಿನ 17 ವರ್ಷದ ಹೆಣ್ಣು ಮಗಳ ಮನೆಗೆ ನುಗ್ಗಿದ ಅವರು ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಅದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಮೂಗನ್ನೇ ಕತ್ತರಿಸಿಬಿಟ್ಟಿದ್ದಾರೆ. ಆಕೆಯ ರಕ್ಷಣೆಗೆ ಓಡಿಬಂದ ತಂದೆ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ 20 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ಓಡಿಹೋಗಿದ್ದಾರೆ.
ಇದನ್ನೂ ಓದಿ:ಕರೊನಾ ನಿಯಂತ್ರಿಸಲು ಅಗತ್ಯ ಕ್ರಮ, ಉಸ್ತುವಾರಿ ಸಚಿವ ಅಶೋಕ್ ಅಭಿಮತ ಜಿಲ್ಲೆಯಲ್ಲಿ ಕರೊನಾ ತಡೆ ಜಾಗೃತಿಗೆ ಚಾಲನೆ
ಆರೋಪಿಗಳು ಮನೆಯಿಂದ ಓಡಿ ಹೋದ ತಕ್ಷಣ, ಯುವತಿಯ ತಂದೆ ತಾಯಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ಅವರ ಮನೆಗೆ ತೆರಳಿದ್ದಾರೆ. ಆದರೆ ಅವರಿಬ್ಬರು ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗಿದೆ.ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 376 ಮತ್ತು 354ರಲ್ಲಿ ಪ್ರಕರಣ ದಾಖಲಾಗಿದೆ. ಅವರನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಮಾಸ್ಕ್​ ಹಾಕದಿದ್ದರೆ 500 ರೂ. ಅಲ್ಲ, 2 ಸಾವಿರ ರೂ. ಫೈನ್​!

70 ವರ್ಷದ ಮುದುಕಿಯ ಮೇಲೂ ಅತ್ಯಾಚಾರ; ಕೋಲಿನಿಂದ ಚುಚ್ಚಿ ವಿಕೃತಿ ಮೆರೆದ ಪಾಪಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
