ಬೆಂಗಳೂರು:ರಾಷ್ಟ್ರಪತಿ ಭವನದಲ್ಲಿರುವ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ ಸಭಾಂಗಣವನ್ನು ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ್ ಮಂಟಪ’ ಎಂದು ಮರುನಾಮಕರಣ ಮಾಡಲಾಗಿದೆ.
ಇದನ್ನೂ ಓದಿ:ಮುಖ್ಯಮಂತ್ರಿಗಳ 1 ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಗುಡ್​ ನ್ಯೂಸ್​ : ಸರ್ಕಾರವೇ ಭರಿಸಲಿದೆ ಒಂದಿಷ್ಟು ವೆಚ್ಚ!
ರಾಷ್ಟ್ರಪತಿ ಭವನವನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಪ್ರಯತ್ನವಾಗಿ ಮುರುನಾಮಕರಣ ಮಾಡಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಪ್ರಕಟಣೆಯ ಮೂಲಕ ತಿಳಿಸಿದೆ.
ಗಣತಂತ್ರ ಮಂಟಪ ಮತ್ತು ಅಶೋಕ ಮಂಟಪವೆಂದು ಮರುನಾಮಕರಣ ಮಾಡಿರುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹರ್ಷ ವ್ಯಕ್ತಪಡಿಸಿದ್ದಾರೆ.ರಾಷ್ಟ್ರೀಯ ಪ್ರಶಸ್ತಿ ಪ್ರದಾನದಂತಹ ಪ್ರಮುಖ ಸಮಾರಂಭಗಳು ಮತ್ತು ಆಚರಣೆಗಳ ಸ್ಥಳವಾದ ದರ್ಬಾರ್ ಹಾಲ್ ಅನ್ನು ಗಣತಂತ್ರ ಮಂಟಪ ಎಂದು ಮರುನಾಮಕರಣ ಮಾಡಿದರೆ, ವಿಶೇಷ ಕಾರ್ಯಕ್ರಮಗಳಿಗೆ ಬಳಸುವ ಅಶೋಕ್ ಹಾಲ್ ಸಭಾಂಗಣವನ್ನು ಇನ್ನು ಮುಂದೆ ಅಶೋಕ್ ಮಂಟಪ ಎಂದು ಕರೆಯಲಾಗುತ್ತದೆ.

ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿ ದರ್ಬಾರ್‌ ಮತ್ತು ಹಾಲ್‌ ಪದವನ್ನು ಬದಲಾಯಿಸಲಾಗಿದೆ. ಭಾರತದ ರಾಜರ ಆಸ್ಥಾನಗಳಿಗೆ ಮತ್ತು ಬ್ರಿಟಿಷರ ನ್ಯಾಯಾಲಯಗಳಿಗೆ ದರ್ಬಾರ್ ಎಂದು ಕರೆಯಲಾಗುತ್ತಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ದರ್ಬಾರ್‌ ಅರ್ಥ ಕಳೆದುಕೊಂಡಿದೆ. ಹಿಂದಿನಿಂದಲೂ ಭಾರತೀಯ ಸಮಾಜದಲ್ಲಿ ಗಣತಂತ್ರ ಪರಿಕಲ್ಪನೆ ಇದೆ. ಈ ಕಾರಣಕ್ಕಾಗಿ ದರ್ಬಾರ್‌ ಹಾಲ್‌ಗೆ ಗಣತಂತ್ರ ಮಂಟಪ ಎಂದು ಹೆಸರನ್ನು ಇಡಲಾಗಿದೆ.

ಅಶೋಕ್ ಹಾಲ್’ ಸಾಂಸ್ಕೃತಿಕ ಸಭಾಂಗಣವಾಗಿದೆ. ಚಕ್ರವರ್ತಿ ಅಶೋಕನನ್ನು ಸೂಚಿಸುವುದರಿಂದ ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ. “ಅಶೋಕ್” ಎಂಬ ಪದವು ‘ಎಲ್ಲಾ ದುಃಖಗಳಿಂದ ಮುಕ್ತ ಅಥವಾ ‘ಯಾವುದೇ ದುಃಖದಿಂದ ದೂರವಿರುವ’ ವ್ಯಕ್ತಿಯನ್ನು ಸೂಚಿಸುತ್ತದೆ”. ಆಂಗ್ಲೀಕರಣದ ಕುರುಹುಗಳನ್ನು ತೆಗೆದುಹಾಕಲು ಹಾಲ್‌ ಪದವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬ್ರಿಟಿಷರು ಇಟ್ಟ ಹಲವಾರು ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ. ಆದರೆ ರಾಷ್ಟ್ರಪತಿ ಭವನದ ಹೆಸರು ಬದಲಾವಣೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸ್ವತಂತ್ರ ನಿರ್ಧಾರವಾಗಿದ್ದು ಇದರಲ್ಲಿ ಕೇಂದ್ರ ಸರ್ಕಾರ ಪಾತ್ರವಿಲ್ಲ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಮುರ್ಮು ಅವರು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ (ಪ್ರಧಾನಮಂತ್ರಿ ಸಂಗ್ರಹಾಲಯ) ಎಂದು ಮರುನಾಮಕರಣ ಮಾಡಿದ್ದರು.
ಬಿಜೆಪಿ ಅವಧಿಯಲ್ಲಿ ಅಕ್ರಮ ನಿವೇಶನ ಹಂಚಿಕೊಂಡಿರುವ ಪಟ್ಟಿ ಶೀಘ್ರ ಬಿಡುಗಡೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
