ಕಾಚಿಗುಡ:ವಿವಾಹೇತರ ಸಂಬಂಧ ಬಯಲಿಗೆ ಬರುತ್ತಿದ್ದಂತೆ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಕಾಚಿಗುಡದಲ್ಲಿ ನಡೆದಿದೆ.
ಕಾಚಿಗುಡದ ಚಪ್ಪಲ್​​ ಬಜಾರ್​ನಲ್ಲಿ ವಾಸವಿದ್ದ ಕರ್ನಾಟಕ ಮೂಲದ ಆಟೋ ಚಾಲಕ ಹನಮಂತು (23) ಮತ್ತು ಅದೇ ಏರಿಯಾದಲ್ಲಿ ವಾಸವಿದ್ದ ಮಹಾರಾಷ್ಟ್ರದ ಲಾತುರ್​ ಮೂಲದ 23 ವರ್ಷದ ಮಹಿಳೆ ಮೃತ ದುರ್ದೈವಿಗಳು.
ಇದನ್ನೂ ಓದಿರಿ:ಅಯ್ಯೋ ನೆನಪಾಗ್ತಲೇ ಇಲ್ಲ ಪಾಸ್‌ವರ್ಡ್‌: ಇನ್ನೆರಡು ಸಲ ತಪ್ಪು ಟೈಪಿಸಿದರೆ ಸಾವಿರಾರು ಕೋಟಿ ಗೋವಿಂದ!
ಕೆಲವು ದಿನಗಳಿಂದ ಹನುಮಂತು ಜತೆ ಮಹಿಳೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಮಹಿಳೆಯ ಪತಿಗೆ ತಿಳಿದು ಇಬ್ಬರ ನಡುವೆ ಜ. 11ರಂದು ಗಲಾಟೆ ನಡೆದಿತ್ತು. ಅದೇ ದಿನ ಸಂಜೆ ಮಹಿಳೆ ಮನೆ ಬಿಟ್ಟು ಹೊರ ಹೋಗಿದ್ದಳು. ಇದರ ಬೆನ್ನಲ್ಲೇ ಪತಿ ಕಾಚಿಗುಡ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದ.
ಮಹಿಳೆಯು ಚಪ್ಪಲ್ ಬಜಾರ್​​ನಲ್ಲಿರುವ ಬಾಯ್​ಫ್ರೆಂಡ್​ ಹನಮಂತು ಮನೆಗೆ ಹೋಗಿದ್ದಳು. ಅದೇ ದಿನ ಇಬ್ಬರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹನುಮಂತು ನೇಣಿಗೆ ಶರಣಾದರೆ, ಮಹಿಳೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ಮಂಗಳವಾರ ರಾತ್ರಿ ಆತ್ಮಹತ್ಯೆ ವಿಚಾರವನ್ನು ಸ್ಥಳೀಯರು ಕಾಚಿಗುಡ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ:5 ತಿಂಗಳ ಮಗು ಎತ್ಕೊಂಡು ಬೆತ್ತಲೆಯಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಶ್ರೀಮಂತೆಯ ದುರಂತ ಕತೆಯಿದು!
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಒಸ್ಮಾನಿಯಾ ಶವಗಾರಕ್ಕೆ ಶವಪರೀಕ್ಷೆಗಾಗಿ ಕಳುಹಿಸಿದರು. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
VIDEO| ಸಾಯಲು ಹೋಗಿದ್ದ ತಾಯಿ ಮಗು ನೆನಪಾಗಿ ಓಡೋಡಿ ಬಂದಳು: ಕರುಳು ಚುರುಕ್​ ಎನಿಸುವ ದೃಶ್ಯವಿದು!

ಪತಿಗೆ ಕೈಕೊಟ್ಟು ಮಲಮಗನನ್ನೇ ಮದ್ವೆಯಾಗಿ ಗರ್ಭಿಣಿಯಾಗಿರೋ ಮಹಿಳೆಯ ವಿಚಿತ್ರ ಹೊಸ ನಿರ್ಧಾರವಿದು!

ನಾನು ಕೆಲಸ ಕಳೆದುಕೊಂಡ ಮೇಲೆ ಪತ್ನಿ ವಿಚಿತ್ರವಾಗಿ ವರ್ತಿಸತೊಡಗಿದ್ದಾಳೆ: ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
