ನವದೆಹಲಿ:ಸಂಸತ್​ನ ಭದ್ರತಾಕೋಟೆ ಭೇದಿಸಿ ಲೋಕಸಭೆಯಲ್ಲಿ ಸಂಸದರ ಟೇಬಲ್ ಮೇಲೆ ಜಿಗಿದು, ಗದ್ದಲ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಮುಖ ಆರೋಪಿ ಲಲಿತ್ ಝಾ ನಿನ್ನೆ ರಾತ್ರಿಯಿಂದಲೇ ಪೊಲೀಸರ ವಶದಲ್ಲಿದ್ದು, ಆತನ ಸ್ನೇಹಿತ ಮಹೇಶ್​ನನ್ನೂ ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ, ಘಟನೆಯಲ್ಲಿ ಕೈಲಾಶ್ ಎಂಬಾತನ ಪಾತ್ರದ ಬಗ್ಗೆಯೂ ಮಾಹಿತಿ ಹೊರಬಂದಿದೆ. ನಂತರ ಆತನನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.
ಲಲಿತ್ ಝಾ ಬಸ್ ಮೂಲಕ ರಾಜಸ್ಥಾನಕ್ಕೆ ಪ್ರಯಾಣಿಸಿದ್ದ. ದೆಹಲಿಗೆ ಮರಳುವ ಮೊದಲು ಮೊಬೈಲ್ ಫೋನ್​ಗಳನ್ನು ನಾಶಪಡಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಭಗತ್ ಸಿಂಗ್ ಫ್ಯಾನ್ ಕ್ಲಬ್ ಎಂಬ ಸೋಷಿಯಲ್ ಮೀಡಿಯಾ ಗ್ರೂಪ್​ನ ಮೂಲಕ ಲಲಿತ್ ಝಾ ಮತ್ತು ಮಹೇಶ್ ಪರಿಚಿತರಾಗಿದ್ದರೆನ್ನಲಾಗಿದೆ. ಮಹೇಶ್ ಕೂಡ ಸಂಸತ್ತಿನಲ್ಲಿ ನಡೆಸಿದ ಪ್ರತಿಭಟನೆಯ ಭಾಗವಾಗಲು ಬಯಸಿದ್ದ. ಸಂಸತ್​ನ ಭದ್ರತೆಯನ್ನು ಭೇದಿಸುವ ಮುನ್ನ ಆರೋಪಿಗಳು ಲಖನೌದಲ್ಲಿ ಎರಡು ಜೋಡಿ ಬೂಟುಗಳಲ್ಲಿ ಹೊಗೆಯ ಡಬ್ಬಿ ಅಡಗಿಸಿಡಲು 2.5 ಇಂಚು ಆಳದ ಕುಳಿಗಳನ್ನು ಕೆತ್ತಿಸಿದ್ದರೆನ್ನಲಾಗಿದೆ.
ಲಲಿತ್ ಝಾ ಹಿನ್ನೆಲೆ:ಇಡೀ ಘಟನೆಯ ಮಾಸ್ಟರ್​ವೆುೖಂಡ್ ಲಲಿತ್ ಝಾ ಮೂಲತಃ ಬಿಹಾರದವನಾಗಿದ್ದು, ಕೋಲ್ಕತ್ತಾದಲ್ಲಿ ಶಿಕ್ಷಕನಾಗಿದ್ದ. ಹೋರಾಟಗಾರ ಭಗತ್​ಸಿಂಗ್​ರಿಂದ ಪ್ರೇರಿತನಾಗಿದ್ದ ಲಲಿತ್ ಝಾ, ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ತರುವ ವಿಡಿಯೊಗಳನ್ನು ಚಿತ್ರೀಕರಿಸಿ, ನಂತರ ಆ ಕುರಿತ ಮಾಧ್ಯಮ ಪ್ರಸಾರ ಖಚಿತಪಡಿಸಿಕೊಳ್ಳಲು ವಿಡಿಯೊಗಳನ್ನು ನೀಲಾಕ್ಷ ಎಂಬಾತ ನಡೆಸುತ್ತಿದ್ದ ಸಂಸ್ಥೆಗೆ ಹಸ್ತಾಂತರಿಸಿದ್ದ.
ಲಲಿತ್ ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ. ಲಲಿತ್ ಶಾಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದು, ಕೋಲ್ಕತದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಕೋಲ್ಕತದ ಬುರ್ರಬಜಾರ್​ಗೆ ಏಕಾಂಗಿಯಾಗಿ ಬಂದಿದ್ದ. 2 ವರ್ಷ ಹಿಂದೆ ಇದ್ದಕ್ಕಿದ್ದಂತೆ ಈ ಸ್ಥಳ ತೊರೆದಿದ್ದ ಎಂದು ಆತನ ಮನೆ ಪಕ್ಕದ ಟೀ ಸ್ಟಾಲ್ ಮಾಲೀಕ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ನಾರ್ಥ್ ಪರಗಣ ಪೊಲೀಸರು ಲಲಿತ್ ಸ್ನೇಹಿತ ನೀಲಾಕ್ಷನ ನಿವಾಸಕ್ಕೆ ಭೇಟಿ ಕೊಟ್ಟು, ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ನೀಲಾಕ್ಷನ ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದಾಗ ಲಲಿತ್ ವರ್ತನೆಗಳು ಹೇಗಿದ್ದವು, ಆತನ ಸಂಪರ್ಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.
ಕಲರ್ ಸ್ಪ್ರೇ ಕೊಂಡೊಯ್ದಿದ್ದು ಹೇಗೆ?:ಸಂಸತ್ ಭದ್ರತೆ ಭೇದಿಸಿ ಲೋಕಸಭೆಯಲ್ಲಿ ಹಳದಿ ಹೊಗೆ ಸಿಂಪಡಿಸಿದ್ದ ಇಬ್ಬರು ಆರೋಪಿಗಳಾದ ಡಿ. ಮನೋರಂಜನ್ ಮತ್ತು ಸಾಗರ್ ಶರ್ಮ, ದಪ್ಪಗಿನ ರಬ್ಬರ್ ಪದರಗಳ ಸಪೋರ್ಟ್ ಇರುವ ತಮ್ಮ ಸ್ಪೋರ್ಟ್್ಸ ಶೂಗಳ ಎಡಭಾಗಕ್ಕೆ ಕತ್ತರಿಸಿದ ಕುಳಿಗಳಲ್ಲಿ ಹಳದಿ ಹೊಗೆಯಿದ್ದ ಸಣ್ಣ ಪೊಟ್ಟಣ ಕೊಂಡೊಯ್ದಿದ್ದರು ಎಂದು ದಿಲ್ಲಿ ಪೊಲೀಸರು ಎಫ್​ಐಆರ್​ನಲ್ಲಿ ದಾಖಲಿಸಿದ್ದಾರೆ.
ಲೋಕಸಭೆಗೆ ಕೊಂಡೊಯ್ದ ಕರಪತ್ರ ಗಳಲ್ಲಿ ತ್ರಿವರ್ಣ ಧ್ವಜದ ಹಿಂದೆ ಮುಷ್ಟಿಯ ಚಿತ್ರ, ಮಣಿಪುರ ಹಿಂಸಾಚಾರ ಕುರಿತ ಹಿಂದಿ ಮತ್ತು ಭಾಷೆಯಲ್ಲಿ ಘೊಷಣೆಗಳನ್ನೊಳಗೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ. ಒಟ್ಟು ಆರು ಮಂದಿ ಆರೋಪಿಗಳ ವಿರುದ್ಧ ಕಠಿಣ ಯುಎಪಿಎ ಕಾಯ್ದೆ ಅಡಿಯಲ್ಲಿ ಭಯೋತ್ಪಾದನೆ ಕೇಸ್​ಗಳನ್ನು ದಾಖಲಿಸಲಾಗಿದೆ. ಹೊಗೆ ಡಬ್ಬಿಗಳನ್ನು ತೆರೆಯುವ ಮುನ್ನ ಕನ್ನಡಕ ಮತ್ತು ಕೈಗವಸುಗಳನ್ನು ಧರಿಸಬೇಕು ಎಂಬ ಎಚ್ಚರಿಕೆ ಸೂಚನೆಗಳು ಅವುಗಳಲ್ಲಿದ್ದವು.
ಎಲ್​ಸಿಆರ್ ನಿರ್ವಿುತ ಬೂದು ಬಣ್ಣದ ಸ್ಪೋರ್ಟ್ಸ್ ಶೂವಿನ ಎಡಭಾಗದಲ್ಲಿ ಒಂದು ಕುಳಿ ಕತ್ತರಿಸಲಾಗಿತ್ತು. ಹೆಚ್ಚುವರಿ ರಬ್ಬರ್ ಅಂಟಿಸುವ ಮೂಲಕ ಅಡಿಭಾಗದ ದಪ್ಪ ಪದರ ಹೆಚ್ಚಿಸಲಾಯಿತು. ಮನೋರಂಜನ್​ನ ಸ್ಪೋರ್ಟ್ ಶೂವಿನ ಎಡಭಾಗ ಒಂದು ಕುಳಿ ಹೊಂದಿತ್ತು. ಶೂನ ಬಲಭಾಗದ ಅಡಿಭಾಗವೂ ಭಾಗಶಃ ಕತ್ತರಿಸಲಾಗಿದೆ ಎಂದು ಎಫ್​ಐಆರ್​ನಲ್ಲಿ ವಿವರಿಸಲಾಗಿದೆ.
ಮರುಸೃಷ್ಟಿ:ಏತನ್ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸ್ ಸ್ಪೆಷಲ್ ಸೆಲ್ ಅಧಿಕಾರಿಗಳು, ಸಂಸತ್ ಭದ್ರತೆ ಭೇದಿಸಿದ ಘಟನೆಯ ಮರುಸೃಷ್ಟಿಗಾಗಿ ಶನಿವಾರ ಅಥವಾ ಭಾನುವಾರದಂದು ಆರೋಪಿಗಳನ್ನು ಸಂಸತ್ ಭವನದ ಸಂಕೀರ್ಣಕ್ಕೆ ಕರೆದೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳು ಕಲರ್ ಸ್ಪ್ರೇ ಜತೆಗಿಟ್ಟುಕೊಂಡು ಸಂಸತ್ ಭವನ ಹೇಗೆ ಪ್ರವೇಶಿಸಿದರು ಮತ್ತು ಅವರು ತಮ್ಮ ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸಿದರು ಎಂಬುದನ್ನು ಕಂಡುಕೊಳ್ಳಲು ಇದು ಪೊಲೀಸರಿಗೆ ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಪಕ್ಷ ಸಂಸದರ ಧರಣಿ:ವಿಪಕ್ಷಗಳ ಒಟ್ಟು 14 ಸಂಸದರನ್ನು ಅಮಾನತುಗೊಳಿಸಿದ್ದಕ್ಕೆ ವಿಪಕ್ಷ ನಾಯಕರು, ಶುಕ್ರವಾರ ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್, ನಾನು ಮೌನ ಪ್ರತಿಭಟನೆ ನಡೆಸುತ್ತಿದ್ದೇನೆ ಎಂಬ ಘೊಷಣಾ ಪತ್ರ ಹಿಡಿದು ಧರಣಿ ಕುಳಿತಿದ್ದರು. ಭದ್ರತೆ ವೈಫಲ್ಯ ಪ್ರಶ್ನಿಸಿದ್ದಕ್ಕೆ ಸಂಸದರನ್ನು ಅಮಾನತು ಮಾಡಲಾಗಿದೆ. ಆದರೆ, ಆಗಂತುಕರಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸದನದ ಒಳಗೂ ಗದ್ದಲ:ಸಂಸದರ ಅಮಾನತು, ಭದ್ರತೆ ಲೋಪಕ್ಕೆ ಸಂಬಂಧಿಸಿ ಶುಕ್ರವಾರದ ಪ್ರತಿಪಕ್ಷಗಳು ಸದನದ ಒಳಗೂ ಪ್ರತಿಭಟನೆ ನಡೆಸಿದವು. ಕೆಲ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು ಸದನದ ಬಾವಿಗೆ ಪ್ರವೇಶಿಸಿದ್ದರಿಂದ ಸಭೆ ಆರಂಭಗೊಂಡ ಒಂದೇ ನಿಮಿಷದಲ್ಲಿ ಮುಂದೂಡಲ್ಪಟ್ಟಿತು. ರಾಜ್ಯಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ರ್ಚಚಿಸಲು ನಿಯಮ 267ರಡಿ ನೀಡಲಾದ ನೋಟಿಸ್​ಗಳನ್ನು ಒಪ್ಪಿಕೊಳ್ಳಲು ಸಭಾಪತಿ ಧನಕರ್ ನಿರಾಕರಿಸಿದ್ದರಿಂದ ಪ್ರತಿಭಟನೆ ತೀವ್ರಗೊಂಡಿತ್ತು.
ಲಲಿತ್ ಇವೆಲ್ಲದರಲ್ಲಿ ಹೇಗೆ ತೊಡಗಿಸಿಕೊಂಡ ಎಂಬುದು ನಮಗೆ ತಿಳಿದಿಲ್ಲ. ಬಾಲ್ಯದಿಂದಲೂ ಆತ ಅಂತಮುಖಿ, ಎನ್​ಜಿಒಗಳಲ್ಲಿದ್ದ. ಟಿವಿಗಳಲ್ಲಿ ಈ ಸುದ್ದಿ ನೋಡಿ ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇವೆ.
| ಶಂಭು ಝಾ ಲಲಿತ್​ನ ಸೋದರ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 + nine =
Remember me
