ಜೊಹಾನೆಸ್​ಬರ್ಗ್/ನವದೆಹಲಿ:ಕರೊನಾ ವೈರಸ್​ನ ಒಮಿಕ್ರಾನ್ ರೂಪಾಂತರಿಯ ಬಿಎ.4 ಮತ್ತು ಬಿಎ.5 ಎಂಬ ಎರಡು ಉಪತಳಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಅದನ್ನು ನಿಗಾ ಪಟ್ಟಿಗೆ ಸೇರಿಸಿದೆ. ಒಮಿಕ್ರಾನ್ ಪ್ರಭೇದವು ಜಗತ್ತಿನಲ್ಲಿ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದ್ದು, ಅದರ ಉಪತಳಿ ಬಿಎ.2, ಬಿಎ.3 ಪ್ರಸ್ತುತ ಜಗತ್ತಿನಲ್ಲಿ ಅತಿ ಜಾಸ್ತಿ ಕಾಟ ಕೊಡುತ್ತಿರುವ ವೈರಸ್ ಆಗಿದೆ. ಶೇಕಡ 94ರಷ್ಟು ಸ್ಯಾಂಪಲ್​ಗಳಲ್ಲಿ ಅದು ಅಸ್ತಿತ್ವದಲ್ಲಿದೆ. ಇದೀಗ, ಇನ್ನೆರಡು ಪ್ರಭೇದಗಳಾದ ಬಿಎ.4 ಮತ್ತು ಬಿಎ.5 ಆರೋಗ್ಯ ತಜ್ಞರಲ್ಲಿ ಕಳವಳ ಮೂಡಿಸಿದೆ.
ಬಿಎ.4 ಮತ್ತು ಬಿಎ.5 ಇವೆರಡೂ ಬಿಎ.2ನಂಥದ್ದೇ ಸ್ಪೈಕ್ ಪ್ರೊಫೈಲ್ ಹೊಂದಿದೆ ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕತೆ ಸ್ಪಂದನೆ ಮತ್ತು ಆವಿಷ್ಕಾರ ಕೇಂದ್ರದ (ಸಿಇಆರ್​ಐ) ನಿರ್ದೇಶಕ ಟುಲಿಯೊ ಡಿ ಒಲಿವೆರಾ ಹೇಳಿದ್ದಾರೆ. ಹೊಸ ಉಪತಳಿಗಳ ಮಾಹಿತಿಯನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಮಾಸ್ಕ್ ಬಳಕೆಗೆ ಉತ್ತೇಜನ ಅಗತ್ಯ:ಕರೊನಾ ವೈರಾಣುವಿನ ಹೊಸ ಎಕ್ಸ್​ಇ ಪ್ರಭೇದ ಪತ್ತೆಯಾಗಿರುವುದರಿಂದ ಜನರು ಸ್ವಯಂಪ್ರೇರಿತವಾಗಿ ಮಾಸ್ಕ್ ಧರಿಸಲು ಉತ್ತೇಜನ ನೀಡಬೇಕೆಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಎಲ್ಲ ಬಗೆಯ ಕರೊನಾ ವೈರಸ್ ದಾಳಿ ವಿರುದ್ಧ ಮಾಸ್ಕ್ ಧಾರಣೆ ಏಕೈಕ ಅತಿ ಪರಿಣಾಮಕಾರಿ ಸಾಧನವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಎರಡು ವರ್ಷ ಕಾಲ ಜಾರಿಯಲ್ಲಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನು ಮಹಾರಾಷ್ಟ್ರ ಮತ್ತು ದೆಹಲಿಯಿಂದ ತೆಗೆದು ಹಾಕಲಾಗಿದೆ. ಎಕ್ಸ್​ಇ ಪ್ರಭೇದ ಇದೆಯೆಂದರೆ ಇದಕ್ಕೂ ಮುಂಚೆ ಎಕ್ಸ್​ಎ, ಎಕ್ಸ್​ಬಿ, ಎಕ್ಸ್​ಸಿ ಮತ್ತು ಎಕ್ಸ್​ಡಿ ಇದ್ದವೆಂದು ಅರ್ಥ. ಆದರೆ ಅದಕ್ಕೆ ಹೆಚ್ಚಿನ ಗಮನ ನೀಡಿರಲಿಲ್ಲ ಎಂದು ಖ್ಯಾತ ವೈರಾಣು ತಜ್ ಟಿ. ಜೇಕಬ್ ಹೇಳಿದ್ದಾರೆ.
ಕೋವಿಡ್ ಲಸಿಕೆಯ ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು ಸರ್ಕಾರ ಈಗಿನ ಒಂಬತ್ತು ತಿಂಗಳಿಂದ ಆರು ತಿಂಗಳಿಗೆ ಇಳಿಸುವುದು ಒಳ್ಳೆಯದು.
|ಆದರ್ ಪೂನಾವಾಲಾಸೆರಂ ಸಿಇಒ
ಭಾರತದಲ್ಲಿ 796 ಕೇಸ್:ಕರೊನಾ ಸೋಂಕು ಕ್ಷೀಣಿಸುತ್ತಿರುವ ಭಾರತದಲ್ಲಿ ಮಂಗಳವಾರ ಬೆಳಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಸಾಂಕ್ರಾಮಿಕತೆಯ 796 ಹೊಸ ಪ್ರಕರಣಗಳು ದೃಢಪಟ್ಟಿವೆ. 19 ಜನರು ಮೃತಪಟ್ಟಿದ್ದಾರೆ. ಬಲಿಯಾದವರ ಸಂಖ್ಯೆ 5,21,710ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಕೆ ದರ ಶೇಕಡ 98.76 ಆಗಿದ್ದು, ದೇಶದಾದ್ಯಂತ ಇದುವರೆಗೆ 1,85,90,68,610 ಡೋಸ್ ಲಸಿಕೆ ನೀಡಲಾಗಿದೆ.
ಒಮಿಕ್ರಾನ್ ಪ್ರಭೇದದ ಹಾವಳಿಯಿಂದಾಗಿ ಚೀನಾದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು ದೇಶದ ಆರೋಗ್ಯ ರಕ್ಷಣೆ ವ್ಯವಸ್ಥೆ ತೀವ್ರ ಒತ್ತಡಕ್ಕೆ ಸಿಲುಕಿದೆ. ಸೋಂಕು ಕಟ್ಟಿ ಹಾಕಲು ಹರಸಾಹಸ ಪಡುತ್ತಿರುವ ಸರ್ಕಾರ, ಕೋಟ್ಯಂತರ ಜನರನ್ನು ಲಾಕ್​ಡೌನ್​ಗೆ ಒಳಪಡಿಸಿದೆ. ಝೀರೋ ಕೋವಿಡ್ ಸೂತ್ರಕ್ಕೆ ಅಂಟಿಕೊಂಡಿರುವ ಕೊನೆ ದೇಶಗಳಲ್ಲಿ ಒಂದಾದ ಚೀನಾ, ಕಟ್ಟುನಿಟ್ಟಿನ ನಿಯಮಗಳ ಅನುಷ್ಠಾನ ಹಾಗೂ ಎಲ್ಲ ಸೋಂಕಿತರನ್ನು ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸುವ ಮೂಲಕ ದೇಶದಲ್ಲಿ ಒಂದೇ ಒಂದು ಕರೊನಾ ರೋಗಿಗಳು ಇಲ್ಲದಂತೆ ಮಾಡಲು ಸತತ ಪ್ರಯತ್ನ ನಡೆಸುತ್ತಿದೆ. ಅದು ಈಗಾಗಲೇ ಒತ್ತಡಕ್ಕೆ ಒಳಗಾಗಿರುವ ಆರೋಗ್ಯ ವ್ಯವಸ್ಥೆ ಮೇಲೆ ಇನ್ನಷ್ಟು ಹೊರೆ ಹೇರುತ್ತಿದೆ. ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರಿ ಜನರ ನಡುವೆ ವ್ಯಾಪಕವಾಗುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ. ಚೀನಾದ ಆರ್ಥಿಕ ಚಟುವಟಿಕೆಗಳ ಕೇಂದ್ರವಾದ ಶಾಂಘೈಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳಿಗೆ ಒಳಗಾದ ಸಮಯದಲ್ಲಿ ನಿವಾಸಿಗಳು ಚಿಕಿತ್ಸೆಗಾಗಿ ಆನ್​ಲೈನ್ ಮೂಲಕ ನೆರವು ಸಂಗ್ರಹಿಸಲು ಮುಂದಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 7 =
Remember me
