ಪಣಜಿ, ಗೋವಾ:ಬೆಳ್ಳಂಬೆಳಗ್ಗೆ ಮನೆಯೊಳಗೆ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡ ಹಿನ್ನೆಲೆ 26 ವರ್ಷದ ಮಹಿಳೆ ಮತ್ತು ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ (ನ.18) ಗೋವಾದ ವಾಸ್ಕೋದಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಉತ್ತರಕಾಶಿ ಸುರಂಗ ಕುಸಿತ: ಸ್ಥಳಕ್ಕೆ ಪ್ರಧಾನಿ ಕಾರ್ಯಾಲಯ ತಂಡ- ರಕ್ಷಣಾ ಕಾರ್ಯ ಚುರುಕು
ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ ಶಿವಾನಿ ರಾಜಾವತ್ ಮತ್ತು ಆಕೆಯ 65 ವರ್ಷದ ಅತ್ತೆ ಜೈದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂದಿನಂತೆ ಇಂದು ಬೆಳಗ್ಗೆ ಕೂಡ ಅಡುಗೆ ಮನೆಗೆ ತೆರಳಿದ ಮಹಿಳೆ, ಅಡುಗೆ ಅನಿಲ ಸಿಲಿಂಡರ್ ಆನ್​ ಮಾಡಲು ಹೋದಾಗ ಅದು ಸ್ಫೋಟಗೊಂಡಿದೆ. ಘಟನೆ ಸಂಭವಿಸಿದ ವೇಳೆ ವಾಸ್ಕೋದ ನ್ಯೂ ವಡ್ಡೆಮ್ ಕಾಲೋನಿಯಲ್ಲಿನ ಮನೆಯಲ್ಲಿ ಇವರಿಬ್ಬರೇ ಮಹಿಳೆಯರು ಇದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಶ್ರೇಯಸ್ ಇನ್ನು ಸಿಂಗಲ್ ಅಲ್ಲವೇ, ಹಾಗಾದ್ರೆ ಅಯ್ಯರ್ ಜೊತೆ ಯಾವಾಗಲೂ ಕಾಣಿಸಿಕೊಳ್ಳುವ ಆ ಮಿಸ್ಟರಿ ಗರ್ಲ್ ಯಾರು?
ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಫೋರೆನ್ಸಿಕ್ ತಜ್ಞರ ತಂಡವು ವಿಶ್ಲೇಷಣೆಗಾಗಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).
ಆತಂಕದಿಂದ ಅರ್ಥವಿಲ್ಲದ ಹೇಳಿಕೆಗಳು!; ಅಷ್ಟಕ್ಕೂ ಸಿಎಂ ಮಾತು ಯಾರಿಗೆ ಅನ್ವಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 14 =
Remember me
