ಪುಣೆ :ಇಂಡಿಯನ್ ಗೆಜೆಲ್(ಗೆಜೆಲ್ಲಾ ಬೆನ್ನೆಟ್ಟಿ) ಎಂದೂ ಕರೆಯಲ್ಪಡುವ ಚಿಂಕಾರವನ್ನು ಕೊಂದ ಆರೋಪದ ಮೇಲೆ ಮಹಾರಾಷ್ಟ್ರ ಅರಣ್ಯ ಇಲಾಖೆಯು ಇಬ್ಬರನ್ನು ಬಂಧಿಸಿದೆ. ಒಂದು ಬಗೆಯ ಜಿಂಕೆಯಾದ ಚಿಂಕಾರವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಸಂರಕ್ಷಿತ ಪ್ರಾಣಿ ಎಂದು ಘೋಷಿಸಲಾಗಿದೆ.
ಪುಣೆ ಜಿಲ್ಲೆಯ ಇಂಡಾಪುರದ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಾ ಸಿಕ್ಕಿಬಿದ್ದಿರುವ ಆರೋಪಿಗಳನ್ನು ಮಹೇಶ್​ ಜಂಗಳು ಮಾಣೆ(40 ವರ್ಷ) ಮತ್ತು ದತ್ತಾತ್ರಯ ಪೋಪಟ್​ ಪವಾರ್(42 ವರ್ಷ) ಎಂಬುದಾಗಿ ಗುರುತಿಸಲಾಗಿದೆ. ಆರೋಪಿಗಳಿಂದ 9 ಎಂಎಂ ರೈಫಲ್, ಆರು ಲೈವ್ ಕಾರ್ಟ್​ರಿಡ್ಜ್​, ಒಂದು ಖಾಲಿ ಕಾರ್ಟ್​​ರಿಡ್ಜ್​ ಮತ್ತು ಬೈಕ್​ಅನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು
ಅರಣ್ಯ ರಕ್ಷಕರ ತಂಡವು ನಿನ್ನೆ ರಾತ್ರಿ ಗಸ್ತಿನಲ್ಲಿದ್ದಾಗ ಟಾರ್ಚ್​ಲೈಟ್​ ಇಟ್ಟುಕೊಂಡು ಕಾಡಿನಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿದರು. ಹಿಡಿಯಲು ಹೋದಾಗ ಆರೋಪಿಗಳು ಮೋಟರ್​ ಸೈಕಲ್ ಹತ್ತಿಕೊಂಡು ಪರಾರಿಯಾಗಲು ಯತ್ನಿಸಿದರು. ಇಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯರ ಸಹಾಯದೊಂದಿಗೆ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸತ್ತ ಚಿಂಕಾರ ಇದ್ದ ಗೋಣಿಚೀಲವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.(ಏಜೆನ್ಸೀಸ್)
ಬ್ಲಾಕ್​ ಫಂಗಸ್​​ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದ ರಾಜಸ್ಥಾನ ಸರ್ಕಾರ

ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

ಕೇಜ್ರಿವಾಲ್ ಮಾತಿಂದ ಸಿಂಗಾಪೂರ್ ಗರಂ : ‘ಭಾರತದ ಪರವಾಗಿ ಮಾತನಾಡುತ್ತಿಲ್ಲ’ ಎಂದು ಸಮಾಧಾನ ಮಾಡಿದ ವಿದೇಶಾಂಗ ಸಚಿವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 10 =
Remember me
