ಗುರುಗ್ರಾಮ (ಹರಿಯಾಣ):ಪ್ರಾಣವನ್ನಾದರೂ ಬಿಟ್ಟೇನು, ಹೆಂಡ ಬಿಡೆನು ಎನ್ನುತ್ತಿದ್ದಾರೆ ಬಹುತೇಕ ಮದ್ಯಪ್ರಿಯರು. ಲಾಕ್‌ಡೌನ್‌ ಸಮಯದಲ್ಲಿ ಮದ್ಯ ಪಡೆಯಲು ಏನೆಲ್ಲಾ ಕಸರತ್ತು ನಡೆಸುತ್ತಿರುವವರು ಒಂದೆಡೆಯಾದರೆ, ಪೊಲೀಸರ ಕಣ್ಣು ತಪ್ಪಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಹುನ್ನಾರವೂ ಇನ್ನೊಂದೆಡೆ ನಡೆಯುತ್ತಲೇ ಇದೆ.ಈ ಕಸರತ್ತುಗಳ ನಡುವೆಯೇ, ಮದ್ಯದ ವಿಷಯವಾಗಿ ಯುವಕನೊಬ್ಬನ ಕೊಲೆ ನಡೆದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದ ಯುವಕನೊಬ್ಬ ಹೆಣವಾಗಿ ಹೋಗಿದ್ದಾನೆ! ಲಾಕ್‌ಡೌನ್‌ ಸಮಯದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಮೂವರು ಯುವಕರ ನಡುವೆ ನಡೆದ ಘರ್ಷಣೆ ಈ ಕೊಲೆಗೆ ಕಾರಣ!ಕೊಲೆಯಾದ ವ್ಯಕ್ತಿ 30 ವರ್ಷದ ಸುಭಾಷ್‌ ಸಿಂಗ್‌. ಈತ ಸಮೀಪದ ಬಿಲಾಸ್‌ಪುರ ಗ್ರಾಮದವ. ಈತನನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವವರು ಹೇಮಂತ್‌ (19) ಮತ್ತು ಸಂದೀಪ್‌ (23).ಪೊಲೀಸರ ಪ್ರಕಾರ ನಡೆದಿರುವುದು ಇಷ್ಟು:ಸುಭಾಷ್‌, ಹೇಮಂತ್‌ ಮತ್ತು ಸಂದೀಪ್‌ ಪರಿಚಯಸ್ಥರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಮೂವರೂ ಮದ್ಯ ಸೇವನೆಯಲ್ಲಿ ತೊಡಗಿದ್ದಾರೆ. ಸುಭಾಷ್‌ ಅದಾಗಲೇ ಗ್ರಾಮದಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಆರೋಪ ಎದುರಿಸುತ್ತಿದ್ದವ. ಕುಡಿದು ನಶೆ ಏರಿದ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರುವಂತೆ ಸುಭಾಷ್‌, ಹೇಮಂತ್‌ ಮತ್ತು ಸಂದೀಪ್‌ ಅವರಿಗೂ ಹೇಳಿದ್ದಾನೆ.ಲಾಕ್‌ಡೌನ್‌ ಸಮಯದಲ್ಲಿ ಮದ್ಯಕ್ಕೆ ಅತಿ ಹೆಚ್ಚಿನ ಬೇಡಿಕೆ ಇರುವ ಕಾರಣ, ಮದ್ಯ ಮಾರಾಟ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂಬ ಕಾರಣಕ್ಕೆ ಆತ ತನ್ನಂತೆಯೇ ಅಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಸುಭಾಷ್‌ ಉಳಿದಿಬ್ಬರಿಗೆ ತಾಕೀತು ಮಾಡಿದ್ದಾನೆ. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಮಾತಿಗೆ ಮಾತು ಬೆಳೆದಿದೆ. ಇದೇ ವಿಷಯ ದೊಡ್ಡದಾಗುತ್ತಾ ಹೋಗಿದೆ.ಕುಡಿದ ಅಮಲಿನಲ್ಲಿದ್ದ ಎಲ್ಲರ ಜಗಳ ತಾರಕಕ್ಕೇರಿದೆ. ವಾಗ್ವಾದ ಹೆಚ್ಚಾದಾಗ ಹೇಮಂತ್ ಮತ್ತು ಸಂದೀಪ್ ತಾಳ್ಮೆ ಕಳೆದುಕೊಂಡು ಸುಭಾಷ್ ಮೇಲೆ ಹಲ್ಲೆ ನಡೆಸಿದ್ದಾರೆ. ಒದ್ದು, ಹೊಡೆದು ನಂತರ ಟವೆಲ್ ಬಳಸಿ ಸುಭಾಷ್ ಕತ್ತು ಹಿಸುಕಿದ್ದಾರೆ. ಉಸಿರುಗಟ್ಟಿ ಸುಭಾಷ್‌ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ರಾತ್ರಿ ಮನೆಗೆ ಮರಳದ್ದರಿಂದ ಸುಭಾಷ್‌ ಅವರ ಕುಟುಂಬದವರು ಎಲ್ಲರ ಬಳಿ ವಿಚಾರಿಸಿದಾಗಿ ಕೊಲೆಯ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳಲ್ಲಿ ವಿಚಾರಿಸಿದಾಗ ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಹಿಂದೆ ಕೂಡ ಇವರ ನಡುವೆ ಇದೇ ವಿಷಯಕ್ಕೆ ಜಗಳವಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two + sixteen =
Remember me
