ಮುಂಬೈ:ತಾಜ್​ ಹೋಟೆಲ್​ ಸ್ಫೋಟಿಸಲು ಪಾಕಿಸ್ತಾನಿಗಳಿಬ್ಬರು ನಗರವನ್ನು ತಲುಪಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಗುರುವಾರ ನಡೆದಿದೆ.
ಮುಂಬೈ ಪೊಲೀಸ್​ ಇಲಾಖೆಯ​ ಮುಖ್ಯ ಕಂಟ್ರೋಲ್​ ರೂಮ್​ಗೆ ಬೆದರಿಕೆ ಕರೆ ಬಂದಿದೆ. ನಗರದ ಲ್ಯಾಂಡ್​ಮಾರ್ಕ್​ ಆಗಿರುವ ತಾಜ್​ ಹೋಟೆಲ್​ ಅನ್ನು ಸ್ಫೋಟಿಸಲು ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತದ ಗಡಿಯನ್ನು ಪ್ರವೇಶ ಮಾಡಲಿದ್ದಾರೆ ಎಂದು ಬೆದರಿಕೆ ಹಾಕಲಾಗಿದೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಮುಕೇಶ್​ ಸಿಂಗ್​ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ ಆತನ ನಿಜವಾದ ಹೆಸರು ಜಗದಂಬ ಪ್ರಸಾದ್ ಸಿಂಗ್ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. 35 ವರ್ಷದ ಪ್ರಸಾದ್​ ಸಿಂಗ್​, ಉತ್ತರ ಪ್ರದೇಶದ ಗೊಂಡಾ ಮೂಲದವನು. ಆದರೆ, ಪ್ರಸ್ತುತ ಮುಂಬೈನ ಸಾಂತಾಕ್ರೂಜ್​ನಲ್ಲಿ ನೆಲೆಸಿದ್ದಾನೆ.
ಇದನ್ನೂ ಓದಿ:ಸಂವಿಧಾನ ವಿರೋಧಿಗಳಿಂದ ಒಡೆದು ಆಳುವ ನೀತಿ: ಸಿಎಂ ಸಿದ್ದರಾಮಯ್ಯ ಅಭಿಮತ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.
ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ ಮೇಲೆ 2008ರಲ್ಲಿ ಉಗ್ರರಿಂದ ದಾಳಿ ನಡೆದಿತ್ತು. ಈ ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಮಂದಿ ಮೃತಪಟ್ಟಿದ್ದರು. ಒಂಬತ್ತು ಉಗ್ರರನ್ನು ನಮ್ಮ ಯೋಧರು ಹೊಡೆದುರುಳಿಸಿದ್ದರು. ಕೊನೆಗೂ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಅಜ್ಮಲ್ ಕಸಬ್​ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸೇನೆ ಯಶಸ್ವಿಯಾಗಿತ್ತು. 2012ರ ನವೆಂಬರ್ 21ರಂದು ಈತನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು.
ಈ ಹಿಂದೆಯೂ ಹೋಟೆಲ್‌ಗೆ ಇದೇ ರೀತಿಯ ಅನೇಕ ಬೆದರಿಕೆ ಕರೆಗಳು ಬಂದಿವೆ.(ಏಜೆನ್ಸೀಸ್​)
ಶೇ.33 ಮಹಿಳಾ ಮೀಸಲು?; ಸಂಸತ್ತಲ್ಲಿ ಮಂಡನೆ ಸಾಧ್ಯತೆ

ಬಿಪಿಎಲ್ ಕಾರ್ಡ್ ಸಿಗಲ್ಲ?;ಅರ್ಜಿ ವಿಲೇವಾರಿಗೆ ಅನುಮತಿ ನೀಡದ ಸರ್ಕಾರ

ಅದಾನಿ ಗ್ರೂಪ್ ವಿರುದ್ಧ ಮತ್ತೆ ದಾಳಿ; ಈ ಭಾರಿ ಒಸಿಸಿ​ಆರ್​​ಪಿಯಿಂದ ಆರೋಪ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 − one =
Remember me
