ರಾಯ್‌ಪುರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದ ಇಬ್ಬರು ಯುವಕರಿಗೆ ಬುದ್ಧಿ ಹೇಳಿದ 60ರ ವಯೋ ವೃದ್ಧದನ್ನು ನೂರೈವತ್ತು ಬಾರಿ ಕತ್ತರಿಸಿ ಬಂಡೆಗಲ್ಲಿಗೆ ಚಚ್ಚಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.  ಈ ಘಟನೆ ಛತ್ತೀಸಗಢದ ಭಿಲಾಯ್​​ನಲ್ಲಿ ಸೋಮವಾರ ನಡೆದಿದೆ.ಆರೋಪಿಗಳನ್ನು ಲೋಕೇಶ್ ಸಾಹು ಮತ್ತು ದುರ್ಗೇಶ್ ಸಾಹು ಹಾಗೂ ಮೃತ ವ್ಯಕ್ತಿ ರಾಮ್ ಚೌಹಾಣ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಪಿಯುಸಿ ಟಾಪರ್‌ ಅಪಘಾತದಲ್ಲಿ ಸಾವು: ಘಟನೆಯ ಹಿಂದಿದೆ ಕಾಣದ ಕೈ?
ಘಟನೆಯ ದಿನ, ಚೌಹಾಣ್, ಕೃಷ್ಣನಗರ ಪ್ರದೇಶದಲ್ಲಿ ಊಟದ ನಂತರ ವಾಕ್ ಮಾಡುತ್ತಿದ್ದಾಗ ಇಬ್ಬರು ಯುವಕರು ಆತನ ಮನೆಯ ಸಮೀಪ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿರುವುದನ್ನು ಗಮನಿಸಿದರು. ಆರಂಭದಲ್ಲಿ, ಆತ ಅವರಿಗೆ ಏನೂ ಹೇಳಲಿಲ್ಲ. ಆದರೆ ಅವರು ಮತ್ತೆ ಅವರು ಅದನ್ನು ಮುಂದುವರಿಸಿದಾಗ ಚೌಹಾಣ್ ಕೋಪಗೊಂಡ.ಅವರ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದನು ಮತ್ತು ಅವರಿಬ್ಬರನ್ನೂ ಬೇರೆ ಸ್ಥಳದಲ್ಲಿ ನಿಲ್ಲುವಂತೆ ತಿಳಿಸಿದ. ಕೋಪಗೊಂಡ ಅವರಿಬ್ಬರೂ 60 ವರ್ಷದ ಚೌಹಾಣ್​​​​ನೊಂದಿಗೆ ಜಗಳ ಪ್ರಾರಂಭಿಸಿದರು.
ಇದನ್ನೂ ಓದಿ:ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌
ಆತನನ್ನು ಥಳಿಸಿ ಅವನ ಮನೆಗೆ ತಳ್ಳಿದರು. ಅಷ್ಟೇ ಅಲ್ಲದೆ ಆ ಇಬ್ಬರೂ ಚೌಹಾನ್ ನ ಕಿರಿಯ ಮಗನನ್ನು ಬೆನ್ನಟ್ಟಿ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅವರನ್ನು ಒಳಗೆ ಹಾಕಿ ಬಾಗಿಲನ್ನು ಲಾಕ್ ಮಾಡಿದರು.ಆರೋಪಿಗಳಲ್ಲಿ ಒಬ್ಬಾತ ಬ್ಲೇಡ್ ನಿಂದ ಚೌಹಾಣ್​​​ ಕೊಯ್ದ. ಮತ್ತೊಬ್ಬಾತ ಚೌಹಾನ್ ಓಡಿಹೋಗದಂತೆ ತಡೆಯಲು ಆತನ ಕಾಲುಗಳಿಗೆ ಇಟ್ಟಿಗೆಯಿಂದ ಹೊಡೆಯಲು ಪ್ರಾರಂಭಿಸಿದ. ಅತನ ತಲೆಯನ್ನು ಬಂಡೆಗೆ ಚಚ್ಚಿದ.  ಆತ ಪೊಲೀಸರಿಗೆ ಮಾಹಿತಿ ನೀಡಲು ಮುಂದಾದರೆ ಆತನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು.  ಚೌಹಾಣ್​​ನ ಮಗ ಮನೆಗೆ ಬಂದಾಗ ತಂದೆಯ ವಿಕಾರಗೊಂಡ ದೇಹಸ್ಥಿತಿ ನೋಡಿ ಗಾಬರಿಗೊಂಡು ಆಸ್ಪತ್ರೆಗೆ ಕರೆದೊಯ್ದ. ಅದಾಗಲೇ ಆತನ ತಂದೆ ಸಾವಿಗಿಡಾಗಿದ್ದ ಎಂದು ಪೊಲಿಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸೂಪರ್​ಸ್ಟಾರ್ ಮಹೇಶ್ ಬಾಬು ಜನ್ಮದಿನದಂದು ರಾಜಮೌಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರಾ?
ಪೊಲೀಸರು ಸೋಮವಾರ ಬೆಳಿಗ್ಗೆ ಆರೋಪಿಗಳನ್ನು ಬಂಧಿಸಿದ್ದು, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆರೋಪಿ ಯುವಕರು ಘಟನೆಯ ವಿವರವನ್ನು ಪೊಲೀಸರಿಗೆ ಸಲ್ಲಿಸಿದ್ದು, ಅವರು ಆ ದಿನ ಮದ್ಯದ ಅಮಲಿನಲ್ಲಿದ್ದುದಾಗಿ ಹೇಳಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಇಬ್ಬರು ಯುವಕರೂ ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ.
ನಟ ಸಂಜಯ್‌ ದತ್‌ಗೆ ಕ್ಯಾನ್ಸರ್‌ – ಚಿಕಿತ್ಸೆಗೆ ವಿದೇಶದ ಪ್ರಯಾಣ ಸಾಧ್ಯತೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + three =
Remember me
