ನವದೆಹಲಿ:ಭಾರತದ ಇನ್ನೆರಡು ಸಮುದ್ರ ತೀರಗಳಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ‘ಬ್ಲೂ ಫ್ಲ್ಯಾಗ್’​ ಸರ್ಟಿಫಿಕೇಶನ್​ ಲಭಿಸಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್​ ಯಾದವ್​ ಹೇಳಿದ್ದಾರೆ. ಸಮುದ್ರ ತೀರಗಳ ಉತ್ತಮ ನಿರ್ವಹಣೆ, ಆರೋಗ್ಯಕರ ವಾತಾವರಣ ಮತ್ತು ಸಮೃದ್ಧ ಜೀವಸಂಪತ್ತಿನ ಆಧಾರದ ಮೇಲೆ ಡೆನ್ಮಾರ್ಕಿನ ಫೌಂಡೇಶನ್ ಫಾರ್​ ಎನ್ವಿರಾನ್​ಮೆಂಟ್ ಎಜುಕೇಷನ್(ಎಫ್​ಇಇ)​ ನೀಡುವ ಮಾನ್ಯತೆ ಇದಾಗಿದೆ.
ತಮಿಳುನಾಡಿನ ಕೋವಲಮ್​ ಬೀಚ್​ ಮತ್ತು ಪುದುಚೆರಿಯ ಈಡೆನ್​ ಬೀಚ್​ಗಳಿಗೆ ಇದೀಗ ಎಫ್​ಇಇಯ ಬ್ಲೂ ಫ್ಲ್ಯಾಗ್​ ಸರ್ಟಿಫಿಕೇಶನ್​ ಸಿಕ್ಕಿದೆ. 2020ರಲ್ಲಿ ಈ ಮಾನ್ಯತೆ ಗಳಿಸಿದ ಇತರ 8 ಬೀಚ್​ಗಳೂ ಸೇರಿದಂತೆ ಭಾರತದ 10 ಸಮುದ್ರ ತೀರಗಳು ಈ ಅಂತರರಾಷ್ಟ್ರೀಯ ಸಮ್ಮಾನ ಪಡೆದುಕೊಂಡಿವೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವಚ್ಛ ಮತ್ತು ಹಸಿರು ಭಾರತದ ಕಡೆಗಿನ ನಮ್ಮ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ ಎಂದು ಸಚಿವ ಯಾದವ್​ ಟ್ವೀಟ್​ ಮಾಡಿದ್ದಾರೆ.
Happy to announce India now has 10 International Blue Flag beaches with the addition of Kovalam & Eden beaches this year and recertification for 8 beaches which got the tag in 2020. Another milestone in our journey towards a clean and green India led by PM Shri@NarendraModiJi.pic.twitter.com/UzocIJhyzD
— Bhupender Yadav (@byadavbjp)September 21, 2021

ಈ ಪ್ರತಿಷ್ಠಿತ ಎಕೋ-ಲೇಬಲ್​ ಪಡೆದಿರುವ ಭಾರತದ ಇತರ ಸಮುದ್ರ ತೀರಗಳೆಂದರೆ – ಶಿವರಾಜಪುರ-ಗುಜರಾತ್, ಘೋಘ್ಲಾ-ಡೈಯು, ಕಾಸರಕೋಡ್ ಮತ್ತು ಪಡುಬಿದ್ರಿ-ಕರ್ನಾಟಕ, ಕಪ್ಪದ್-ಕೇರಳ, ಋಷಿಕೊಂಡ- ಆಂಧ್ರ ಪ್ರದೇಶ, ಗೋಲ್ಡನ್ ಬೀಚ್​-ಒಡಿಶಾ ಮತ್ತು ರಾಧಾನಗರ-ಅಂಡಮಾನ್ ಮತ್ತು ನಿಕೋಬಾರ್. ಇವುಗಳಿಗೆ ಕಳೆದ ವರ್ಷ ಬ್ಲೂ ಫ್ಲ್ಯಾಗ್​ ನೀಡಲಾಗಿದ್ದು, ಇದೀಗ ಆ ಪ್ರಮಾಣಪತ್ರಗಳನ್ನೂ ನವೀಕರಿಸಲಾಗಿದೆ ಎಂದು ಪ್ರೆಸ್​ ಇನ್​ಫರ್ಮೇಷನ್ ಬ್ಯೂರೋ ತಿಳಿಸಿದೆ.(ಏಜೆನ್ಸೀಸ್)
ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?

‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!

ಗೃಹ ಸಚಿವ ಆರಗ ಜ್ಞಾನೇಂದ್ರಗೆ ಕ್ಲಾಸ್​ ತೊಗೊಂಡ ಸಿದ್ದು; ಸುಧಾಕರ್​ ಮೇಲೂ ಗರಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
