ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಒಂದಾದ ಮೇಲೊಂದರಂತೆ ಕೇಳಿ ಬರುತ್ತಲೇ ಇದ್ದು, ಇದೀಗ ಅಜ್ಜಿ ಎಂದು ಕರೆಯುತ್ತಿದ್ದವನೇ ಇನ್ನೊಬ್ಬನ ಜತೆ ಸೇರಿ 90ರ ವೃದ್ಧೆ ಮೇಲೆ ಅತ್ಯಾಚಾರವೆಸಗಿದ ಹೀನಾತಿಹೀನ ಪ್ರಕರಣವೊಂದು ವರದಿಯಾಗಿದೆ.
90 ವರ್ಷ ವಯಸ್ಸಿನ ಮೇಲೆ ಇಬ್ಬರು ಪುರುಷರು ಆಕೆಯ ಮನೆಯಲ್ಲೇ ಅತ್ಯಾಚಾರ ಎಸಗಿದ್ದಾರೆ. ವಾರದ ಹಿಂದೆಯೇ ಈ ಪ್ರಕರಣ ನಡೆದಿದ್ದರೂ ಇದು ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಲ್ಲೊಬ್ಬ ಸಂತ್ರಸ್ತೆಯನ್ನು ಅಜ್ಜಿ ಎಂದು ಕರೆಯುತ್ತಿದ್ದ. ಆದರೆ ಆ ದಿನ ಇನ್ನೊಬ್ಬ ಆರೋಪಿಯೊಂದಿಗೆ ಆತ ಅಜ್ಜಿಯ ಮನೆ ಬಾಗಿಲು ಮುರಿದು ಒಳಹೊಕ್ಕಿದ್ದು, ಇಬ್ಬರೂ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಪುರದ ಕಾಂಚನ್​ಪುರದ ಬರ್​ಹಳ್ದಿಯಲ್ಲಿ ಅಕ್ಟೋಬರ್ 24ರಂದು ಈ ಅತ್ಯಾಚಾರ ನಡೆದಿದೆ. ಅಕ್ಟೋಬರ್ 29ರಂದು ವೃದ್ಧೆಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಎಸ್​ಪಿ ಭಾನುಪದ ಚಕ್ರವರ್ತಿ ಹೇಳಿದ್ದಾರೆ.
ಅತ್ಯಾಚಾರದ ಬಳಿಕ ವೃದ್ಧೆ ಅನಾರೋಗ್ಯಕ್ಕೆ ಒಳಗಾಗಿದ್ದರೂ ಆಕೆ ಪೊಲೀಸರಿಗೆ ವಿಷಯ ತಿಳಿಸಿರಲಿಲ್ಲ. ಐದು ದಿನಗಳ ಬಳಿಕ ಆಕೆಯ ಸಂಬಂಧಿಕರಿಗೆ ವಿಷಯ ಗೊತ್ತಾದ ಮೇಲೆ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
