ಒಡಿಶಾ:ರೈಲು ಅಪಘಾತ ಸಂಭವಿಸಿ ಎರಡು ತಿಂಗಳು ಕಳೆದರೂ ಇನ್ನೂ 29 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಒಡಿಶಾದ ಬಹನಾಗಾ ಬಜಾರ್ ರೈಲು ನಿಲ್ದಾಣದಲ್ಲಿ ಟ್ರಿಪಲ್ ರೈಲು ಅಪಘಾತದಲ್ಲಿ 295 ಜನರು ಸಾವನ್ನಪ್ಪಿದ್ದು, ಭುವನೇಶ್ವರದ ಏಮ್ಸ್‌ನಲ್ಲಿ ಐದು ಕಂಟೈನರ್‌ಗಳಲ್ಲಿ ಮೃತದೇಹಳನ್ನು ಸಂರಕ್ಷಿಸಲಾಗಿದೆ. ಉಳಿದ ಮೃತದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಇನ್ನೂ 29 ಶವಗಳ ಗುರುತು ಪತ್ತೆಯಾಗಿಲ್ಲ.

ಒಡಿಶಾದ ಬಹನಾಗಾ ಬಜಾರ್ ರೈಲು ನಿಲ್ದಾಣದಲ್ಲಿ ಟ್ರಿಪಲ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 295 ಜನರಲ್ಲಿ 29 ಮೃತದೇಹಗಳು ಇನ್ನೂ ಗುರುತಿನ ನಿರೀಕ್ಷೆಯಲ್ಲಿವೆ. 266 ಮೃತ ದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಮ್ಸ್ ಭುವನೇಶ್ವರ್ ಅಧೀಕ್ಷಕ ಪ್ರೊಫೆಸರ್ ದಿಲೀಪ್ ಕುಮಾರ್ ಪರಿದಾ ಮಾತನಾಡಿ, ಜೂನ್ 2 ರ ರೈಲು ಅಪಘಾತದ ನಂತರ, ಅಪಘಾತದ ಸ್ಥಳದಿಂದ ಒಟ್ಟು 162 ಮೃತದೇಹಗಳನ್ನು ಹೊರತೆಗೆಯಲಾಯಿತು. ಅವುಗಳಲ್ಲಿ 81 ಮೃತದೇಹವನ್ನು ಮೊದಲ ಹಂತದಲ್ಲಿ ಅವರ ಕುಟುಂಬ ಸದಸ್ಯರಿಗೆ ನೀಡಲಾಗಿದೆ. ಡಿಎನ್ಎ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಇನ್ನೂ 52 ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಆದರೆ ಇದೀಗ 29 ಶವಗಳ ಗುರುತು ಇನ್ನೂವರೆಗೂ ಪತ್ತೆಯಾಗಿಲ್ಲ. ಡಿಎನ್‌ಎಗೆ ಹೊಂದಿಕೆಯಾಗದ ಮೃತ ದೇಹಗಳನ್ನು ಯಾರಿಗೂ ನೀಡಲಾಗುವುದಿಲ್ಲ ಎಂದಿದ್ದಾರೆ.
ಮಳೆಗಾಲದಲ್ಲಿ ಅಕ್ಕಿ ಸಂಗ್ರಹಿಸುವುದು ಕಷ್ಟವೇ?; ಕೀಟಗಳು ಬರದಂತೆ ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
