ಮುಂಬೈ:ಕೊರೊನಾ ವೈರಸ್​ ತಗುಲಿರುವ ಶಂಕೆಯಲ್ಲಿ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಮೂವರಲ್ಲಿ ಇಬ್ಬರ ವೈದ್ಯಕೀಯ ವರದಿ ಬಂದಿದೆ. ಈ ಇಬ್ಬರಿಗೂ ಕೊರೊನಾ ವೈರಸ್​ ಸೋಂಕು ತಗುಲಿಲ್ಲ ಎಂದು ವರದಿಯಿಂದ ಗೊತ್ತಾಗಿದೆ. ಆದರೆ ಅವರಿಬ್ಬರ ಆರೋಗ್ಯದ ಮೇಲೆ ಇನ್ನೂ ಕೆಲವು ದಿನಗಳ ಕಾಲ ನಿಗಾ ವಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಹಾಗೇ ಶುಕ್ರವಾರ ಅಡ್ಮಿಟ್ ಆಗಿರುವ ಓರ್ವನ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​​ ವೈರಾಲಜಿ ಕೇಂದ್ರಕ್ಕೆ ಕಳಿಸಲಾಗಿದ್ದು ಇನ್ನೂ ರಿಪೋರ್ಟ್​ ಬಂದಿಲ್ಲ.
ಸದ್ಯ ಕೊರೊನಾ ವೈರಸ್​ ನೆಗೆಟಿವ್​ ಎಂದು ವರದಿ ಬಂದಿರುವ ಇಬ್ಬರನ್ನೂ ಬೃಹನ್ಮುಂಬೈ ಕಸ್ತೂರ ಬಾ ಮುನ್ಸಿಪಲ್​ ಕಾರ್ಪೋರೇಷನ್​ನ ಕಸ್ತೂರ್​ ಬಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿ ಅಬ್ಸರ್ವೇಶನ್​ನಲ್ಲಿ ಇಡಲಾಗಿದೆ. ಅವರನ್ನು ಡಿಸ್​ಚಾರ್ಜ್​ ಮಾಡುವ ಬಗ್ಗೆ ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೇ ಮೂರನೇ ವ್ಯಕ್ತಿಯ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫರ್​ ವೈರಾಲಜಿ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಮುಂಬೈ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕೊರೊನಾ ಭೀತಿಯಿಂದ ಪಾರಾಗಿರುವ ಇಬ್ಬರು ಚೀನಾಕ್ಕೆ ಪ್ರವಾಸ ಹೋಗಿ ಬಂದಿದ್ದರು. ಅವರು ಜ.23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೇ ಇನ್ನೋರ್ವ ವ್ಯಕ್ತಿ ಹಾಂಗ್​ಕಾಂಗ್​ನಿಂದ ಬಂದು ನಿನ್ನೆ ಅಡ್ಮಿಟ್​ ಆಗಿದ್ದರು.ಕೊರೊನಾ ವೈರಸ್​ ಪತ್ತೆಹಚ್ಚಲು ಜನವರಿ 19ರಿಂದ ಜ.24ರವರೆಗೆ ಮುಂಬೈನ ಛತ್ರಪತಿ ಶಿವಾಜಿ ವಿಮಾನನಿಲ್ದಾಣದಲ್ಲಿ ಒಟ್ಟು 2056 ಪ್ರಯಾಣಿಕರನ್ನು ಥರ್ಮಲ್​ ಸ್ಕ್ರೀನಿಂಗ್​ಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
