ಬಾಲಸೋರ್​: ಮೀನುಗಾರಿಕೆಗೆ ಬಂಗಾಳ ಕೊಲ್ಲಿ ಬಾಗದ ಸಮುದ್ರಕ್ಕೆ ತೆರಳಿದ ಒಡಿಶಾದ ಬಾಲಸೋರ್ ಜಿಲ್ಲೆಯ ಮೀನುಗಾರರಿಗೆ ಭಾರಿ ಅಚ್ಚರಿಯೊಂದು ಕಾದಿತ್ತು. ಮೀನು ಹಿಡಿಯುವುದಕ್ಕಾಗಿ ಅವರು ಬೀಸಿದ ಬಲೆಯಲ್ಲಿ ಭಾರಿ ಅಚ್ಚರಿಯೊಂದು ಕಾದಿತ್ತು. ಅವರು ಸೋಮವಾರ ಆಳ ಸಮುದ್ರ ಮೀನುಗಾರಿಕೆ ನಡೆಸುವುದಕ್ಕಾಗಿ ತೆರಳಿದ್ದಾಗ ಈ ಅಚ್ಚರಿ ಎದುರಾಗಿದೆ.
ಬಲೆಗೆ ಏನೋ ಬಿದ್ದಂತಾದ ಅನುಭವವಾದ ಕಾರಣ ಕೂಡಲೇ ಬಲೆಯನ್ನು ಮೇಲೆಳೆಯಲು ಆರಂಭಿಸಿದರು. ಆಗ ಆರಂಭದಲ್ಲಿ ಕಾಣಿಸಿದ್ದು ಕೆಂಪು ಬಣ್ಣ ಕಾಣಿಸಿತು. ನಂತರ ಹಳದಿ ಮೂತಿ ಕಾಣಿಸಿತು. ತೂಕ 50 ಕಿಲೋ ಇರಬಹುದು ಎಂದು ಮೇಲೆತ್ತಿದ್ದವರಿಗೆ ನಿಜಕ್ಕೂ ಶಾಕ್ ! ಅದು ಬಾಂಬ್ ಇರಬಹುದೆಂದು ಆತಂಕಕ್ಕೆ ಈಡಾದ ಅವರು ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದರು.
ಇದನ್ನೂ ಓದಿ:ತಪ್ಪಿದ ಟ್ರಂಪ್ ವಿಮಾನ ಅಪಘಾತ
ಅಧಿಕೃತರು ಬಂದು ಪರಿಶೀಲಿಸಿದಾಗ, ಅದು ಮಾನವ ರಹಿತ ವಾಯುನೌಕೆ(ಯುಎವಿ) ಎಂಬುದನ್ನು ಖಚಿತ ಪಡಿಸಿದರು. ಮೀನುಗಾರರಿಂದ ಮಾಹಿತಿ ಪಡೆದ ಬಳಿಕ, ಅವರು ಮೀನುಗಾರಿಕೆ ನಡೆಸಿದ ಸ್ಥಾಳ ಇಂಟೆಗ್ರೇಟೆಡ್​ ಟೆಸ್ಟ್ ರೇಂಜ್​ಗೆ ಸಮೀಪವೇ ಇತ್ತು ಎಂಬುದನ್ನು ಖಾತರಿಪಡಿಸಿಕೊಂಡರು. ಭಾರತೀಯ ವಾಯುಪಡೆ ತರಬೇತಿ ವೇಳೆ ಸರ್ಫೇಸ್ ಟು ಏರ್ ಮತ್ತು ಏರ್ ಟು ಏರ್ ಕ್ಷಿಪಣಿ ಮತ್ತು ವೆಪನ್​ ಸಿಸ್ಟಮ್​ ಪರೀಕ್ಷೆ ನಡೆಸುವಾಗ ಇದನ್ನು ಬಳಸಿರುತ್ತದೆ. ಆಗ ಇದು ಸಮುದ್ರದಲ್ಲಿ ಬಿದ್ದಿರಬೇಕು ಎಂದು ಸೇನೆಯ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಆಯುರ್ವೇದದ ವಿಶ್ವಾಸವರ್ಧನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + sixteen =
Remember me
