ಕೇರಳ:ಕೋವಿಡ್​ಗಿಂತಲೂ ಮಾರಕ ಎನ್ನಲಾಗಿರುವ ನಿಫಾ ವೈರಸ್ ಸೋಂಕಿನ ಲಕ್ಷಣಕ್ಕೆ ಕೇರಳದಲ್ಲಿ ಇನ್ನಿಬ್ಬರು ಒಳಗಾಗಿದ್ದು, ಅವರಿಬ್ಬರನ್ನೂ ಕ್ವಾರಂಟೈನ್​​ನಲ್ಲಿ ಇಡಲಾಗಿದೆ. ಕೇರಳದ ತಿರುವನಂತಪುರದಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣ ಕಂಡುಬಂದಿರುವ ಇಬ್ಬರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.
ಕ್ವಾರಂಟೈನ್​ಗೆ ಒಳಗಾಗಿರುವವರಲ್ಲಿ ಒಬ್ಬರು ಕೋಜಿಕ್ಕೋಡ್​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಇನ್ನೊಬ್ಬರು ಕಟ್ಟಕ್ಕಡ ನಿವಾಸಿ ಮಹಿಳೆ. ಇವರು ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇಬ್ಬರ ವೈದ್ಯಕೀಯ ಪರೀಕ್ಷೆಯ ಮಾದರಿಗಳನ್ನು ತಿರುವನಂತಪುರದಲ್ಲಿ ಇರುವ ಇನ್​ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ವೈರಾಲಜಿ ಮತ್ತು ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿದೆ.
ಸದ್ಯ ಕೇರಳದಲ್ಲಿನ ನಾಲ್ಕು ಖಚಿತಗೊಂಡಿರುವ ನಿಫಾ ಪ್ರಕರಣಗಳು ಕೊಜಿಕ್ಕೋಡ್ ಜಿಲ್ಲೆಯಲ್ಲೇ ಕಂಡುಬಂದಿವೆ. ಈ ನಾಲ್ವರ ಪೈಕಿ 9 ವರ್ಷದ ಮಗು ಕೃತಕ ಉಸಿರಾಟದಲ್ಲಿದೆ. ಕೇರಳದಲ್ಲಿ ಕೊಜಿಕ್ಕೋಡ್​ನಲ್ಲಿ ಈಗಾಗಲೇ ಇಬ್ಬರು ನಿಫಾ ವೈರಸ್​ಗೆ ಬಲಿಯಾಗಿದ್ದಾರೆ. –ಏಜೆನ್ಸೀಸ್
ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

ಗೋವಿಂದಬಾಬು ಪೂಜಾರಿ ಮೇಲೇ ಆರೋಪ ಇರುವುದರಿಂದ ಅವರ ದೂರಿನ ಮೇಲೆ ಅನುಮಾನ ಇದೆ: ವಕೀಲ ಅರುಣ್​ ಶ್ಯಾಂ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × 2 =
Remember me
