ನವದೆಹಲಿ:ಕರೊನಾ ಹೆಚ್ಚುತ್ತಿದ್ದಂತೆ ಹಲವು ರಾಜ್ಯಗಳು ಲಾಕ್​ಡೌನ್​ಗೆ ಮೊರೆ ಹೋಗಿವೆ. ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಲಾಕ್​ಡೌನ್​ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ಲಾಕ್​ಡೌನ್​ ಘೋಷಿಸಿದಾಗ, ಜನರಿಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂಬುದು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಇದು ಜನರಲ್ಲಿ ಅಸಮಾಧಾನವನ್ನು ಹುಟ್ಟು ಹಾಕಿತ್ತು. ಈ ಕಾರಣ ಕಾರಣಗಳಿಂದಾಗಿ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಲಾಕ್​ಡೌನ್​ ಮುನ್ನ ಘೋಷಣೆ ಮಾಡಲಾಗಿದೆ. ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ;ಜುಲೈ 31ರ ವರೆಗೆ ಲಾಕ್​ಡೌನ್​; ಶಾಲಾ-ಕಾಲೇಜುಗಳು ಬಂದ್​; ಕರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆಲ್ಲಿ?
ಗುವಾಹಟಿಯಲ್ಲಿ ಸೋಮವಾರದಿಂದ ( ಜೂನ್​ 27) 14 ದಿನಗಳವರೆಗೆ ಸಂಪೂರ್ಣ ಲಾಕ್​ಡೌನ್​ ಇರಲಿದೆ. ರಾತ್ರಿ 7 ಗಂಟೆಯಿಂದ ಬೆಳಗಿನ 7 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಹಿಮಾಂತ್​ ಬಿಸ್ವ ಸರ್ಮ ಹೇಳಿದ್ದಾರೆ. ಇಡೀ ಕಾಮರೂಪ್​ ಜಿಲ್ಲೆಗೆ ಅನ್ವಯಿಸಲಿದೆ.
ಲಾಕ್​ಡೌನ್​ ಅವಧಿಯಲ್ಲಿ ಔಷಧ ಅಂಗಡಿಗಳು ಆಸ್ಪತ್ರೆಗಳು ಮಾತ್ರ ತೆರೆದಿರಲಿವೆ. ಹೀಗಾಗಿ ಭಾನುವಾರವೇ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಇಟ್ಟುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಇತರ ನಗರ ಹಾಗೂ ನಗರಸಭೆ ಪ್ರದೇಶಗಳಲ್ಲೂ ಲಾಕ್​ಡೌನ್​ ಇರಲಿದ್ದು, ವಾರಾಂತ್ಯದಲ್ಲಿ ಅಗತ್ಯ ಸೇವೆಗಳನ್ನು ಪಡೆದುಕೊಳ್ಳು ಅವಕಾಶವಿರಲಿದೆ. ಬ್ಯಾಂಕ್​​ಗಳು ಸೀಮಿತ ಅವಧಿಗೆ ತೆರದಿರಲಿವೆ.
ಇದನ್ನೂ ಓದಿ;ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ
ಜೂನ್​ 15ರ ನಂತರ ಗುವಾಹಟಿಯಲ್ಲಿ 700 ಹೊಸ ಪ್ರಕರಣಗಳು ವರದಿಯಾಗಿವೆ. ಈ ಕಾರಣಕ್ಕಾಗಿ ಲಾಕ್​​ಡೌನ್​ ಜಾರಿಗೊಳಿಸಲಾಗುತ್ತಿದೆ. ಗುರುವಾರವಷ್ಟೇ ಗುವಾಹಟಿಯೊಂದರಲ್ಲಿಯೇ 133 ಪ್ರಕರಣಗಳು ಪತ್ತೆಯಾಗಿವೆ.ಅಸ್ಸಾಮ್​ನಲ್ಲಿ ಸದ್ಯ 6321 ಪ್ರಕರಣಗಳಿದ್ದು, ಈ ಪೈಕಿ 2,279 ಸಕ್ರಿಯವಾಗಿವೆ. ಒಟ್ಟು 9 ಜನರು ಮೃತಪಟ್ಟಿದ್ದಾರೆ.
ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
