ಅಹ್ಮದ್‌ನಗರ:ಆನ್​ಲೈನ್​ ಗೇಮಿಂಗ್ ಪಬ್​ಜಿ ಮೂಲಕ ಬಾಲಕಿಯ ಸ್ನೇಹವನ್ನು ಗಳಿಸಿ ಆಕೆಯನ್ನು ಅಪಹರಿಸಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ನಡೆದಿದೆ.ಇದನ್ನೂ ಓದಿ:ಆ ಪಕ್ಷ ಸೇರೋ ಬದಲು ಬಾವಿಗೆ ಹಾರುತ್ತೇನೆ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ!ಅಕ್ರಮ್ ಶೇಖ್ ಮತ್ತು ನೆಮತುಲ್ಲಾ ಎಂಬುವರೇ ಆರೋಪಿಗಳಾಗಿದ್ದು, ಬಿಹಾರದಿಂದ ಮಹಾರಾಷ್ಟ್ರಕ್ಕೆ ಬಂದು ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದಾರೆ. ಸದ್ಯ ಇವರನ್ನು ಸಂಗಮನೇರ್ ಪೊಲೀಸರು ಬಂಧಿಸಿದ್ದಾರೆ.ಘಟನೆ ಹಿನ್ನೆಲೆ:ಬಾಲಕಿಯನ್ನು ಆರೋಪಿ ಅಕ್ರಮ್​ ಹಾಗೂ ನೆಮತುಲ್ಲಾ ಪಬ್​ಜಿ ಗೇಮ್ ಮೂಲಕ ಪರಿಚಯ ಮಾಡಿಕೊಂಡು ನಂತರ ಆಕೆಯ ನಂಬರ್​ನ್ನು ಪಡೆದಿದ್ದರು. ನಿಧಾನವಾಗಿ ಆಕೆಯ ಸ್ನೇಹವನ್ನು ಬೆಳೆಸಿದ್ದ ಆರೋಪಿಗಳು ಬಾಲಕಿಯನ್ನು ಭೇಟಿಯಾಗಲು ಬಿಹಾರದಿಂದ ಸಂಗಮನೇರ್​ ನಗರಕ್ಕೆ ಬಂದು ಹೋಟೆಲ್​ನಲ್ಲಿ ರೂಮ್ ಬುಕ್ ಮಾಡಿದ್ದರು. ಆರೋಪಿಗಳು ಬಾಲಕಿಯನ್ನು ಭೇಟಿಯಾಗಲು ಹೋಟೆಲ್ ಕೊಠಡಿಗೆ ಕರೆದಿದ್ದಾರೆ.ಆದರೆ ಬಾಲಕಿಯು ಹೋಟೆಲ್ ಕೋಣೆಗೆ ಹೋಗಲು ನಿರಾಕರಿಸಿದ್ದಾಳೆ. ಕೊನೆಗೆ ರಸ್ತೆಯಲ್ಲೇ ಆಕೆಯನ್ನು ಆರೋಪಿಗಳು ಭೇಟಿಯಾಗಿ ಅಲ್ಲಿಂದ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಆರೋಪಿಗಳ ಪೈಕಿ ಅಕ್ರಮ್​ ಬಾಲಕಿಯನ್ನು ಮದುವೆಯಾಗುವ ಬಗ್ಗೆ ಮಾತನಾಡಿದ್ದಾನೆ. ಆದರೆ, ಹುಡುಗಿ ಇದಕ್ಕೆ ನಿರಾಕರಿಸಿದ್ದಾಳೆ.ಇದನ್ನೂ ಓದಿ:ಮಹಿಳೆಯರಿಗೆ ಪ್ರಯಾಣ ಉಚಿತ ಎಂದು ಇಡೀ KSRTC ಬಸ್​ ಬುಕ್​ ಮಾಡಲು ಬಂದ ಅಜ್ಜಿ!ಆಕೆಯ ನಿರಾಕರಣೆಯ ನಂತರ ಆರೋಪಿಗಳು ಬಾಲಕಿಯನ್ನು ಬಲವಂತವಾಗಿ ಬಿಹಾರಕ್ಕೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಇದಾದ ಬಳಿಕ ಬಾಲಕಿಯು ಕಿರುಚಾಡಿದ್ದು, ಆಕೆಯ ಶಬ್ದವನ್ನು ಕೇಳಿದ ದಾರಿಹೋಕರು ಸೇರಿಕೊಂಡು ಬಾಲಕಿಗೆ ಸಹಾಯ ಮಾಡಿದ್ದಾರೆ. ಕೊನೆಗೆ ಆರೋಪಿಗಳನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಬಾಲಕಿಯ ದೂರಿನ ನಂತರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 19 =
Remember me
