ಚೆನ್ನೈ:ರಮ್ಮಿ ಮತ್ತು ಪೋಕರ್​ನಂಥ ಆನ್​ಲೈನ್ ಜೂಜಾಟಗಳಲ್ಲಿ ತೊಡಗಿದವರಿಗೆ ಎರಡು ವರ್ಷದವರೆಗಿನ ಜೈಲು ಶಿಕ್ಷೆ ವಿಧಿಸುವ ಕಾನೂನು ತರಲು ತಮಿಳುನಾಡು ಸರ್ಕಾರ ಮುಂದಾಗಿದೆ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್​ ಬಳಸಿ ಜೂಜು ಅಥವಾ ಬೆಟ್ಟಿಂಗ್​ ಉಳ್ಳ ಆನ್​ಲೈನ್ ಗೇಮ್ಸ್ ಆಡುವುದನ್ನು ನಿಷೇಧಿಸುವುದಕ್ಕೆ ವಿವಿಧ ಕಾನೂನುಗಳಿಗೆ ತಿದ್ದುಪಡಿ ತರುವ ವಿಧೇಯಕವನ್ನು ರಾಜ್ಯ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಗಿದೆ.
ಈ ತಿದ್ದುಪಡಿ ವಿಧೇಯಕವು ಅಂಗೀಕೃತವಾದಲ್ಲಿ ಆನ್​ಲೈನ್​ ಮಾಧ್ಯಮದಲ್ಲಿ ವೇಗರ್ ಅಥವಾ ಬೆಟ್​ ಹೊಂದಿರುವ ಯಾವುದೇ ಆಟಗಳನ್ನು ಆಡುವುದು ಅಪರಾಧವಾಗಲಿದೆ. ಈ ರೀತಿಯ ಜೂಜಾಟಗಳನ್ನು ಆಯೋಜಿಸುವುದು ಕೂಡ ಅಪರಾಧವಾಗಲಿದ್ದು, ಯಾವುದಾದರೂ ಕಂಪೆನಿಯು ಈ ಕೃತ್ಯದಲ್ಲಿ ತೊಡಗಿದಲ್ಲಿ ಕಂಪೆನಿ ಮಾಲೀಕರೊಂದಿಗೆ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೂಡ ಶಿಕ್ಷೆಗೆ ಗುರಿಯಾಗಲಿದ್ದಾರೆ. ತಪ್ಪಿತಸ್ಥರಿಗೆ ಎರಡು ವರ್ಷದವರೆಗಿನ ಜೈಲು ಶಿಕ್ಷೆ ಅಥವಾ ಹತ್ತು ಸಾವಿರ ರೂಪಾಯಿವರೆಗಿನ ದಂಡ ಅಥವಾ ಈ ಎರಡೂ ಶಿಕ್ಷೆಗಳನ್ನು ವಿಧಿಸುವ ಪ್ರಸ್ತಾವನೆ ವಿಧೇಯಕದಲ್ಲಿದೆ.
ಇದನ್ನೂ ಓದಿ:ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!
“ಇತ್ತೀಚೆಗೆ ರಮ್ಮಿ, ಪೋಕರ್ ಇತ್ಯಾದಿ ಆಟಗಳನ್ನು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸಿ ದುಡ್ಡಿಗಾಗಿ ಇಲ್ಲ ಇತರ ಸ್ಟೇಕ್ಸ್​ಗಾಗಿ ಆಡುತ್ತಿರುವುದು ಹೆಚ್ಚಿದೆ. ಇದರಿಂದ ಮುಗ್ಧ ಜನರು ವಂಚನೆಗೊಳಗಾಗಿದ್ದು, ಆತ್ಮಹತ್ಯೆಯ ಘಟನೆಗಳು ಕೂಡ ವರದಿಯಾಗಿವೆ. ಆದ್ದರಿಂದ ಆನ್​ಲೈನ್​ ಜೂಜಾಟದ ದುಷ್ಪರಿಣಾಮಗಳಿಂದ ಜನರನ್ನು ಕಾಪಾಡಲು ಕಾನೂನು ಅವಶ್ಯಕವಾಗಿದೆ” ಎಂದು ವಿಧೇಯಕದ ಆಶಯಗಳಲ್ಲಿ ವಿವರಿಸಲಾಗಿದೆ.
ಈ ಮುನ್ನ ತಮಿಳುನಾಡು ರಾಜ್ಯ ಸರ್ಕಾರವು 2020ರ ನವೆಂಬರ್ ​ತಿಂಗಳಲ್ಲಿ ಆನ್​ಲೈನ್ ಜೂಜನ್ನು ನಿಷೇಧಿಸಿ ಸುಗ್ರೀವಾಜ್ನೆ ಜಾರಿಗೊಳಿಸಿತ್ತು. ಅದರ ಸ್ಥಾನದಲ್ಲಿ, ತಮಿಳುನಾಡು ಗೇಮಿಂಗ್ ಆ್ಯಕ್ಟ್​ – 1930, ಚೆನ್ನೈ ಸಿಟಿ ಪೊಲೀಸ್ ಆ್ಯಕ್ಟ್ -1888 ಮತ್ತು ತಮಿಳುನಾಡು ಜಿಲ್ಲಾ ಪೊಲೀಸ್ ಕಾಯ್ದೆ – 1859 ಇವುಗಳಿಗೆ ಕೆಲವು ಬದಲಾವಣೆಗಳನ್ನು ಮಾಡಿ ಕಾನೂನು ಜಾರಿಗೊಳಿಸಲು ಈ ಮೂಲಕ ಸರ್ಕಾರ ಮುಂದಾಗಿದೆ.(ಏಜೆನ್ಸೀಸ್)
ಕರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!
ಅತ್ತ ಅಮೆರಿಕದಲ್ಲಿ ಟೆಕ್ಕಿ ಪತಿ ವಾಸ: ಇತ್ತ ಮಗಳ ಜತೆ ಮಹಿಳೆ ನೇಣಿಗೆ ಶರಣಾಗಿದ್ದೇಕೆ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + ten =
Remember me
