ಚೆನ್ನೈ:ಮಕ್ಕಳು ಕಾರಿನಲ್ಲಿ ಆಡುವಾಗ ಪಾಲಕರು ಎಚ್ಚರಿಕೆ ವಹಿಸುವುದು ತುಂಬಾನೇ ಅವಶ್ಯಕ. ಏನೆಲ್ಲಾ ಅವಘಡಗಳು ಸಂಭವಿಸಿವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಸ್ವಲ್ಪ ಯಾಮಾರಿದ್ರೂ ಏನಾಗಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.
ಇದನ್ನೂ ಓದಿ:ಮಗಳ ಆತ್ಮಹತ್ಯೆ ಸೇಡಿಗೆ ಯುವಕನ ಬರ್ಬರ ಕೊಲೆ: ವರ್ಷದಿಂದ ನಡೆದಿತ್ತು ಭಾರಿ ಸಂಚು
ಕಾರಿನಲ್ಲಿ ಆಟವಾಡುತ್ತಿದ್ದ ಮಕ್ಕಳಿಬ್ಬರು ಉಸಿರುಗಟ್ಟಿ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಕುಲದೀಪ ಮಂಗಳಂನಲ್ಲಿ ಗುರುವಾರ ನಡೆದಿದೆ. ಮೃತರನ್ನು ವನಿತಾ (4) ಮತ್ತು ರಾಜಿ (7) ಎಂದು ಗುರುತಿಸಲಾಗಿದೆ. ತಮ್ಮ ಮನೆಯ ಪಕ್ಕದಲ್ಲಿ ಪಾರ್ಕ್​ ಮಾಡಲಾಗಿದ್ದ ಮಾರುತಿ ಸ್ವಿಫ್ಟ್​ ಕಾರಿನಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರಿನ ಬಾಗಿಲು ಲಾಕ್​ ಆಗಿ, ಸುಮಾರು 2 ಗಂಟೆಗಳ ಕಾಲ ಇಬ್ಬರು ಹೊರಬರಲಾಗದೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.
ಕಾರಿನಲ್ಲಿ ಸಮಸ್ಯೆ ಇದ್ದುದ್ದರಿಂದ ಮಾಲೀಕ ಒಂದೂವರೆ ವರ್ಷದಿಂದ ಕಾರನ್ನು ತೆಗೆಯದೇ ಒಂದೇ ಸ್ಥಳದಲ್ಲಿ ಪಾರ್ಕ್​ ಮಾಡಿದ್ದರು. ಮಕ್ಕಳು ಈ ಮುಂಚೆಯೂ ಕಾರಿನಲ್ಲಿ ಆಟವಾಡುತ್ತಿದ್ದರು. ಕಾರು ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದ ರಾಜಾ ಎಂಬುವರಿಗೆ ಸೇರಿದ್ದಾಗಿತ್ತು. ಎಂದಿನಂತೆಯೇ ಮಕ್ಕಳು ಕಾರಿನಲ್ಲಿ ಆಡಲು ತೆರಳಿದ್ದಾರೆ. ಆದರೆ, ಅವರ ದುರಾದೃಷ್ಟವಶಾತ್​ ಅಂದು ಕಾರು ಇದ್ದಕ್ಕಿದ್ದಂತೆ ಲಾಕ್​ ಆಗಿದೆ. ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿದ್ದ ಮಕ್ಕಳಿಗೆ ಆಮ್ಲಜನಕ ಕೊರತೆಯಿಂದ ಉಸಿರಾಡಲು ತೊಂದರೆಯುಂಟಾಗಿ. ಇತ್ತ ಕಾರಿನ ಕಿಟಕಿಗಳು ಸಹ ಮುಚ್ಚಿದ್ದರಿಂದ ಎಷ್ಟೇ ಕೂಗಿಕೊಂಡರು ಯಾರಿಗೂ ಕೇಳಿಸಿಲ್ಲ. ಹೀಗಾಗಿ ಸಾಕಷ್ಟು ಒದ್ದಾಡಿ ಮಕ್ಕಳು ಕಾರಿನಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ಮನಲುರ್​​ಪೆಟ್ಟೈ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪತ್ನಿ ತವರಿನಲ್ಲಿದ್ದ ವೇಳೆ ಪರಸ್ತ್ರೀ ಜತೆ ಬೈಕ್​ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಬೆನ್ನಟ್ಟಿದ ಸಾವು
ಮಧ್ಯಾಹ್ನ ಆಟವಾಡಲು ಹೊರಹೋದ ಮಕ್ಕಳು ಮರಳಿ ಬರಲೇ ಇಲ್ಲವಲ್ಲ ಎಂದು ಗಾಬರಿಗೊಂಡ ಪಾಲಕರು ಅವರಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಸಮೀಪದಲ್ಲೇ ಇದ್ದ ಕಾರಿನ ಬಳಿ ಹೋಗಿ ನೋಡಿದಾಗ ಮಕ್ಕಳಿಬ್ಬರು ಪ್ರಜ್ಞೆಯಿಲ್ಲದೆ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಧೃಢಪಡಿಸಿದಾಗ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ರಿಕ್ಷಾ ಚಲಾಯಿಸಿಕೊಂಡು ಹೋಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಶಾ ಕಾರ್ಯಕರ್ತೆಗೆ ಉಪರಾಷ್ಟ್ರಪತಿ ಶ್ಲಾಘನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
