ಮುಂಬೈ:ಕೆಲವೇ ದಿನಗಳ ಹಿಂದೆ ಉದ್ಯಮಿ ಮುಕೇಶ್ ಅಂಬಾನಿ ಭಾರತ ಬಿಟ್ಟು ಲಂಡನ್​ಗೆ ಹೋಗುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಬಳಿಕ ಅವರು ಭಾರತದಲ್ಲೇ ಇರಲಿದ್ದು, ಬೇರೆಲ್ಲಿಗೂ ಹೋಗಿ ನೆಲೆಸುವುದಿಲ್ಲ ಎಂಬ ಸ್ಪಷ್ಟನೆಯೂ ಹೊರಬಿದ್ದಿತ್ತು.
ಇದೀಗ ಮತ್ತೆ ಅಂಬಾನಿ ಮನೆ ಕುರಿತ ಮಾತು ಕೇಳಿ ಬರುತ್ತಿದೆ. ಈ ಸಲ ಒಂದು ಆತಂಕ ಕೂಡ ಸೃಷ್ಟಿಯಾಗಿದ್ದು, ಅಂಬಾನಿ ಮನೆ ಸುತ್ತ ಭಾರಿ ಪೊಲೀಸ್ ಬಂದೋಬಸ್ತ್​ ಸಹ ವಹಿಸಲಾಗಿದೆ. ಅದಕ್ಕೆ ಕಾರಣ ಆ ಒಂದು ಕರೆ ಹಾಗೂ ಅವರಿಬ್ಬರು!
ಇದನ್ನೂ ಓದಿ:‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!
‘ಮುಂಬೈನಲ್ಲಿರುವ ಅಂಬಾನಿಯ ಮನೆ ಅಂಟಿಲಿಯಾದ ವಿಳಾಸ ಕೇಳಿಕೊಂಡು ಇಬ್ಬರು ಬಂದಿದ್ದರು. ಅವರ ಕೈಯಲ್ಲಿ ದೊಡ್ಡ ಚೀಲವಿತ್ತು’ ಎಂದು ಆಟೋ ಚಾಲಕನೊಬ್ಬ ಮುಂಬೈ ಪೊಲೀಸರಿಗೆ ಕರೆ ಮಾಡಿ ವಿಷಯ ತಲುಪಿಸಿದ್ದಾನೆ. ಅಷ್ಟಕ್ಕೂ ಹಾಗೆ ವಿಳಾಸ ಕೇಳಿಕೊಂಡು ಬಂದವರು ಯಾರು, ಅವರ ಕೈಯಲ್ಲಿದ್ದ ದೊಡ್ಡ ಚೀಲಗಳಲ್ಲಿ ಏನಿವೆ ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಮಾತ್ರವಲ್ಲ, ಯಾವುದಕ್ಕೂ ಇರಲಿ ಎಂದು ಮನೆ ಸುತ್ತ ಭದ್ರತೆ ಒದಗಿಸಿದ್ದು, ಆ ಇಬ್ಬರು ಆಗಂತುಕರಿಗಾಗಿ ಸಿಸಿಟಿವಿ ಕ್ಲಿಪ್ಪಿಂಗ್​ಗಳ ಪರಿಶೀಲನೆ ಆರಂಭಿಸಿದ್ದಾರೆ.
We received a call from a taxi driver that 2 people carrying a bag asked for Mukesh Ambani's residence Antilia; recording his statement. DCP level rank officer monitoring the situation. Security heightened outside Antilia; CCTV footage also being checked: Mumbai Police
— ANI (@ANI)November 8, 2021

ಈ ಬೀಚ್​ನಲ್ಲಿ ತಲೆ ಎತ್ತಲಿದೆ ಮಾಜಿ ಸಿಎಂ ಕರುಣಾನಿಧಿ ಸ್ಮಾರಕ!; ಹೊರಹೊಮ್ಮಲಾರಂಭಿಸಿದೆ ಅಸಮಾಧಾನ..

ಮೆಟಾವರ್ಸ್ ಎಂಬ ಪರ್ಯಾಯ ಪ್ರಪಂಚ: ಭ್ರಾಮಕ-ಭೌತಿಕ ಜಗತ್ತಿನ ಮಿಲನ, ತಂತ್ರಜ್ಞಾನ ಸಾಧ್ಯತೆಯ ಅದ್ಭುತ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + four =
Remember me
