ಟೋಕಿಯೋ:ಬಾಹ್ಯಾಕಾಶ ಸಂಶೋಧಕರ ಕುತೂಹಲದ ತಾಣವಾಗಿರುವ ಮಂಗಳ ಗ್ರಹದ ಅಧ್ಯಯನಕ್ಕೆ ಇದೇ ಮೊದಲ ಬಾರಿಗೆ ಅರಬ್‌ ಬಾಹ್ಯಾಕಾಶ ಮಿಷನ್‌ ಕೈಗೊಂಡಿದೆ.
ಹವಾಮಾನ ಏರುಪೇರಾಗಿರುವ ಕಾರಣ, ಉಡಾವಣೆ ತಡವಾದರೂ ಕೊನೆಗೂ ಯುಎಇ ತನ್ನ ಮೊದಲ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ಅರೇಬಿಕ್ ಭಾಷೆಯಲ್ಲಿ “ಅಲ್-ಅಮಲ್” ಎಂದು ಕರೆಯಲ್ಪಡುವ ಮಾನವರಹಿತ ರಾಕೆಟ್ ಅನ್ನು ದಕ್ಷಿಣ ಜಪಾನ್‌ನ ತನೆಗಶಿಮಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
ಜಪಾನ್‌ನಿಂದ ‘ಹೋಪ್‌’ ನಭಕ್ಕೆ ಯಶಸ್ವಿಯಾಗಿ ಜಿಗಿದಿದೆ. ಜಪಾನ್‌ನ ರಾಕೆಟ್‌ ಮೂಲಕ ‘ಹೋಪ್‌’ ಶೋಧಕ ಗಗನನೌಕೆ ಉಡಾವಣೆ ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಉಡಾವಣೆಯಾಗಿ ಒಂದು ಗಂಟೆಯ ನಂತರ ಉಪಗ್ರಹ ರಾಕೆಟ್‌ನಿಂದ ಬೇರ್ಪಟ್ಟಿದೆ. ಇದರ ನೇರ ಪ್ರಸಾರ ಕೂಡ ಮಾಡಲಾಗಿತ್ತು.
ಇದನ್ನೂ ಓದಿ:ಅಂತೂ ಸಿಕ್ಕಿಬಿದ್ಳು ಸರ್ಕಾರವನ್ನೇ ಯಾಮಾರಿಸಿದ ಶ್ರೀಮಂತ ಅಜ್ಜಿ!
ಈ ‌ಮಾನವ ರಹಿತ ಗಗನ ಶೋಧಕವನ್ನು ಹೊತ್ತ ರಾಕೆಟ್‌ ದಕ್ಷಿಣ ಜಪಾನ್‌ನ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6:58ಕ್ಕೆ (ಅಲ್ಲಿನ ಕಾಲಮಾನ) ನಭದತ್ತ ಚಿಮ್ಮಿದೆ ಎಂದು ರಾಕೆಟ್ ತಯಾರಕ ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಹೇಳಿಕೆಯಲ್ಲಿ ತಿಳಿಸಿದೆ.
ರಾಕೆಟ್‌ನಿಂದ ಶೋಧಕ ಯಶಸ್ವಿಯಾಗಿ ಬೇರ್ಪಡುತ್ತಿದ್ದಂತೆ ಜಪಾನ್‌ನ ನಿಯಂತ್ರಣ ಕೊಠಡಿಯಲ್ಲಿ ಜನರು ಹರ್ಷದಿಂದ ಕುಣಿದು ಕುಪ್ಪಳಿಸಿದರು. ಈ ಯೋಜನೆಯು ಮಂಗಳ ಗ್ರಹಕ್ಕೆ ಉಡಾವಣೆಯಾಗಲಿರುವ ಮೂರು ರೇಸಿಂಗ್ ರಾಕೆಟ್ ಉಡಾವಣೆಯಲ್ಲಿ ಒಂದಾಗಿದೆ, ಇದರಲ್ಲಿ ಚೀನಾದ ಟೈನ್ವೆನ್ -1 ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಮಾರ್ಸ್ 2020 ಸೇರಿವೆ, ಭೂಮಿ ಮತ್ತು ಮಂಗಳವು ಹತ್ತಿರವಿರುವ ಅವಧಿಯ ಲಾಭವನ್ನು ಪಡೆದು ಈ ಬಾರಿ ಉಡಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ನೀಡಿದ್ದಾರೆ.(ಏಜೆನ್ಸೀಸ್‌)
ಬಾಲಕಿಯ ರೇಪ್‌-ಮರ್ಡರ್‌: ಭುಗಿಲೆದ್ದ ಹಿಂಸಾಚಾರ- ಅಶ್ರುವಾಯು ಪ್ರಯೋಗ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve + 12 =
Remember me
