ಸ್ಯಾನ್​ ಡಿಯಾಗೋ :ಎರಡು ಅತ್ಯಾಧುನಿಕ ಬಹುಪಾತ್ರಧಾರಿ(ಮಲ್ಟಿ ರೋಲ್​) ಹೆಲಿಕಾಪ್ಟರ್​ಗಳು ಇಂದು ಭಾರತೀಯ ನೌಕಾ ದಳಕ್ಕೆ ಸೇರ್ಪಡೆಯಾಗಿವೆ. ಅತ್ಯುನ್ನತ ಗುಣಮಟ್ಟದ ಏವಿಯಾನಿಕ್ಸ್​ ಮತ್ತು ಸೆನ್ಸರ್​ಗಳನ್ನು ಹೊಂದಿದ ಈ ಹೆಲಿಕಾಪ್ಟರ್​ಗಳು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ ಹಲವು ಮಿಷನ್​ಗಳನ್ನು ನಿಭಾಯಿಸುವ ವಿಶೇಷ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.
‘ಸಿಕೋರ್​ಸ್ಕೈ ಎಂಎಚ್-60 ರೋಮಿಯೋ ಹೆಲಿಕಾಪ್ಟರ್’​ಗಳನ್ನು ಅಮೆರಿಕದ ನೌಕಾದಳವು, ಭಾರತೀಯ ಅಂಬಾಸಿಡರ್​ ತರಂಜಿತ್​ ಸಿಂಗ್ ಸಂಧು ಮತ್ತು ಭಾರತೀಯ ನೌಕಾದಳದ ಡೆಪ್ಯುಟಿ ಚೀಫ್​ ವೈಸ್​ ಅಡ್​ಮಿರಲ್ ರವನೀತ್​ ಸಿಂಗ್​ ಅವರಿಗೆ ಸ್ಯಾನ್​ ಡಿಯಗೋದಲ್ಲಿ ಔಪಚಾರಿಕವಾಗಿ ಹಸ್ತಾಂತರಿಸಿತು.

ಅಮೆರಿಕದ ಲಾಕ್​ಹೀಡ್​ ಮಾರ್ಟಿನ್ ಕಾರ್ಪೊರೇಷನ್​ ಉತ್ಪಾದಿಸುತ್ತಿರುವ ಈ ಎಂಎಚ್​-60ಆರ್​ ಮಾದರಿಯ 24 ಹೆಲಿಕಾಪ್ಟರ್​ಗಳನ್ನು ಫಾರಿನ್​ ಮಿಲಿಟರಿ ಸೇಲ್ಸ್​ನಡಿ ಅಮೆರಿಕ ಸರ್ಕಾರದಿಂದ ಖರೀದಿಸಲಾಗುತ್ತಿದೆ. ಭಾರತದಲ್ಲಿ ಹಲವು ವಿಶಿಷ್ಟ ಉಪಕರಣ ಮತ್ತು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸಲ್ಪಡುವ ಈ ಹೆಲಿಕಾಪ್ಟರ್​ಗಳು, ಭಾರತೀಯ ನೌಕಾದಳದ 3ಡಿ ಸಾಮರ್ಥ್ಯಗಳನ್ನು ಇನ್ನೂ ಹೆಚ್ಚಿಸಲಿವೆ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)
ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

ಪ್ರಧಾನಿ ಮೋದಿ ಜೊತೆ ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್​ ಮಾತುಕತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
