ತಮಿಳುನಾಡು:ಧರ್ಮಪುರಿ ಜಿಲ್ಲೆಯ ಹರೂರ್ ಗ್ರಾಮದಲ್ಲಿ ತೋಟದ ಕೆಲಸಕ್ಕೆ ಬಂದಿದ್ದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ ನೀಡುತ್ತಿದ್ದ ಗೌಂಡರ್ ಸಮುದಾಯದ ಮಹಿಳೆ ಮತ್ತು ಆಕೆಯ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಬೈನಲ್ಲೂರು ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಫೇವರೆಟ್ ಫುಡ್ ಯಾವ್ದು ಗೊತ್ತಾ?
ತಾರತಮ್ಯ ಎಸಗಿದ ಆರೋಪದಲ್ಲಿ ಇಬ್ಬರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಮಾರಪ್ಪನಾಯ್ಕನಪಟ್ಟಿ ನಿವಾಸಿಗಳಾದ ಚಿನ್ನತಾಯಿ (60) ಮತ್ತು ಆಕೆಯ ಸೊಸೆ ಬಿ ಧರಣಿ (32) ಬಂಧಿತರು.
ಪೊಲಂಪಾಳ್ಯಂ ಮೂಲದ 50 ವರ್ಷದ ದಲಿತ ಮಹಿಳೆ ಜಿ ಸೆಲ್ಲಿ ನೀಡಿದ ದೂರಿನ ಅನ್ವಯ ಅತ್ತೆ ಸೊಸೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಲ್ಲಿ ಅವರು ಅವರು ಪೊಲಂಪಾಳ್ಯಂ ನಿವಾಸಿಗಳಾದ ಆರ್ ಶ್ರೀಪ್ರಿಯಾ (38), ವಿ ವೀರಮ್ಮಾಳ್ (55) ಮತ್ತು ಕೆ ಮಾರಿಯಮ್ಮಾಳ್ (60) ಜತೆ ಚಿನ್ನತಾಯಿ ಕುಟುಂಬದ ಕೃಷಿ ಭೂಮಿಯಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.ಈ ದೃಶ್ಯವನ್ನು ಚಿತ್ರೀಕರಿಸಿದ ವಿಡಿಯೋದಲ್ಲಿ ಕೆಲವು ಕೃಷಿ ಕಾರ್ಮಿಕರಿಗೆ ಮಹಿಳೆಯೊಬ್ಬರು ತೆಂಗಿನ ಚಿಪ್ಪಿನಲ್ಲಿ ಚಹಾವನ್ನು ನೀಡುತ್ತಿರುವುದನ್ನು ತೋರಿಸಿದ ನಂತರ ಪೋಲೀಸರ ಕ್ರಮ ಕೈಗೊಂಡಿದ್ದಾರೆ.  “ಗುರುವಾರದಂದು ಅವರಿಬ್ಬರೂ ನಮಗೆ ತೆಂಗಿನ ಗೆರಟೆಯಲ್ಲಿ ಟೀ ನೀಡಿದ್ದರು. ಈ ಹಿಂದೆ ಕೂಡ ಇದೇ ರೀತಿ ನಮಗೆ ಚಹಾ ಕೊಟ್ಟಿದ್ದರು” ಎಂದು ಸೆಲ್ಲಿ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ದಾರಿಯಲ್ಲಿ ಹೋಗುತ್ತಿದ್ದ ಅನಾಮಿಕ ವ್ಯಕ್ತಿಗಳು ಈ ಘಟನೆಯ ವಿಡಯೋವನ್ನು ಚಿತ್ರೀಕರಿಸಿದ್ದಾರೆ. ನಂತರ ಅವರು ಮಹಿಳೆಯರ ಸಾಕ್ಷ್ಯವನ್ನು ದಾಖಲಿಸಿದ್ದಾರೆ. ದಲಿತರಲ್ಲದವರಿಗೆ ಗ್ಲಾಸ್‌ನಲ್ಲಿ ಚಹಾ ಮತ್ತು ದಲಿತರಿಗೆ ತೆಂಗಿನ ಚಿಪ್ಪಿನಲ್ಲಿ (ಅಥವಾ ಪ್ರತ್ಯೇಕ ಪಾತ್ರೆಯಲ್ಲಿ) ಚಹಾವನ್ನು ಬಡಿಸುವ ಅಭ್ಯಾಸವು ಈಗಲೂ ಇದೆ ಎಂದು ತಿಳಿದು ಆಘಾತವಾಯಿತು ಎಂದು ಮಹಿಳೆಯೊಬ್ಬರು ಹೇಳಿದರು.
ಊರಿನಲ್ಲಿ ಜಾತಿ ತಾರತಮ್ಯ ಅಧಿಕ:ಮಾರಪ್ಪನಾಯ್ಕನಪಟ್ಟಿ ಗ್ರಾಮದಲ್ಲಿ ಬಹುತೇಕ ದಲಿತೇತರರು ತಾರತಮ್ಯ ಎಸಗುತ್ತಿದ್ದಾರೆ. ದೇವಸ್ಥಾನ ಹಾಗೂ ಕೆಲಸ ಮಾಡುವ ಜಾಗ ಎರಡೂ ಕಡೆ ನಮ್ಮನ್ನು ದೂರವಿಡಲಾಗುತ್ತಿದೆ ಎಂದು ಶ್ರೀಪ್ರಿಯಾ ದೂರಿದ್ದಾರೆ.ಈ ಆರೋಪಗಳನ್ನು ನಿರಾಕರಿಸಿರುವ ಗೌಂಡರ್ ಸಮುದಾಯದ ಎಂ ಶಿವ (38), ಇದು ಪ್ರಚಾರದ ತಂತ್ರ ಎಂದು ಪ್ರತ್ಯಾರೋಪ ಮಾಡಿದ್ದಾರೆ.ಶುಕ್ರವಾರ ದೂರು ದಾಖಲಾದ ಕೂಡಲೇ ಅಂದೇ ವಿಚಾರಣೆ ನಡೆಸಿದ್ದೆವು ಎಂದು ಕಂಬೈನಲ್ಲೂರು ಪೊಲೀಸ್ ಇನ್‌ಸ್ಪೆಕ್ಟರ್ ಪಿ ಕಾಳಿಯಪ್ಪನ್ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
