ನವದೆಹಲಿ:ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಘೋಷಣೆ ಮಾಡಿದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುಪಿಎಸ್​​​ನಲ್ಲಿ ‘ಯು’ ಎಂದರೆ ಮೋದಿ ಸರ್ಕಾರದ ಯು-ಟರ್ನ್ ಎಂದು ವ್ಯಂಗ್ಯ ಮಾಡಿದರು.
ಇದನ್ನು ಓದಿ:ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಅಪರಾಧ; ತಪ್ಪಿತಸ್ಥರನ್ನು ಉಳಿಸಬಾರದೆಂದು ‘ನಮೋ’ ಸೂಚನೆ
ಲೋಕಸಭಾ ಚುನಾವಣೆಯ ನಂತರ ಪ್ರತಿಪಕ್ಷಗಳ ಪುನಶ್ಚೇತನದಿಂದಾಗಿ ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಪ್ರಮುಖ ನಿರ್ಧಾರಗಳಿಂದ ಹಿಂದೆ ಸರಿಯಲು ಪ್ರಾರಂಭಿಸಿದೆ. ಜೂನ್ 4ರ ನಂತರ ಪ್ರಧಾನಿಯವರ ಅಧಿಕಾರದ ದುರಹಂಕಾರದ ಎದುರು ಜನರ ಮೇಲುಗೈ ಸಾಧಿಸಿದೆ.
ದೀರ್ಘಾವಧಿಯ ಬಂಡವಾಳ ಲಾಭ/ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಹಿಂತೆಗೆದುಕೊಳ್ಳುವುದು, ಜಂಟಿ ಸಂಸದೀಯ ಸಮಿತಿಗೆ ವಕ್ಫ್ ಮಸೂದೆಯನ್ನು ಕಳುಹಿಸುವುದು, ಕರಡು ಪ್ರಸಾರ ಮಸೂದೆಯನ್ನು ಹಿಂಪಡೆಯುವುದು ಮತ್ತು ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಪ್ರವೇಶವನ್ನು ಕೊನೆಗೊಳಿಸುವುದು ಹೀಗೆ ನರೇಂದ್ರ ಮೋದಿ ಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳನ್ನು ಖರ್ಗೆ ಪ್ರಸ್ತಾಪಿಸಿದರು.
The ‘U’ in UPS stands for Modi Govt’s U turns!Post June 4, the power of the people has prevailed over the arrogance of power of the Prime Minister.— Rollback in the budget regarding Long Term Capital Gain / Indexation— Sending Waqf Bill to JPC— Rollback of Broadcast…pic.twitter.com/DJbDoEyl6g
ಏಕೀಕೃತ ಪಿಂಚಣಿ ಯೋಜನೆ ಎಂದರೇನು?:ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಖಾತ್ರಿ ಪಿಂಚಣಿ ಭರವಸೆ ನೀಡುವ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಶನಿವಾರ (ಆಗಸ್ಟ್​​ 24) ಅನುಮೋದನೆ ನೀಡಿತು. ಯುಪಿಎಸ್ ಆಯ್ಕೆ ಮಾಡಿಕೊಳ್ಳುವ ಉದ್ಯೋಗಿಗಳು 25 ವರ್ಷಗಳ ಕನಿಷ್ಠ ಅರ್ಹತಾ ಸೇವೆಗಾಗಿ ನಿವೃತ್ತಿಯ ಮೊದಲು ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇಕಡಾ 50ಕ್ಕೆ ಸಮಾನವಾದ ಪಿಂಚಣಿಗೆ ಅರ್ಹರಾಗಿರುತ್ತಾರೆ. ಈ ಯೋಜನೆಯು ಕನಿಷ್ಟ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ನಂತರ ತಿಂಗಳಿಗೆ ಕನಿಷ್ಠ 10,000 ರೂಪಾಯಿಗಳ ಪಿಂಚಣಿಯನ್ನು ಖಾತರಿಪಡಿಸುತ್ತದೆ.(ಏಜೆನ್ಸೀಸ್​​)
ಮಿಸ್​ ಇಂಡಿಯಾದಲ್ಲಿ ಮೀಸಲಾತಿ ವಿಚಾರ; ರಾಹುಲ್​ಗಾಂಧಿ ಹೇಳಿಕೆ ಬಾಲಿಶ ಎಂದು ಕೇಂದ್ರ ಸಚಿವ ವ್ಯಂಗ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
