ನವದೆಹಲಿ:ಕರೊನಾ ಕಾರಣ ಜಾಗತಿಕವಾಗಿ ಆರ್ಥಿಕ ಸಂಕಷ್ಟ ಇರುವ ಮಧ್ಯೆಯೇ ಭಾರತದಲ್ಲಿ ಎರಡು ದೊಡ್ಡ ಖಾಸಗಿ ಬ್ಯಾಂಕ್​ಗಳ ವಿಲೀನಕ್ಕೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಏಷ್ಯಾದ ಅತಿ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಉದಯ್ ಕೊಟಕ್ ಒಡೆತನದ ಕೊಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್, ಇಂಡಸ್​ಇಂಡ್ ಬ್ಯಾಂಕನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕವಾಗಿದೆ.
ಇವೆರಡು ಬ್ಯಾಂಕ್​ಗಳ ವಿಲೀನವಾದರೆ ದೇಶದಲ್ಲಿ 8ನೇ ಅತಿ ದೊಡ್ಡ ಬ್ಯಾಂಕ್ ರೂಪುಗೊಳ್ಳಲಿದ್ದು, -ಠಿ; 7 ಲಕ್ಷ ಕೋಟಿ ಮೌಲ್ಯದ ಆಸ್ತಿ ಹೊಂದಲಿವೆ. ಈ ಮೂಲಕ ಖಾಸಗಿ ವಲಯದ ಬ್ಯಾಂಕ್​ಗಳಲ್ಲಿ ಕೊಟಕ್ ಮಹಿಂದ್ರಾ-ಇಂಡಸ್​ಇಂಡ್ ಬ್ಯಾಂಕ್ ನಾಲ್ಕನೇ ಸ್ಥಾನಕ್ಕೆ ಏರಲಿದೆ. ಇಂಡಸ್​ಇಂಡ್ ಬ್ಯಾಂಕ್ ಖರೀದಿ ವಿಷಯದ ಬಗ್ಗೆ ಕೊಟಕ್ ಸಂಸ್ಥೆಯ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊಟಕ್ ಮಹಿಂದ್ರಾ ಮತ್ತು ಇಂಡಸ್​ಇಂಡ್ ಬ್ಯಾಂಕ್ ಎರಡೂ ಬ್ಯಾಂಕ್​ಗಳ ಮೇಲೂ ವಸೂಲಾಗದ ಸಾಲದ ಹೊರೆ ಶೇ. 3ರ ಆಸುಪಾಸಿನಲ್ಲಿ ಇದೆ. ಆದರೆ, ಇದರಿಂದ ವಿಲೀನಕ್ಕೆ ಹೆಚ್ಚಿನ ಹಾನಿ ಆಗುವುದಿಲ್ಲ. ಎರಡೂ ಬ್ಯಾಂಕ್​ಗಳ ಲೆಕ್ಕವನ್ನು ಸುರಕ್ಷಿತವಾಗಿ ನಿರ್ವಹಿಸಿದರೆ ಪ್ರಗತಿದಾಯಕವಾಗಲಿದೆ ಮತ್ತು ಈ ವಿಲೀನದಿಂದ ಕೊಟಕ್ ಮಹಿಂದ್ರಾ ಬ್ಯಾಂಕ್​ನ ಠೇವಣಿ ಶೇ. 81 ವೃದ್ಧಿಸಿ  4.70 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದು ತಜ್ಞರು ಅಭಿಪ್ರಾಯಟ್ಟಿದ್ದಾರೆ.

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:one + 17 =
Remember me
