ಒರಿಸ್ಸಾ:ಹಾವುಗಳು ನಾಡಿಗೆ ಬಂದು ಜನರನ್ನು ಹೆದರಿಸುವ ಪ್ರಸಂಗಗಳು ಅನೇಕ. ಅಂಥದ್ದೊಂದು ಪ್ರಸಂಗ ಕಾಮಗಾರಿ ಪ್ರದೇಶವೊಂದರಲ್ಲಿ ಕಂಡುಬಂದಿದ್ದು, ಭಾರಿ ಉದ್ದದ ಎರಡು ಹೆಬ್ಬಾವುಗಳು ಒಂದರ ಬೆನ್ನಿಗೆ ಒಂದರಂತೆ ಪತ್ತೆಯಾಗಿವೆ.
ಒರಿಸ್ಸಾದ ಬೆರ್ಹಂಪುರ್ ಜಿಲ್ಲೆಯ ಪಲ್ಲಿಗುಮುಲ ಗ್ರಾಮದಲ್ಲಿ ಜಲಾಶಯದ ಪ್ರದೇಶದಲ್ಲಿ ಪುನರ್​ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿಯೊಂದರ ಮೇಲೆ ಸ್ಥಳೀಯರು ಹಾವೊಂದನ್ನು ಕಂಡಿದ್ದಾರೆ. ತಕ್ಷಣ ಹಾವು ಹಿಡಿಯುವ ಪರಿಸರ ಸಂರಕ್ಷಕ ಸಂಘಟನೆಗೆ ಕರೆ ಮಾಡಿದ್ದಾರೆ.

“ಹಾವುಗಳನ್ನು ಸಂರಕ್ಷಿಸುವ ತಂಡವೊಂದಕ್ಕೆ ರಾತ್ರಿ 9ಕ್ಕೆ ಕರೆಬಂತು. ಹೋಗಿ ನೋಡಿದಾಗ ಒಂದು 7 ಅಡಿ ಉದ್ದದ ಹೆಬ್ಬಾವು ಜೆಸಿಬಿ ಮೇಲೆ ಕೂತಿತ್ತು. ಅದನ್ನು ಸುಲಭವಾಗಿ ಹಿಡಿದರೆ, ಮತ್ತೊಂದು 11 ಅಡಿ ಉದ್ದದ ಹೆಬ್ಬಾವು ಜೆಸಿಬಿಯ ಒಳಗಡೆ ಅಡಗಿ ಕುಳಿತಿದ್ದುದು ಕಂಡುಬಂತು. ನಾಲ್ಕು ಗಂಟೆ ಪ್ರಯತ್ನ ಪಟ್ಟ ನಂತರ ಆ ಹಾವನ್ನೂ ಹಿಡಿದೆವು” ಎಂದು ಹಾವುಗಳ ಸಂರಕ್ಷಕರಲ್ಲೊಬ್ಬರಾದ ಸ್ವಾಧೀನ್ ಕುಮಾರ್ ಸಾಹು ಹೇಳಿದ್ದಾರೆ. ಎರಡೂ ಹಾವುಗಳನ್ನು ಕಾಡಿನ ಒಳಗೆ ಬಿಡಲಾಗಿದೆ.

ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!

VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
