ಮುಂಬೈ:ಜಿಕಾ ವೈರಸ್‌ನ ಎರಡನೇ ಪ್ರಕರಣ ಮುಂಬೈನಲ್ಲಿ ಪತ್ತೆಯಾದ ಬಗ್ಗೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮಂಗಳವಾರ (ಸೆಪ್ಟಂಬರ್ 05) ಅಧಿಕೃತವಾಗಿ ತಿಳಿಸಿದೆ. ಈ ಹಿಂದೆ ಮೊದಲ ಪ್ರಕರಣ ಆಗಸ್ಟ್ 23 ರಂದು ವರದಿಯಾಗಿತ್ತು.
ಇದನ್ನೂ ಓದಿ:ಕತ್ತಲೆ ಭಾಗ್ಯ ಕುರುಣಿಸಿದ ಕಾಂಗ್ರೆಸ್ ಸರ್ಕಾರ; ಮಾಜಿ ಇಂಧನ ಸಚಿವ ಟೀಕೆ
ಜಿಕಾ ವೈರಸ್​ಗೆ ತುತ್ತಾದ ಎರಡನೇ ರೋಗಿಯು ಪೂರ್ವ ಮುಂಬೈನ ಉಪನಗರ ಕುರ್ಲಾದ 15 ವರ್ಷದ ಬಾಲಕಿಯಾಗಿದ್ದು, ಈ ಕೇಸ್​ ನಾಗರಿಕ ಸಂಸ್ಥೆಯ ಎಲ್-ವಾರ್ಡ್‌ನ ವ್ಯಾಪ್ತಿಗೆ ಸೇರಿದೆ ಎಂದು ಬಿಎಂಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇತರ ರೋಗಗಳನ್ನು ಹೊಂದಿರುವ ಬಾಲಕಿ ಆಗಸ್ಟ್ 20 ರಿಂದ ಜ್ವರ ಮತ್ತು ತಲೆನೋವಿನ ಬಗ್ಗೆ ದೂರು ನೀಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ.
ಮಂಗಳವಾರ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ನಿಗಮ ತಿಳಿಸಿದೆ. ಜಿಕಾ ವೈರಸ್ ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಈ ಸೋಂಕು ಗರ್ಭಾವಸ್ಥೆಯಲ್ಲಿ ಮಗುವಿನಲ್ಲಿ ಕೆಲವು ಜನ್ಮ ದೋಷಗಳನ್ನು ಉಂಟುಮಾಡಬಹುದು. ಜ್ವರ, ತಲೆನೋವು, ಕೀಲು ನೋವು, ಕೆಂಪಾದ ಕಣ್ಣುಗಳು ಮತ್ತು ಸ್ನಾಯು ನೋವಿನಂತಹ ಲಕ್ಷಣಗಳನ್ನು ಹೊಂದಿದೆ. ಇದಕ್ಕೆ ಸದ್ಯ ಯಾವುದೇ ಲಸಿಕೆ ಅಥವಾ ಔಷಧಿಯಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ದೇಶದಲ್ಲಿಯೇ ಮೊದಲ ‘ಭೂಗತ ವಿದ್ಯುತ್ ಪರಿವರ್ತಕ’ಕ್ಕೆ ಚಾಲನೆ ಇದರ ವಿಶೇಷತೆಗಳೇನು ಗೊತ್ತಾ?
ಚೆಂಬೂರಿನ 79 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೆ ಒಳಗಾದ ಬೆನ್ನಲ್ಲೇ ನಗರದಲ್ಲಿ ಮೊದಲ ಜಿಕಾ ಪ್ರಕರಣವನ್ನು ಆಗಸ್ಟ್ 23 ರಂದು ಘೋಷಿಸಿದ ಬಿಎಂಸಿ, ಸೋಂಕಿನಿಂದ ವ್ಯಕ್ತಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದೆ,(ಏಜೆನ್ಸೀಸ್).
ಧನುಷ್​ ನಟಿಸಲಿರುವ ‘ತೇರೆ ಇಷ್ಕ್ ಮೇ​​’ ಚಿತ್ರಕ್ಕೆ ಈ ಟಾಪ್​ ನಟಿಯೇ ಹೀರೋಯಿನ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × three =
Remember me
