ಲಖನೌ:ಕರೊನಾ ಮಹಾಮಾರಿಗೆ ತುತ್ತಾಗುವ ಹಲವರಿಗೆ ಆಕ್ಸಿಜನ್​ ಕೊರತೆ ಉಂಟಾಗುತ್ತದೆ. ಕೃತಕ ಆಕ್ಸಿಜನ್​ ಪೂರೈಕೆಯಿಂದಲೇ ಉಸಿರಾಡುವ ಸ್ಥಿತಿಯಲ್ಲಿ ಅವರಿರುತ್ತಾರೆ. ಆದರೆ ಇದೇ ರೀತಿ ಉಸಿರಾಟಕ್ಕೆ ತೊಂದರೆಯಾಗಿ ಆಕ್ಸಿಜನ್​ ಪಡೆಯುತ್ತಿದ್ದ ಮಹಿಳೆಗೆ ಆಕೆಯ ಸಂಬಂಧಿಕರು ಆಕ್ಸಿಜನ್​ ಪೂರೈಕೆ ನಿಲ್ಲಿಸಿ, ಆಸ್ಪತ್ರೆಯ ಬೆಡ್​ ಮೇಲೇ ಪೂಜೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಆ ಮಹಿಳೆಗೆ ಕರೊನಾ ದೃಢವಾಗಿತ್ತು. ಕಾನ್ಪುರದ ಜಿಎಸ್​ವಿಎಂ ಮೆಡಿಕಲ್​ ಕಾಲೇಜ್​ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಆ ದಿನ ರಾತ್ರಿ ಆಕೆಯ ಸಂಬಂದಿಕ ಮಹಿಳೆಯರಿಬ್ಬರು ಸೋಂಕಿತೆಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿದ್ದ ನರ್ಸ್​ಗೆ, ನೀವು ಕೊಡುವ ಔಷಧದಿಂದ ಯಾರೂ ಗುಣವಾಗುವುದಿಲ್ಲ, ಇದು ದೆವ್ವದ ಕಾಟ ಎಂದು ಬೈದಿದ್ದಾರೆ. ನಂತರ ಸೋಂಕಿತೆಯ ಬಳಿ ಹೋಗಿ ಕುಳಿತು, ಆಕೆಗೆ ಕೊಡಲಾಗಿದ್ದ ಆಕ್ಸಿಜನ್​ ಅನ್ನು ತೆಗೆದಿದ್ದಾರೆ. ಬೆಡ್​ ಮೇಲೇ ಕುಳಿತು ಏನೇನೋ ಪೂಜೆ ಮಾಡಿ ಮಂತ್ರಗಳನ್ನು ಹೇಳಲಾರಂಭಿಸಿದ್ದಾರೆ. ಯಾರು ಎಷ್ಟೇ ಹೇಳಿದರೂ ಕೇಳದೆ ಪೂಜೆಯನ್ನು ಮುಂದುವರಿಸಿದ್ದಾರೆ.
ಇದಾದ ಕೆಲ ಕ್ಷಣದಲ್ಲಿ ಸೋಂಕಿತೆ ಸಾವನ್ನಪ್ಪಿದ್ದಾಳೆ. ಆಗ ಉಲ್ಟಾ ಹೊಡೆದ ಮಹಿಳೆಯರು ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಕೂಗಾಡಿದ್ದಾರೆ. ಈ ಎಲ್ಲ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ರಾತ್ರಿ ವೇಳೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಸಂಖ್ಯೆ ಕಡಿಮೆಯಿರುತ್ತದೆ. ಅದೇ ಸಮಯಕ್ಕೆ ಬಂದ ಮಹಿಳೆಯರಿಂದ ಇಂತಹ ಅನಾಹುತವಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)
ಕರೊನಾ ಗೆದ್ದವರಲ್ಲಿ ಉಳಿದಿರುವ ಔಷಧ ಸಂಗ್ರಹಿಸಿ ಬಡ ಸೋಂಕಿತರಿಗೆ ಹಂಚುವ ವೈದ್ಯ ಜೋಡಿ
ಬಿಗ್​ಬಾಸ್​ ಮನೆಯಿಂದ ಅರ್ಧಕ್ಕೆ ಎಲಿಮಿನೇಟ್ ಆದ ಬಗ್ಗೆ ಕೊನೆಗೂ ಶಾಕಿಂಗ್ ಹೇಳಿಕೆ ನೀಡಿದ ರಾಜೀವ್​!​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − four =
Remember me
