ಕೊಲ್ಕತ:ಕೊಲ್ಕತದ ಎನ್​​ಎಸ್​ಸಿಬಿಐ ವಿಮಾನ ನಿಲ್ದಾಣದ ಬಳಿ ಕ್ಯಾಲಿಫೋರ್ನಿಯಂ ಎಂಬ ಸಿಂಥೆಟಿಕ್ ರೇಡಿಯೋ ಆ್ಯಕ್ಟೀವ್​ ಸಾಮಗ್ರಿ ಎಂದು ಶಂಕಿಸಲಾದ ಕಲ್ಲುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಿವಾಸಿಗಳಾದ ಸೈಲನ್​ ಕರ್ಮಕರ್(41) ಮತ್ತು ಅಸೀತ್​ ಘೋಷ್​(49) ಎಂಬುವರು ಬಂಧಿತರು.
ಬಂಧಿತ ಆರೋಪಿಗಳಿಂದ ಸುಮಾರು 250 ಗ್ರಾಂನಷ್ಟು ತೂಕದ ಹೊಳೆಯುತ್ತಿದ್ದ ನಾಲ್ಕು ಬೂದಿ ಬಣ್ಣದ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರಂಭಿಕ ತನಿಖೆಯಿಂದ ಇದು ನ್ಯೂಕ್ಲಿಯರ್​ ರಿಯಾಕ್ಟರ್​ಗಳಲ್ಲಿ ಬಳಸಲಾಗುವ ದುಬಾರಿ ಕ್ಯಾಲಿಫೋರ್ನಿಯಂ ಎಂದು ಭಾವಿಸಲಾಗಿದೆ. ಇದನ್ನು ಅವರು ಕೆಲವೇ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಮೈಸೂರಲ್ಲಿ ಗ್ಯಾಂಗ್​ ರೇಪ್​: ಬೀದಿಗಿಳಿದು ವಿದ್ಯಾರ್ಥಿಗಳ ಪ್ರತಿಭಟನೆ
ಬಂಧಿತರು ಅದನ್ನು ಕೇರಳದಿಂದ ತಂದು ಇಲ್ಲಿ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ವಶಪಡಿಸಿಕೊಂಡಿರುವ ಕಲ್ಲುಗಳ ಸ್ಯಾಂಪಲ್​ಅನ್ನು ಪರೀಕ್ಷೆಗಾಗಿ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಅದು ಕ್ಯಾಲಿಫೋರ್ನಿಯಂ ಎಂದೇ ಸಾಬೀತಾದರೆ ಅದು ಪ್ರತಿ ಗ್ರಾಂಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವಂಥದ್ದು. ಇದು ಬಂಧಿತರಿಗೆ ಹೇಗೆ ಸಿಕ್ಕಿತೆಂದು ತನಿಖೆ ನಡೆಯಬೇಕಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್)
ಕಾರ್ಗೋ ಜೆಟ್​​ನಲ್ಲಿ ಕಾಬುಲ್​ ತೊರೆದ ಅಫ್ಘನ್​ ಪಾಪ್​ ಸ್ಟಾರ್​ ಅರ್ಯಾನಾ!
ಹಾರ್ನ್​ ಮಾಡಿದರೂ ದಾರಿ ಬಿಡಲಿಲ್ಲ ಎಂದು ಗುಂಡು ಹಾರಿಸಿದ!
ಹಿರಿಯ ನಟ ದೊಡ್ಡಣ್ಣ ಅನಾರೋಗ್ಯ: ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
