ಗೊಂಡಾ:ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ವಿತರಿಸುವ ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು 8 ವರ್ಷದ ಬಾಲಕನನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ಅಪಹರಣಕಾರರರು ಅಪಹೃತನ ಬಿಡುಗಡೆಗಾಗಿ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ಶುಕ್ರವಾರದಂದು ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ವಿತರಿಸಿಕೊಂಡು ಆ ಪ್ರದೇಶಕ್ಕೆ ಬಂದಿದ್ದರು. ಅದುವರೆಗೆ ಎಲ್ಲರಿಗೂ ಕೊಟ್ಟಂತೆ ಬಾಲಕನ ಮನೆಯವರಿಗೂ ಕೊಟ್ಟಿದ್ದರು. ಬಾಲಕ ಚೂಟಿಯಾಗಿದ್ದನ್ನು ಗಮನಿಸಿದ ಅಪಹರಣಕಾರರು, ನಿಮ್ಮ ಕುಟುಂಬಕ್ಕೆ ಹೆಚ್ಚುವರಿಯಾಗಿ ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ಕೊಡುತ್ತೇವೆ. ದೂರದಲ್ಲಿ ತಮ್ಮ ವಾಹನವಿದ್ದು, ಅಲ್ಲಿಗೆ ಮಗುವನ್ನು ಕಳುಹಿಸಿಕೊಡುಂತೆ ಬಾಲಕನ ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ:ಪಿಪಿಇ ಕಿಟ್​ ಧರಿಸಿ ಊಟ ಬಡಿಸಿದ ಅಡುಗೆಯವರು, ಆಂಧ್ರದಲ್ಲಿ ವಿಶಿಷ್ಟ ಪ್ರಯೋಗ
ಇವರ ಮಾತನ್ನು ನಂಬಿದ ಪಾಲಕರು 8 ವರ್ಷದ ಬಾಲಕನನ್ನು ಆರೋಗ್ಯ ಕಾರ್ಯಕರ್ತರ ಸೋಗಿನವರ ಜತೆ ಕಳುಹಿಸಿದ್ದರು. ಆದರೆ, ಎಷ್ಟೊತ್ತಾದರೂ ಬಾಲಕ ಮರಳದ್ದರಿಂದ ಅನುಮಾನಗೊಂಡ ಪಾಲಕರು ಹೋಗಿ ನೋಡಿದಾಗ ಯಾವುದೇ ವಾಹನವಾಗಲಿ ಅಥವಾ ಆರೋಗ್ಯ ಕಾರ್ಯಕರ್ತರಾಗಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದರು. ಅಷ್ಟರಲ್ಲೇ ದೂರವಾಣಿ ಕರೆ ಮಾಡಿದ ಅಪಹರಣಕಾರರು ಬಾಲಕನ ಸುರಕ್ಷಿತ ಬಿಡುಗಡೆಗಾಗಿ ಒತ್ತೆಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅಪಹರಣಕಾರರು ಎಷ್ಟು ಮೊತ್ತದ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಪಾಲಕರು ಪೊಲೀಸರಿಗೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಡಿಜಿಪಿ ಎಚ್​.ಸಿ. ಆವಸ್ತಿ, ಪ್ರಕರಣದ ತನಿಖೆ ಆರಂಭವಾಗಿದೆ. ಅಪಹೃತನನ್ನು ಪತ್ತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿದ್ದು, ಅದು ಕೂಡ ಕಾರ್ಯೋನ್ಮುಖವಾಗಿದೆ ಎಂದು ಹೇಳಿದ್ದಾರೆ.
ಗಲ್ವಾನ್​ ಘರ್ಷಣೆ ಸ್ಥಳದಿಂದ ಹಿಂದಕ್ಕೆ ಮರಳುತ್ತಿರುವ ಭಾರತೀಯ ಯೋಧರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
