ಮೀರತ್​:ಕಳ್ಳತನವೆಂದಾಕ್ಷಣ ಹಣ, ಚಿನ್ನಾಭರಣ ನಿಮ್ಮ ತಲೆಗೆ ಬರಬಹುದು. ಆದರೆ ಈ ಕಳ್ಳರು ಹಾಗಲ್ಲ. ಇವರು ಕದ್ದಿದ್ದು ಚಿನ್ನ ಅಥವಾ ಹಣವನ್ನಲ್ಲ. ಹೆಣ್ಣು ಮಕ್ಕಳು ತೊಳೆದು ಒಣೆಸಿದ್ದ ಒಳಉಡುಪು ಕದ್ದು ಪೂರ್ತಿ ಸಮಾಜದೆದುರು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ ಈ ಯುವಕರು.
ಉತ್ತರ ಪ್ರದೇಶದ ಮೀರತ್​ನಲ್ಲಿ ಇಂತದ್ದೊಂದು ಕಳ್ಳತನ ನಡೆದಿದೆ. ಮಾರ್ಚ್​ 14ರಂದು ಮೊಹಮದ್​ ಅಬ್ದುಲ್ಲ ಹೆಸರಿನ ಯುವಕ ತನ್ನ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಬಂದು ಒಂದು ಮನೆಯ ಬಳಿ ಗಾಡಿ ನಿಲ್ಲಿಸುತ್ತಾನೆ. ಅಲ್ಲೇ ಒಣಹಾಕಲಾಗಿದ್ದ ಹೆಣ್ಣು ಮಕ್ಕಳ ಒಳಉಡುಪನ್ನು ಎತ್ತಿಕೊಂಡು ಬಂದು ಅದನ್ನು ಗಾಡಿಯೊಳಗೆ ಇಟ್ಟುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸಕತ್​ ವೈರಲ್​ ಆಗಿದೆ.
ಸಂಜಯ್ ಚೌಧರಿ ಎಂಬ ನಿವಾಸಿಯು ಅದೇ ದಿನದಂದು ಸದರ್ ಬಜಾರ್ ಪೊಲೀಸರಿಗೆ ಈ ಕುರಿತಾಗಿ ದೂರು ನೀಡಿದ್ದಾರೆ. ಯುವಕರು ನನ್ನ ಮಕ್ಕಳ ಒಳಉಡುಪು ಕದ್ದಿರುವುದನ್ನು ನಾನೇ ವಿಡಿಯೋ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಬ್ದುಲ್ಲ ಮತ್ತು ಆತನ ಸ್ನೇಹಿತ ರೋಮಿನ್​ ಅನ್ನು ವಶಕ್ಕೆ ಪಡೆಯಲಾಗಿದೆ. ತಮಾಷೆಗಾಗಿ ಒಳಉಡುಪು ಕದ್ದಿರುವುದಾಗಿ ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
'ಪ್ಯಾಂಟಿ ಚೋರ್​ ಅಬ್ದುಲ್​' ವೈರಲ್​ ವಿಡಿಯೋ ನೋಡಿ..ಉತ್ತರ ಪ್ರದೇಶದ ಮೀರತ್​ನಲ್ಲಿ ಇಬ್ಬರು ಯುವಕರು, ಹೆಣ್ಣು ಮಕ್ಕಳ ಒಳಉಡುಪು ಕದ್ದಿರುವ ವಿಡಿಯೋವಿದು… ಈ ವಿಡಿಯೋ ಟ್ವಿಟ್ಟರ್​ ಮತ್ತು ಫೇಸ್​ಬುಕ್​ನಲ್ಲಿ ಸಕತ್​ ವೈರಲ್​ ಆಗಿದೆ.#Video#Meerut#UPpic.twitter.com/IS7MgXkFnO
— Vijayavani (@VVani4U)March 17, 2021

ಅಪ್ಪ ಅಮ್ಮನಿಗೆ ಕನ್ನಡದಲ್ಲೇ ವಿಷ್​ ಮಾಡಿದ ಅನುಷ್ಕಾ ಶೆಟ್ಟಿ! ನಿಜವಾದ ಕನ್ನಡ ಪ್ರೇಮವೆಂದರೆ ಇದೇ ಎಂದ ನೆಟ್ಟಿಗರು

ಉಳುಕು ನೋವಿಂದ ಆಸ್ಪತ್ರೆಗೆ ಹೋದ ಯುವತಿಗೆ ಶಾಕ್​: 25 ವರ್ಷ ಬಳಿಕ ಗೊತ್ತಾಯ್ತು ತಾನು ಹೆಣ್ಣಲ್ಲ, ಗಂಡೆಂದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
