ನೋಯ್ಡಾ:ದೆಹಲಿ ರಾಜ್ಯದಲ್ಲಿ ಕರೊನಾ ಪಿಡುಗು ಜೋರಾಗಿದೆ. ಈ ಭಾಗದಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹೀಗಿರುವಾಗ ಎರಡು ಸುತ್ತಿನ ಪರೀಕ್ಷೆಯಲ್ಲಿ ಕರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಬಿಡುಗಡೆ ಮಾಡಲಾಗಿದ್ದ ಇಬ್ಬರು ವ್ಯಕ್ತಿಗಳಲ್ಲಿ ಮೂರನೇ ಸುತ್ತಿನ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕು ಇಲ್ಲವೆಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದ ಅವರಿಬ್ಬರನ್ನೂ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೋಯ್ಡಾದ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಐಎಂಎಸ್​) ಇವರಿಬ್ಬರನ್ನೂ ಸೋಂಕು ತಗುಲಿರುವ ಶಂಕೆಯಲ್ಲಿ ದಾಖಲಿಸಲಾಗಿತ್ತು. 24 ಗಂಟೆ ಅವಧಿಯಲ್ಲಿ ಇವರಿಬ್ಬರಿಗೂ 2 ಸುತ್ತಿನ ಗಂಟ್ರಲ ದ್ರವ ಮತ್ತು ರಕ್ತ ಪರೀಕ್ಷೆ ಮಾಡಲಾಗಿತ್ತು. ಎರಡೂ ಸುತ್ತಿನಲ್ಲೂ ಸೋಂಕು ತಗುಲಿಲ್ಲ ಎಂಬ ವರದಿ ಬಂದಿತ್ತು. ಹಾಗಾಗಿ ಶುಕ್ರವಾರ ಇವರಿಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.ಆದರೆ ಇವರನ್ನು ಬಿಡುಗಡೆ ಮಾಡುವ ಮುನ್ನ ಸಂಗ್ರಹಿಸಲಾಗಿದ್ದ ಮೂರನೇ ಮಾದರಿಯನ್ನು ಪರೀಕ್ಷಿಸಿದಾಗ, ಇವರಲ್ಲಿ ಸೋಂಕು ಇರುವುದು ದೃಢಪಟ್ಟಿತು. ಹಾಗಾಗಿ ಇವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಕ್​ಡೌನ್​ ತೆರವುಗೊಳಿಸುವ ಬಗ್ಗೆ ಸಿಎಂ ಸಮಾಲೋಚನೆ, ಖಾಸಗಿ ಸಂಸ್ಥೆಯಿಂದ ಸ್ಮಾರ್ಟ್​ ಲಾಕ್​ಡೌನ್​ ಕುರಿತು ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 5 =
Remember me
