ನವದೆಹಲಿ:ಜಗತ್ತಿನಾದ್ಯಂತ ಹಾವಳಿ ಇಟ್ಟಿರುವ ಕರೊನಾಗೆ ಪತ್ರಕರ್ತರನೇಕರು ಬಲಿಯಾಗಿದ್ದು, ಇದೀಗ ಇನ್ನಿಬ್ಬರು ಪತ್ರಕರ್ತರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ರಾಷ್ಟ್ರಮಟ್ಟದ ಎರಡು ಖಾಸಗಿ ಮಾಧ್ಯಮ ಸಂಸ್ಥೆಗಳ ಇಬ್ಬರು ಪ್ರತಿನಿಧಿಗಳು ಇಂದು ಕೊನೆಯುಸಿರೆಳೆದಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ಆ್ಯಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರೋಹಿತ್‌ ಸರ್ದಾನ ಹಾಗೂ ಖಾಸಗಿ ಪತ್ರಿಕೆಯೊಂದರ ಪತ್ರಕರ್ತೆ ನೀಲಾಕ್ಷಿ ಭಟ್ಟಾಚಾರ್ಯ ಮೃತಪಟ್ಟವರು. ಅದರಲ್ಲೂ ರೋಹಿತ್‌ ಸೋಂಕಿತರಾಗಿದ್ದರೂ ಆ ಬಳಿಕ ಚೇತರಿಸಿಕೊಂಡು ಗುಣವಾಗಿದ್ದರು. ಆದರೆ ಇಂದು ಬೆಳಗ್ಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರೋಹಿತ್‌ಗೆ 41 ವರ್ಷ ವಯಸ್ಸಾಗಿತ್ತು. ಇವರ ಆತ್ಮಕ್ಕೆ ಶಾಂತಿ ಕೋರಿ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ಇನ್ನು ನೀಲಾಕ್ಷಿ ಭಟ್ಟಾಚಾರ್ಯ ಅಸ್ಸಾಂ ಮೂಲದವರಾಗಿದ್ದು, ಅವರಲ್ಲಿ ಇತ್ತೀಚೆಗೆ ಕೋವಿಡ್‌-19 ಸೋಂಕಿರುವುದು ದೃಢಪಟ್ಟಿತ್ತು. ಅವರು ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೊಂದೆಡ ನೀಲಾಕ್ಷಿ ಅವರ ಪತಿ, ಪತ್ರಕರ್ತರೂ ಆಗಿರುವ ಕಲ್ಯಾಣ್‌ ಬರುಹಾ ಕೂಡ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಅವರ ಸ್ಥಿತಿ ಕೂಡ ಗಂಭೀರವಾಗಿದ್ದು, ಸದ್ಯ ತೀವ್ರ ನಿಗಾ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆ್ಯಂಕರ್ ಅರುಣ ಬಡಿಗೇರ ತಂದೆ-ತಾಯಿಯನ್ನು ಬಲಿ ತೆಗೆದುಕೊಂಡ ಕರೊನಾ

ನಗರಸಭೆ ಚುನಾವಣೆ: ಅತೀ ಹೆಚ್ಚು ಮತ ಪಡೆದು ಗೆದ್ದಾಕೆ ಬದುಕೇ ಇಲ್ಲ! ಮತ ಎಣಿಕೆ ಮುನ್ನಾ ದಿನವೇ ಕರೊನಾಗೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
