ಸಿಯೋನಿ:ಅವರಿಬ್ಬರೂ ಸಹೋದರಿಯರು. ಅದರಲ್ಲೊಬ್ಬಳು ಅಪ್ರಾಪ್ತೆ. ಅಂದರೆ 16ರ ಬಾಲೆ. ಮತ್ತೊಬ್ಬಳು 18ರ ಯುವತಿ. ಇಬ್ಬರೂ ತಮ್ಮ ತಮ್ಮ ಪ್ರಿಯತಮರೊಂದಿಗೆ ಪ್ರಣಯದ ಉತ್ತುಂಗದಲ್ಲಿದ್ದರು.ಹಾಗೊಂದು ದಿನ ಅವರಲ್ಲೊಬ್ಬ ಪ್ರೇಮಿ, ಪ್ರೇಮದ ಗುಂಗಲ್ಲಿ ತನ್ನ ಪ್ರಿಯತಮೆಗೆ ಕಳುಹಿಸುವ ಸಂದೇಶವನ್ನು ಅಚಾನಕ್ ಆಗಿ ಆಕೆಯ ತಂದೆಗೆ ಕಳುಹಿಸಿಬಿಟ್ಟಿದ್ದಾನೆ… ಆ ಸಂದೇಶವನ್ನು ಮನೆಯ ಸದಸ್ಯರೆಲ್ಲರೂ ನೋಡಿದ್ದಾರೆ. ಇದೊಂದು ಯಡವಟ್ಟು ಆ ಇಬ್ಬರೂ ಹುಡುಗಿಯರಿಗೆ ಮಾರಣಾಂತಿಕವಾಗಿದೆ.
ಇದನ್ನು ಓದಿ:ಎಣ್ಣೆ ಮತ್ತಿನಲ್ಲಿದ್ದವರು ವೃದ್ಧನನ್ನು ನೂರೈವತ್ತು ಬಾರಿ ಚಚ್ಚಿ ಕೊಂದರು. ಆ ಕ್ರೌರ್ಯ ಕೇಳಿದರೆ ನೀವೂ ಮೂರ್ಛೆ ಹೋಗುತ್ತೀರಿ…
ತಮ್ಮ ಪ್ರಣಯದ ಗುಟ್ಟು ರಟ್ಟಾಯಿತೆಂದು ನೊಂದ ಇಬ್ಬರು ಸಹೋದರಿಯರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ತಮ್ಮ ಕುಟುಂಬದವರಿಗೆ ತಮ್ಮ ಪ್ರೇಮದ ವಿಷಯ ತಿಳಿದಿದೆ ಎಂದು ಭಯಗೊಂಡ ಅವರು ಸೋಮವಾರ ಸಂಜೆ ಮನೆ ತೊರೆದಿದ್ದರು ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ  :ಸೂಪರ್​ಸ್ಟಾರ್ ಮಹೇಶ್ ಬಾಬು ಜನ್ಮದಿನದಂದು ರಾಜಮೌಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರಾ?
ಅವರಿಬ್ಬರಿಗಾಗಿ ಶೋಧ ಕಾರ್ಯ ನಂತರ, ಮರುದಿನ ಗ್ರಾಮದ ಹೊರಗಿನ ಬಾವಿಯಲ್ಲಿ ಅವರ ಶವಗಳು ಪತ್ತೆಯಾಗಿವೆ. ಇಬ್ಬರ ಶವಗಳು ಕೊಂಡ್ರಾ ಗ್ರಾಮದ ಬಾವಿಯಲ್ಲಿ ತೇಲುತ್ತಿರುವಂತೆ ಕಂಡುಬಂದಿದ್ದವೆಂದು ಪೊಲೀಸರು ತಿಳಿಸಿದ್ದಾರೆ.  ಪರಾರಿಯಾಗಿರುವ ಆ ಇಬ್ಬರೂ ಹುಡುಗಿಯರ ಪ್ರಿಯತಮರನ್ನು ಹುಡುಕಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದು, ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
