ಬೆಂಗಳೂರು:ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋ ಪ್ರಯುಕ್ತ ಮುನ್ನೆಚ್ಚರಿಕೆಯ ಕ್ರಮವಾಗಿ ಫೆಬ್ರವರಿ 8 ರವರೆಗೆ ನಗರದಲ್ಲಿ ಯಾವುದೇ ಅನ್​ಮ್ಯಾನ್ಡ್​ ಏರಿಯಲ್​ ವೆಹಿಕಲ್​(ಯುಎವಿ)ಗಳನ್ನು, ಡ್ರೋನ್ ಅಥವಾ ಬಲೂನುಗಳನ್ನು ಹಾರಿಸುವಂತಿಲ್ಲ ಎಂದು ಬೆಂಗಳೂರು ಜಿಲ್ಲಾ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಯಲಹಂಕದಲ್ಲಿ ಫೆಬ್ರವರಿ 3 ರಿಂದ 5 ರವರೆಗೆ ಏರೋ ಇಂಡಿಯಾ ಶೋ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಳು ಆಗಲೇ ಆರಂಭಗೊಂಡಿದ್ದು, ಭಾರೀ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಫೆಬ್ರವರಿ 1 ರಿಂದ 8 ರವರೆಗೆ ಸಬ್​-ಕನ್ವೆಂಷನಲ್ ಆದ ಯಾವುದೇ ಚಾಲಕರಿಲ್ಲದ ಏರಿಯಲ್ ವೆಹಿಕಲ್​(ಯುಎವಿ)ಗಳನ್ನು ಹಾರಿಸುವುದರ ಮೇಲೆ ನಿಷೇಧ ಹೇರಲಾಗಿದೆ. ರೋಬೋಟಿಕ್ ಡಿವೈಸ್​ಗಳು, ಪ್ಯಾರಾ-ಗ್ಲೈಡರ್, ಸಣ್ಣ ಏರ್​ಕ್ರಾಫ್ಟ್, ಮೈಕ್ರೋ-ಲೈಟ್ಸ್, ಡ್ರೋನ್ ಅಥವಾ ಕ್ವಾಡ್​ಕ್ಯಾಪ್ಟರ್ ಮತ್ತು ಬಲೂನುಗಳನ್ನೂ ಹಾರಿಬಿಡುವ ಹಾಗಿಲ್ಲ ಎಂದು ಆಯುಕ್ತರಾದ ಕಮಲ್ ಪಂತ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೇಗೂರು ರಸ್ತೆಯ ಬಳಿ ಮತ್ತೆ ಕಾಣಿಸಿಕೊಂಡ ಚಿರತೆ…
ಕೋವಿಡ್ ಪ್ರೋಟೊಕಾಲ್​ಅನ್ನು ಅನುಸರಿಸಿ ಮಾಡುತ್ತಿರುವ ಈ ಪ್ರದರ್ಶನದ ವೇಳೆ ರಾಜ್ಯ ಸರ್ಕಾರದ ಕೋವಿಡ್ ಪರೀಕ್ಷೆ ಮತ್ತು ಕ್ವಾರಂಟೇನ್ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ಪಂತ್ ಹೇಳಿದ್ದಾರೆ. ಏರೋ ಇಂಡಿಯಾ 2021 ಶೋನಲ್ಲಿ 14 ದೇಶಗಳಿಂದ 78 ವಿದೇಶೀ ಪ್ರದರ್ಶಕರು ಮಾತ್ರ ಭಾಗವಹಿಸುತ್ತಿದ್ದಾರೆ. ಕರೊನಾ ಪೂರ್ವ 2019 ರ ಏರೋ ಇಂಡಿಯಾ 200 ವಿದೇಶಿ ವಾಣಿಜ್ಯ ಕಂಪೆನಿಗಳು ಭಾಗವಹಿಸಿದ್ದವು. 464 ಭಾರತೀಯ ಪ್ರದರ್ಶಕರು ನೋಂದಣಿ ಮಾಡಿಕೊಂಡಿದ್ದು, 105 ಪ್ರದರ್ಶಕರು ವರ್ಚುಯಲ್ ಆಗಿ ಭಾಗವಹಿಸಲಿದ್ದಾರೆ. ವರ್ಚುಯಲ್ ಎಕ್ಸಿಬಿಷನ್​ನಲ್ಲಿ 24 ಗಂಟೆಗಳೂ ಭಾಗವಹಿಸುವ ಅವಕಾಶವಿದೆಯಾದರೂ, ಕರೊನಾ ಹಿನ್ನೆಲೆಯಲ್ಲಿ ಏರ್ ಡಿಸ್​ಪ್ಲೇ ವಿಶುಯಲ್ ಏರಿಯಾಗೆ ಕೇವಲ 15,000 ಜನರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ ಎನ್ನಲಾಗಿದೆ.(ಏಜೆನ್ಸೀಸ್)
ಮತ್ತೆ ಸೇನೆಯ ಹಿಡಿತಕ್ಕೆ ಜಾರಿದ ಮ್ಯಾನ್ಮಾರ್… ಚುನಾಯಿತ ನಾಯಕರು ಬಂಧನದಲ್ಲಿ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
