ತಿರುವನಂತಪುರ:ಬಸ್​ ಟಿಕೆಟ್ ಖರೀದಿ ಮಾಡಲು ಕೇವಲ 2 ರೂಪಾಯಿ ಕಡಿಮೆ ಇದ್ದಿದ್ದಕ್ಕೆ ರಾತ್ರಿ ಅಂತಾನೂ ನೋಡದೆ 8ನೇ ತರಗತಿ ವಿದ್ಯಾರ್ಥಿಯನ್ನು ಬಸ್​ನಿಂದ ಕೆಳಗೆ ಇಳಿಸಿದ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೊಲ್ಲಂ ಮೂಲದ ವಿದ್ಯಾರ್ಥಿನಿಯನ್ನು ಕೆಳಗೆ ಇಳಿಸಲಾಗಿದ್ದು, ಈ ಸಂಬಂಧ ಲೇಡಿ ಕಂಡಕ್ಟರ್​ ವಿರುದ್ಧ ದೂರು ದಾಖಲಾಗಿದೆ.
ವಿದ್ಯಾರ್ಥಿನಿಯನ್ನು ಸುಲೋಚನಾ ಎಂದು ಗುರುತಿಸಲಾಗಿದೆ. ಈಕೆ ಚೆರಿಜಿಕಾಲದ ನಿವಾಸಿ. ವಿದ್ಯಾರ್ಥಿನಿ ಬಸ್​ ಏರುತ್ತಿದ್ದಂತೆ ಲೇಡಿ ಕಂಡಕ್ಟರ್​ ಬಳಿ ಬಂದು ಆಂಟಿ ನನ್ನತ್ರ ಎರಡು ರೂಪಾಯಿ ಕೊರತೆ ಇದೆ ದಯವಿಟ್ಟು ಟಿಕೆಟ್​ ಕೊಡಿ ಎಂದು ಮನವಿ ಮಾಡಿದ್ದಾಳೆ.
ಆದರೆ, ಪೂರ್ತಿ ಹಣ ಕೊಟ್ಟರೆ ಮಾತ್ರ ಟಿಕೆಟ್​ ಕೊಡುತ್ತೇನೆ ಎಂದು ಕಂಡಕ್ಟರ್​ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ 2 ರೂಪಾಯಿ ನಾನು ಪಾವತಿಸುತ್ತೇನೆ ಎಂದು ಅಲ್ಲಿಯೇ ಇದ್ದ ಸಹಪ್ರಯಾಣಿಕರೊಬ್ಬರು ಹೇಳಿದ್ದಾರೆ. ಆದರೆ, ಅದಕ್ಕೂ ಸಮಯ ಕೊಡದೇ ಹುಡುಗಿಯನ್ನು ತಕ್ಷಣ ಬಸ್​ನಿಂದ ಕಂಡಕ್ಟರ್ ಇಳಿಸುವ ಮೂಲಕ ಅಮಾನವೀಯತೆ ಮೆರದಿದ್ದಾರೆ.
ಬಸ್​ನಿಂದ ಕೆಳಗೆ ಇಳಿದ ವಿದ್ಯಾರ್ಥಿನಿ ರಸ್ತೆಯಲ್ಲಿ ಅಳುತ್ತಾ ನಿಂತಿರುವುದನ್ನು ಕಂಡ ಮಹಿಳೆಯೊಬ್ಬರು ಆಕೆಯ ತಂದೆಯ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಕುಟುಂಬಸ್ಥರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.(ಏಜೆನ್ಸೀಸ್)
Independence Day: ರಾಜ್ಯದ 19 ಪೊಲೀಸ್​ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಯುಐ ಚಿತ್ರತಂಡದಿಂದ ಬಂತು ಬಿಗ್​ ಅಪ್​ಡೇಟ್​: ಆ. 16ಕ್ಕೆ ಮಹತ್ವದ ಘೋಷಣೆ, ಏನಿರಬಹುದು ಊಹಿಸಿ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + ten =
Remember me
