ಭೋಪಾಲ್ :ಪಾಕಿಸ್ತಾನಿ ಗೂಢಾಚಾರಿ ಸಂಸ್ಥೆ ಐಎಸ್​ಐ ಆಪರೇಟೀವ್​ಗಳೆಂದು ಶಂಕಿಸಲಾದ ಪಾಕಿಸ್ತಾನೀಯರೊಂದಿಗೆ ಸಂಪರ್ಕ ಬೆಳೆಸಿಕೊಂಡಿರುವ ಇಬ್ಬರು ಭಾರತೀಯ ಸೋದರಿಯರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಇಂಡೋರ್​ ನಗರದ ಸಮೀಪ ಇರುವ ಮ್ಹೌ ಕಂಟೋನ್​ಮೆಂಟ್​ನ ನಿವಾಸಿಗಳಾದ ಈ ಮಹಿಳೆಯರ ಮೇಲೆ ಭಾರತದಿಂದ ಪ್ರಮುಖ ಮಾಹಿತಿಗಳನ್ನು ಕಳುಹಿಸಿ ಗೂಢಚಾರಿಕೆಯಲ್ಲಿ ತೊಡಗಿದ್ದರೆಂಬ ಗುಮಾನಿ ಇದೆ ಎನ್ನಲಾಗಿದೆ.
ಇಂಡೋರ್​ ಪೊಲೀಸರು ಮತ್ತು ಮಿಲಿಟರಿ ಇಂಟೆಲಿಜೆನ್ಸ್​ ಅಧಿಕಾರಿಗಳು ಬಂಧಿತ ಮಹಿಳೆಯರೊಂದಿಗೆ ಪ್ರಶ್ನೋತ್ತರ ನಡೆಸುತ್ತಿದ್ದು, ಅವರ ಪಾಕಿಸ್ತಾನಿ ಸಂಪರ್ಕಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. 32 ಮತ್ತು 28 ವರ್ಷ ವಯೋಮಾನದ ಈ ಸಹೋದರಿಯರು ಮ್ಹೌ ಎಂದೇ ಕರೆಯಲಾಗುವ ಡಾ. ಅಂಬೇಡ್ಕರ್​ ನಗರದ ಗಾವ್ಲಿ ಪಾಲಾಸಿಯಾ ಎಂಬಲ್ಲಿ ಶಾಲಾ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಹಾಡುಹಗಲೇ ಯುವಕನ ಬರ್ಬರ ಹತ್ಯೆ; ಬೆಚ್ಚಿ ಬೀಳಿಸುತ್ತೆ ಈ ಘಟನೆ
ಒಂದು ವರ್ಷದಿಂದ ಪಾಕಿಸ್ತಾನದ ಪುರುಷರೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಗುರುತಿನೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಅವರ ಮೊಬೈಲ್ ಫೋನ್​ಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳು ಐಎಸ್​ಐ ಆಪರೇಟೀವ್​ಗಳಾಗಿದ್ದು, ಪಾಕಿಸ್ತಾನದ ನಿವೃತ್ತ ಅಥವಾ ಸೇವಾನಿರತ ಸೇನೆ ಮತ್ತು ನೌಕಾ ದಳದ ಅಧಿಕಾರಿಗಳೆಂದು ಭಾವಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)
ಭರವಸೆ ಕಳೆದುಕೊಳ್ಳಬೇಡಿ, ಧೈರ್ಯವಾಗಿರಿ : ‘ಆರ್ಮಿ’ಗೆ ಬಿಟಿಎಸ್​​ ಸಂದೇಶ !

ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಜಿಲ್ಲಾಧಿಕಾರಿ ಸಸ್ಪೆಂಡ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eighteen =
Remember me
