ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ನಡೆದ ಭದ್ರತಾ ಕಾರ್ಯಾಚರಣೆಗಳಲ್ಲಿ ಇಬ್ಬರು ಉಗ್ರವಾದಿಗಳನ್ನು ಸದೆಬಡಿಯಲಾಗಿದೆ. ಈ ಮೃತ ಉಗ್ರವಾದಿಗಳಲ್ಲಿ ಒಬ್ಬ ಇತ್ತೀಚಿಗೆ ವರದಿಯಾಗಿದ್ದ ನಾಗರಿಕ ಹತ್ಯೆಗೆ ಕಾರಣನಾಗಿದ್ದ ಇಮ್ತಿಯಾಜ್​ ಅಹ್ಮದ್​ ದರ್​ ಎಂಬ ಎಲ್​ಇಟಿ ಉಗ್ರವಾದಿ ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಬಂಡಿಪೋರ ಜಿಲ್ಲೆಯ ಗುಂದ್​ಜಹಂಗೀರ್​ ಎಂಬಲ್ಲಿ ಉಗ್ರವಾದಿಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಮೃತನಾದ ಇಮ್ತಿಯಾಜ್​, ಎಲ್​ಇಟಿಯ ‘ದ ರೆಸಿಸ್ಟೆನ್ಸ್​ ಫ್ರಂಟ್’​ ಉಗ್ರವಾದಿ ಗುಂಪಿಗೆ ಸೇರಿದವನಾಗಿದ್ದು, ಬಂಡಿಪೋರದ ಶಹಗುಂದ್​ ಪ್ರದೇಶದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್​ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ:ಕುಡಿವ ನೀರಲ್ಲಿ ಸತ್ತ ಮಹಿಳೆ ಕಾಲು ಪತ್ತೆ: ದೇಹದ ಉಳಿದ ಭಾಗವೆಲ್ಲಿ? ಖಾಕಿಗೆ ಕಗ್ಗಂಟಾದ ಕೇಸ್​
ಅನಂತನಾಗ್​ ಜಿಲ್ಲೆಯ ವೆರಿನಾಗ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಆತಂಕವಾದಿ ಹತನಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಒಂದು ಪಿಸ್ತೂಲ್ ಮತ್ತು ಹ್ಯಾಂಡ್​ ಗ್ರೆನೇಡ್​ಅನ್ನು ಸ್ಥಳದಿಂದ ಜಪ್ತಿಪಡಿಸಿಕೊಳ್ಳಲಾಗಿದೆ.(ಏಜೆನ್ಸೀಸ್)
ಸರಗಳ್ಳನನ್ನು ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್
ಮೇಡ್​ ಇನ್​ ಚೈನಾ ಕಾರನ್ನು ಭಾರತದಲ್ಲಿ ಮಾರಬೇಡಿ ಅಂತ ಟೆಸ್ಲಾಗೆ ಹೇಳಿದೀನಿ – ಸಾರಿಗೆ ಸಚಿವ ನಿತಿನ್ ಗಡ್ಕರಿ
ಟಾಟಾ ಕಂಪೆನಿ ತೆಕ್ಕೆಗೆ ಏರ್​ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eighteen =
Remember me
