ನವದೆಹಲಿ:ಇಂದು ಬೆಳಗ್ಗೆ 5 ಗಂಟೆಗೆ ದೆಹಲಿಯಲ್ಲಿ ಇಬ್ಬರು ಖದೀಮರನ್ನು ಎನ್​ಕೌಂಟರ್​ ಮಾಡಲಾಗಿದೆ. ದೆಹಲಿಯ ಪುಲ್ ಪ್ರಹ್ಲಾದಪುರ್ ಎಂಬಲ್ಲಿ ಗುಂಡು ಹೊಡೆಯಲಾಗಿದೆ.
ರಾಜ ಖುರೇಶಿ ಮತ್ತು ರಮೇಶ್​ ಬಹದ್ದೂರ್​ ಎಂಬುವವರು ಎನ್​ಕೌಂಟರ್​ನಲ್ಲಿ ಮೃತಪಟ್ಟವರು. ಆರಂಭದಲ್ಲಿ ಪೊಲೀಸ್​ ಮತ್ತು ಕಳ್ಳರ ನಡುವೆ ಗುಂಡಿನ ಚಕಮಕಿ ನಡೆದಿದೆ. ಎರಡು ಕಡೆಯಿಂದ 30 ಸುತ್ತಿನ ಗುಂಡಿನ ದಾಳಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಕಳ್ಳರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿನ ವೈದ್ಯರು ಅವರಿಬ್ಬರು ಮೃತ ಪಟ್ಟಿದ್ದಾರೆ ಎಂದು ದೃಢಪಡಿಸಿದರು ಎಂದು ಡಿಸಿಪಿ ಪಿ.ಎಸ್. ಕುಷ್ವಾ ತಿಳಿಸಿದರು.
ಎನ್​ಕೌಂಟರ್​ನಲ್ಲಿ ಮೃತ ಪಟ್ಟ ಇಬ್ಬರ ಮೇಲೆ ದರೋಡೆ ಮತ್ತು ಕೊಲೆ ಆರೋಪದಲ್ಲಿ ಬೇಕಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
