ಮುಂಬೈ:ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಮಾತನಾಡುತ್ತಿದ್ದ ಗ್ರಾಹಕರೊಬ್ಬರನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದ ಕಾರಣಕ್ಕೆ ಕೆಲಸದಿಂದ ಅಮಾನತ್ತಾಗಿದ್ದ ಉಬರ್​ ಕಾರು ಚಾಲಕ ಮರಳಿ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ.
ಕ್ಯಾಬ್​ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿ ಚಾಲಕ ರೋಹಿತ್​ ಗೌರ್​ ಎಂಬಾತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಕಳೆದ ಗುರುವಾರ ಕವಿ ಹಾಗೂ ಕಾರ್ಯಕರ್ತ ಬಪ್ಪದಿತ್ಯಾ ಸರ್ಕಾರ್​ ಎಂಬುವರು ಸಿಎಎ ವಿರುದ್ಧ ಮಾತನಾಡುವುದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡು, ಬಳಿಕ ಅವರನ್ನು ಶಾಂತಾಕ್ರಜ್​ ಪೊಲೀಸ್​ ಠಾಣೆಗೆ ಕರೆದೊಯ್ದು ಬಂಧಿಸುವಂತೆ ಹೇಳಿದ್ದರು. ಬಳಿಕ ಮುಂಬೈ ಪೊಲೀಸರು ರಾತ್ರಿ 1 ಗಂಟೆಯವರೆಗೂ ವಿಚಾರಣೆ ನಡೆಸಿ ಯಾವುದೇ ಪ್ರಮಾದ ಇಲ್ಲದಿದ್ದರಿಂದ ಬಿಟ್ಟು ಕಳುಹಿಸಿದ್ದರು.
ಬಳಿಕ ಉಬರ್​ ಕಂಪನಿ ಚಾಲಕ ನೋಂದಣಿ ಮಾಡಿಕೊಂಡಿದ್ದ ಆ್ಯಪ್​ನ್ನು ತನಿಖಾ ದೃಷ್ಟಿಯಿಂದ ನಿಯಮಿತ ಸಮಯದವರೆಗೂ ಅಂದರೆ 48 ರಿಂದ 72 ಗಂಟೆಗಳವರೆಗು ನಿಷೇಧಿಸಿತ್ತು.​ ನಮ್ಮ ಗ್ರಾಹಕರ ಸುರಕ್ಷಿತ ದೃಷ್ಟಿಯಿಂದ ಈ ರೀತಿ ಮಾಡಬೇಕಾಯಿತು ಎಂದು ಉಬರ್​ ವಕ್ತಾರ ಹೇಳಿದ್ದರು. ವಿಶೇಷವೆಂದರೆ ಈ ಪ್ರಕರಣ ಬೆನ್ನಲ್ಲೇ ಮುಂಬೈ ಬಿಜೆಪಿ ಚಾಲಕನಿಗೆ ಅಲರ್ಟ್ ಸಿಟಿಜನ್​ ಅವಾರ್ಡ್​​ ನೀಡಿ​ ಸನ್ಮಾನವನ್ನು ಮಾಡಿತ್ತು.
ಇದೀಗ ಗೌರ್​ ಮರಳಿ ಕೆಲಸಕ್ಕೆ ಸೇರ್ಪಡೆಯಾಗಿದ್ದು, ಸದ್ಯ ಆತನನ್ನು ಸೂಕ್ಷ್ಮತೆ ಗ್ರಹಿಕೆ ತರಗತಿಗೆ ಕಳುಹಿಸಲಾಗುತ್ತಿದೆ. ಗ್ರಾಹಕರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಲು ಹಾಗೂ ಶಿಷ್ಟಾಚಾರ ಪಾಲಿಸುವುದರ ಕಡೆ ಗಮನ ಹರಿಸುವ ಸಲುವಾಗಿ ಆತನಿಗೆ ತರಬೇತಿ ನೀಡಲಾಗುತ್ತಿದೆ. ಆ್ಯಪ್​ ಆಧಾರದ ಟ್ಯಾಕ್ಸಿ ಸೇವೆ ಆರಂಭಕ್ಕೂ ಮುನ್ನ ಇದು ಎಲ್ಲ ಚಾಲಕರಿಗೂ ಕಡ್ಡಾಯವಾಗಿದೆ ಎಂದು ಉಬರ್​ ವಕ್ತಾರ ತಿಳಿಸಿದ್ದಾರೆ.
ಉತ್ತಮ ಗುಣಮಟ್ಟದ ಸೇವೆ ನೀಡಲು ನಾವು ಪ್ರತಿದಿನ ಪ್ರಯತ್ನಿಸುತ್ತಿದ್ದೇವೆ. ನಮ್ಮೊಳಗಿನ ಮೌಲ್ಯಮಾಪನ ಮಾಡಿಕೊಂಡು ನಮ್ಮ ಗುಣಮಟ್ಟವನ್ನು ಮುಟ್ಟಲು ನಮ್ಮ ನೀತಿ ಮತ್ತು ಸಮುದಾಯ ಮಾರ್ಗದರ್ಶಿಯೊಂದಿಗೆ ಸೂಕ್ಷ್ಮತೆ ಗ್ರಹಿಕೆ ತರಗತಿಗಳಿಗೆ ಚಾಲಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × 2 =
Remember me
